– ಗಂಗಾವತಿ, ಸೊಂಡೂರಿನಲ್ಲಿ ಸುತ್ತಾಡಿದ್ದ ಡ್ರೈವರ್
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಸೋಂಕು ಆಟೋದಲ್ಲಿ ಸುತ್ತಾಡಿದ್ದು ಜನ ಭಯಭೀತಗೊಂಡಿದ್ದಾರೆ. ಆಟೋ ಚಾಲಕನಿಗೆ ಪಾಸಿಟಿವ್ ಬಂದಿದ್ದು, ಯಾರಿಗೆಲ್ಲಾ ಸೋಂಕು ಹಂಚಿದ್ದಾರೋ ಎಂಬ ಆತಂಕ ಮನೆ ಮಾಡಿದೆ.
Advertisement
ಚಿತ್ರದುರ್ಗದ ಸ್ವಾಮಿವಿವೇಕಾನಂದ ನಗರದಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸದ್ಯ ಸೀಲ್ಡೌನ್ಗೆ ಒಳಗಾಗಿದೆ. 27 ವರ್ಷದ ಆಟೋ ಚಾಲಕನಿಗೆ ಸೋಂಕು ವಕ್ಕಿರಿಸಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಆಟೋ ಚಾಲಕ ತನ್ನ ಸಂಬಂಧಿಗಳ ಊರುಗಳಾದ ಕೊಪ್ಪಳದ ಗಂಗಾವತಿ ಹಾಗೂ ಸೊಂಡೂರಿನಲ್ಲಿ ಸುತ್ತಾಡಿದ್ದನು. ಕಳೆದ 15 ದಿನಗಳ ಹಿಂದೆ ಗಂಗಾವತಿಯಲ್ಲಿ ಈತನಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಫಲಿತಾಂಶ ಬರುವ ಮುನ್ನವೇ ಕೋಟೆನಾಡಿಗೆ ಆಗಿಮಿಸಿದ್ದನು. ಕೊರೊನಾ ರಿಪೋರ್ಟ್ ಬರುತ್ತಿದಂತೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಏರಿಯಾದಲ್ಲಿ ಜನ ಸೋಂಕಿನ ಭಯದಲ್ಲಿ ಹೊರಬರುತ್ತಿಲ್ಲ.
Advertisement
Advertisement
ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿ 16 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಆತನಿಗೆ ಕೊಪ್ಪಳದಲ್ಲೇ ಸ್ವಾಬ್ ಟೆಸ್ಟ್ ಮಾಡಿದ್ದು ಕೊರೊನಾ ದೃಢಪಟ್ಟಿರುವುದನ್ನು ಅಲ್ಲಿನ ಆರೋಗ್ಯ ಇಲಾಖೆ ನಮಗೆ ತಿಳಿಸಿದೆ. ವಿಷ್ಯ ತಿಳಿಯುತ್ತಿದಂತೆ ಏರಿಯಾವನ್ನು ಸಹ ಸೀಲ್ ಡೌನ್ ಮಾಡಲಾಗಿದೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಡಿಎಚ್ಓ ಹೇಳ್ತಿದ್ದಾರೆ. ಒಟ್ಟಿನಲ್ಲಿ ಸ್ಥಳೀಯರ ಒತ್ತಾಯದಂತೆ ಜಿಲ್ಲಾಡಳಿತ ರ್ಯಾಂಡಮ್ ಡೆಸ್ಟ್ ಗೆ ಮುಂದಾಗುತ್ತೋ ನೋಡಬೇಕು.