ಹೈದರಾಬಾದ್: ಚಿರತೆ ದಾಳಿಯಿಂದ ಓರ್ವ ಟ್ರಕ್ ಚಾಲಕನನ್ನು ನಾಯಿಗಳು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ನ ಕಟೇಡನ್ನಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.
Advertisement
Advertisement
ಚಿರತೆಯನ್ನು ನೋಡಿ ಇಬ್ಬರು ಟ್ರಕ್ ಚಾಲಕರು ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ. ಈ ಪೈಕಿ ಓರ್ವ ಟ್ರಕ್ ಏರಿ ಕೂರುತ್ತಾನೆ. ಮತ್ತೊಬ್ಬ ಶೆಡ್ ಒಳಗೆ ಹೋಗಲು ಯತ್ನಿಸಿ ವಿಫಲನಾಗಿ ತಕ್ಷಣವೇ ಟ್ರಕ್ ಏರಲು ಮುಂದಾಗುತ್ತಾರೆ. ಈ ವೇಳೆ ದಾಳಿ ನಡೆಸಿ ಚಿರತೆ ಆತನ ಪ್ಯಾಂಟ್ ಹಿಡಿದು ಎಳೆಯಲು ಆರಂಭಿಸುತ್ತದೆ. ಇದನ್ನು ನೋಡಿದ ಕೆಲ ನಾಯಿಗಳು ಚಿರತೆಯ ಮೇಲೆ ದಾಳಿ ನಡೆಸಿ ಟ್ರಕ್ ಚಾಲಕನನ್ನು ರಕ್ಷಿಸುತ್ತವೆ.
Advertisement
https://twitter.com/ParveenKaswan/status/1261620405648982016
Advertisement
ಚಿರತೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಶೆಟ್ ಒಳಗೆ ನುಗ್ಗಲು ಯತ್ನಿಸುತ್ತದೆ. ಅದು ಸಾದ್ಯವಾಗದೇ ಇದ್ದಾಗ ಚಿರತೆ ನಾಯಿಗಳನ್ನು ಭಯ ಮೂಡಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ಪರ್ವೀನ್ ಕಸ್ವಾನ್ ಅವರು ಟ್ವೀಟ್ ಮಾಡಿದ ಈ ವಿಡಿಯೋವನ್ನು 23 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
“ಇದು ಅರಣ್ಯನಾಶದ ಪರಿಣಾಮ. ಅರಣ್ಯ ವ್ಯಾಪ್ತಿಯು ಕಣ್ಮರೆಯಾಗುತ್ತಿದೆ. ಹೀಗಾಗಿ ಕಾಡು ಪ್ರಾಣಿಗಳು ಅರಣ್ಯದಿಂದ ಹೊರ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.