ಅಬುಧಾಬಿ: ಪ್ರತಿ ಬಾರಿ ಐಪಿಎಲ್ ಟೂರ್ನಿಯಲ್ಲಿ ವಿಶೇಷ ಬಣ್ಣದ ಜರ್ಸಿಯೊಂದಿಗೆ ಕಣಕ್ಕಿಳಿಯುವ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡ ಈ ಬಾರಿ ಹಸಿರು ಬಣ್ಣದ ಜರ್ಸಿಯೊಂದಿಗೆ ಚೆನ್ನೈ ವಿರುದ್ಧ ಆಡಲಿದೆ.
ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡದ ಆಟಗಾರರು ಹಸಿರು ಬಣ್ಣದ ಜರ್ಸಿ ಧರಿಸಲಿದ್ದಾರೆ. ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿರುವ ಆರ್ ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದರನ್ನು ಪೋಸ್ಟ್ ಮಾಡಿದೆ.
Advertisement
Advertisement
ವಿಶ್ವದಲ್ಲಿ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ತಂಡದ ಹಸಿರು ಬಣ್ಣದ ಜರ್ಸಿ ಧರಿಸುತ್ತಿದೆ. ವಿಡಿಯೋದಲ್ಲಿ ಈ ಕುರಿತು ಮನವಿ ಮಾಡಿರುವ ಆರ್ ಸಿಬಿ ಆಟಗಾರರು, ಪರಿಸರವನ್ನು ರಕ್ಷಣೆ ಮಾಡಲು ಪ್ರತಿಯೊಬ್ಬರು ತಮ್ಮ ಕೈಲಾದ ಕಾರ್ಯವನ್ನು ಮಾಡಬೇಕಿದೆ. ಮುಖ್ಯವಾಗಿ ಪ್ಲಾಸ್ಟಿಕ್ ವ್ಯರ್ಥಗಳನ್ನು ಮರುಬಳಕೆ ಮಾಡಿ. ಮಕ್ಕಳಿಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಎಬಿ ಡಿವಿಲಿಯರ್ಸ್ ಮನವಿ ಮಾಡಿದ್ದಾರೆ.
Advertisement
ಚಿಕ್ಕ ಚಿಕ್ಕ ಕೆಲಸಗಳನ್ನು ತಪ್ಪದೇ ಮಾಡುವುದರಿಂದ ಪರಿಸರವನ್ನು ನಾವು ಕಾಪಾಡಬಹುದಾಗಿದೆ. ಭೂಮಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ, ಮರಗಳನ್ನು ಬೆಳಸಿ ಹಸಿರು ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದು ಫಿಂಚ್, ಡೇಲ್ ಸ್ಟೇಯ್ನ್ ಕರೆ ನೀಡಿದ್ದಾರೆ.
Advertisement
2011 ರಿಂದಲೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೋ ಗ್ರೀನ್ ಕಾರ್ಯಕ್ರಮವನ್ನು ನಡೆಸಿಕೊಳ್ಳುತ್ತಾ ಬರುತ್ತಿದೆ. ಪರಿಸರವನ್ನು ಕಾಪಾಡಿಕೊಂಡರೇ ಮಾತ್ರ ಎಲ್ಲರೂ ಉತ್ತಮ ಆರೋಗ್ಯಕಾರ ಜೀವನ ನಡೆಸುತ್ತೇವೆ. ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್ನಿಂದ ಧೋನಿ ನಿವೃತ್ತಿ?- ಮುನ್ಸೂಚನೆಗಳಿವೆ ಎಂದ ಫ್ಯಾನ್ಸ್
Bold Diaries: RCB Go Green Initiative
RCB players will sport the Green Jerseys against CSK tomorrow to spread awareness about keeping the planet clean and healthy.#PlayBold #IPL2020 #WeAreChallengers #Dream11IPL pic.twitter.com/jW6rUqWW62
— Royal Challengers Bangalore (@RCBTweets) October 24, 2020