ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಗಣಿ ಪ್ರದೇಶದಲ್ಲಿ ಕಳೆದ ರಾತ್ರಿ ರಾಶಿ ರಾಶಿ ಸ್ಫೋಟಕಗಳ ಪತ್ತೆಯಾಗಿವೆ. ಮುತ್ತಗದಹಳ್ಳಿ ಗ್ರಾಮದ ಬಳಿಯ ಟಿ.ಎಸ್.ಕೆ ಕ್ರಷರ್ ಪಕ್ಕದ ಕಾಲುವೆಯಲ್ಲಿ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.
Advertisement
ಮಾಹಿತಿ ಅರಿತು ಮಧ್ಯರಾತ್ರಿ ಬಾಂಬ್ ನಿಷ್ಕ್ರಿಯ ದಳದ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಜಿಲೆಟಿನ್ ಕಡ್ಡಿಗಳನ್ನ ನಿಷ್ಕ್ರಿಯ ಮಾಡುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಿರುವ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್, ಕಾಲುವೆ ಬಳಿ ಅಪರಿಚಿತರು ಜಿಲೆಟಿನ್ ಕಡ್ಡಿ ಹಾಗೂ ಸ್ಫೋಟಕಗಳನ್ನ ಬಿಸಾಡಿದ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ತಿಳಿದು ಎಲ್ಲವನ್ನ ವಿಲೇವಾರಿ ಮಾಡಲಾಗಿದೆ. ಅಕ್ರಮವಾಗಿ ದಾಸ್ತಾನು ಮಾಡಿರುವವರು ಈಗ ಹಿರೇನಾಗವಲ್ಲಿ ಘಟನೆ ನಂತರ ಬಿಸಾಡಿ ಹೋಗಿರಬಹುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
Advertisement
Advertisement
ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ, ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಫೋಟದ ಬಳಿಕ ನಾಗರಾಜು ರೆಡ್ಡಿ ತಲೆಮರೆಸಿಕೊಂಡಿದ್ದನು. ನಾಗರಾಜು ರೆಡ್ಡಿಗೆ ಸ್ಫೋಟಕಗಳನ್ನ ಪೂರೈಸುತ್ತಿದ್ದ ಗಣೇಶ್ ಎಂಬಾತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬುಧವಾರ ಎ2 ಆರೋಪಿ, ಕ್ರಷರ್ ಮಾಲಿಕ ರಾಘವೇಂದ್ರ ರೆಡ್ಡಿಯನ್ನು ಬಂಧಿಸಲಾಗಿತ್ತು. ದುರಂತ ಸಂಬಂಧ ಕರ್ತವ್ಯಲೋಪದ ಆರೋಪದ ಮೇಲೆ ಗುಡಿಬಂಡೆ ಎಸ್ಐ ಗೋಪಾಲ್ ರೆಡ್ಡಿ, ಇನ್ಸ್ಪೆಕ್ಟರ್ ಮಂಜುನಾಥ್ರನ್ನು ಅಮಾನತು ಮಾಡಲಾಗಿದೆ.
Advertisement