– ರಾಜ್ಯದಲ್ಲಿ ನೈಟ್ ಕರ್ಫ್ಯೂ, ಹೊಸ ವರ್ಷ ಆಚರಣೆ ಇಲ್ಲ
ಬೆಂಗಳೂರು: ಹೊಸ ಬ್ರಿಟನ್ ಕೊರೊನಾ ವೈರಸ್ ಚೆನ್ನೈಗೆ ಬಂದ ವ್ಯಕ್ತಿಯೊಬ್ಬರಿಗೆ ಬಂದಿದೆ ಎನ್ನಲಾಗ್ತಿದೆ. ಈ ಬಗ್ಗೆ ಎಷ್ಟು ಕಟ್ಟೆಚ್ಚರ ತೆಗೆದುಕೊಂಡ್ರೆ ಕಡಿಮೆ ಎಂದು ಸಿಎಂ ಬಿ.ಎಸ್.ಯಡಿಯೂಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಗೃಹ ಕಚೇರಿ ಕೃಷ್ಣಾದ ಆವರಣದಲ್ಲಿ ವಿದ್ಯುತ್ ಚಾಲಿತ ಆಟೋಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಈ ಹೊಸ ವೈರಸ್ ಇಡೀ ರಾಜ್ಯ ಮತ್ತು ದೇಶಕ್ಕೆ ಆತಂಕವುನ್ನುಂಟು ಮಾಡಿದೆ. ಚೆನ್ನೈಗೆ ಬಂದಂತಹ ವ್ಯಕ್ತಿಗೆ ಈ ಸೋಂಕು ಬಂದಿದೆ ಅಂತ ಗೊತ್ತಾಗಿದೆ. ವಿದೇಶಗಳಿಂದ ಬರೋವರರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೂರು ದೇಶಗಳಿಂದ ಬರೋರಿಗೆ ಕಡ್ಡಾಯ 7 ದಿನ ಹೋಂ ಐಸೋಲೇಶನ್ – ಸಚಿವ ಸುಧಾಕರ್
Advertisement
Advertisement
ದೇಶಾದ್ಯಂತ ಈ ಬಗ್ಗೆ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರಧಾನಿ ಮೋದಿಯವರು ಹೊಸ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿ ದೇಶದ ಜನತೆ ಎಚ್ಚರಿಕೆಯಿಂದಿರಬೇಕೆಂದು ತಿಳಿಸಿದ್ದಾರೆ. ನಾವು ಸೋಂಕು ಹರಡದಂತೆ ಕಟ್ಟೆಚ್ಚರ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಈ ಬಾರಿ ಹೊಸ ವರ್ಷದ ಆಚರಣೆಯೇ ಇಲ್ಲ. ಈ ರೀತಿಯ ಹಲವು ಕಾರಣಗಳಿಂದ ಹೊಸ ವರ್ಷ ಆಚರಣೆ ಬೇಡ ಅಂತ ಜನತೆಗೆ ಹೇಳಿದ್ದೇವೆ. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಮಹರಾಷ್ಟ್ರದಲ್ಲಿ ನೈಟ್ ಕರ್ಫ್ಯೂ-ವಿದೇಶದಿಂದ ಬರುವವರಿಗೆ 14 ದಿನ ಕಡ್ಡಾಯ ಕ್ವಾರಂಟೈನ್