ಬೀಜಿಂಗ್: ಕೊರೊನಾ ವೈರಸ್ನ ಸೃಷ್ಟಿ ದೇಶ ಚೀನಾದಲ್ಲಿ ಈಗ ಮತ್ತೊಂದು ವೈರಸ್ನ ಹಾವಳಿ ಆರಂಭಗೊಂಡಿದ್ದು, ಈಗಾಗಲೇ 7 ಮಂದಿಯನ್ನು ಬಲಿ ಪಡೆದುಕೊಂಡಿದೆ.
ಚೀನಾದ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದ್ದು, ಜಿಯಾಂಗ್ಸು ಮತ್ತು ಅನ್ಹುಯಿ ಪ್ರಾಂತ್ಯಗಳಲ್ಲಿ ಈಗಾಗಲೇ ಈ ವೈರಸ್ನಿಂದ 60 ಮಂದಿ ಸೋಂಕಿತರಾಗಿದ್ದಾರೆ ಎಂದು ತಿಳಿಸಿದೆ.
Advertisement
Advertisement
ಈ ವೈರಸನ್ನ ಎಸ್ಎಫ್ಟಿಎಸ್ವಿ(ಸೀವಿಯರ್ ಫೀವರ್ ವಿಥ್ ಥ್ರೋಂಬೊ ಬೊಕ್ಯಾಟೋಪಿನಿಯಾ ಸಿಂಡ್ರೋಮ್ ಬುನಿವೈರಸ್) ಎಂದು ಕರೆಯಲಾಗಿದ್ದು, ಕೀಟಗಳ ಕಡಿತದ ಮೂಲಕ ಈ ವೈರಸ್ ಮನುಷ್ಯರಿಗೆ ಹರಡಿರುವ ಸಾಧ್ಯತೆ ಎಂದು ಹೇಳಿದೆ. ಈ ವೈರಸ್ ಅಪಾಯಕಾರಿ ಮಟ್ಟದಲ್ಲಿ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವೈದ್ಯರು ಈಗಾಗಲೇ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಚೀನಾ ಸರ್ಕಾರವನ್ನು ಟೀಕಿಸಿದ್ದ ಜನಪ್ರಿಯ ಉದ್ಯಮಿ ಕಣ್ಮರೆ
Advertisement
Advertisement
ಮೊದಲ ವರ್ಷದ 6 ತಿಂಗಳ ಒಳಗಡೆ 37 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡರೆ ನಂತರ 23 ಮಂದಿಯಲ್ಲಿ ಕಾಣಿಸಿಕೊಂಡಿದೆ. ಆರಂಭದಲ್ಲಿ ತಿಗಣೆ ರೀತಿಯ ಕೀಟಗಳಿಂದ ಮನುಷ್ಯರಿಗೆ ಹಬ್ಬುವ ಈ ವೈರಸ್ ಬಳಿಕ ಒಬ್ಬರಿಂದ ಒಬ್ಬರಿಗೆ ಪಸರಿಸುತ್ತದೆ. ಕೋವಿಡ್ 19ನಂತೆ ಈ ವೈರಸ್ ಪೀಡಿತ ವ್ಯಕ್ತಿಗೆ ಜ್ವರ ಹಾಗೂ ಕೆಮ್ಮು ಬರುತ್ತದೆ. ರಕ್ತದಲ್ಲಿ ಲ್ಯುಕ್ಟೋಸೈಟ್ ಹಾಗೂ ಪ್ಲೇಟ್ಲೆಟ್ಗಳ ಪ್ರಮಾಣ ಕಡಿಮೆ ಆಗುತ್ತದೆ. ಇದನ್ನೂ ಓದಿ: ಕೋವಿಡ್ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ
ಚೀನಾದಲ್ಲಿ ಈ ವೈರಸ್ ಹೊಸತು ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2011ರಲ್ಲೇ ಈ ವೈರಸ್ ಪತ್ತೆ ಆಗಿದ್ದು, ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಕೊರೊನಾದಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಮೃತಪಡುವ ಸಾಧ್ಯತೆ ಹೆಚ್ಚಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸೋಂಕಿತರು ಸಾವನ್ನಪ್ಪುವ ಪ್ರಮಾಣ ಶೇ.30ಕ್ಕಿಂತಲೂ ಹೆಚ್ಚಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ವುಹಾನ್ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್
ಜಿಯಾಂಗ್ಸು ಪ್ರಾಂತ್ಯದ ಮಹಿಳೆಗೆ ಮೊದಲ ಸೋಂಕಿತೆಯಾಗಿದ್ದು, ಆರಂಭದಲ್ಲಿ ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಆರಂಭದಲ್ಲಿ ಕಂಡುಬಂದಿದೆ. ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳು ಚಿಕಿತ್ಸೆ ಪಡೆದ ಬಳಿಕ ಆಕೆ ಗುಣಮುಖಳಾಗಿ ತೆರಳಿದ್ದಾಳೆ.