– ರಾಯಚೂರು ಒಪೆಕ್ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ
ರಾಯಚೂರು: ಚಿಕಿತ್ಸೆ ಸಿಗದೇ ಒದ್ದಾಡಿ ರಕ್ತಸ್ರಾವವಾಗಿದ್ದ ಗರ್ಭಿಣಿಗೆ ಇಂದು ಗರ್ಭಪಾತವಾಗಿದೆ.
ರಾಯಚೂರು ಕೋವಿಡ್ ಆಸ್ಪತ್ರೆಯಲ್ಲಿನ ಸೋಂಕಿತ ಗರ್ಭಿಣಿಗೆ ಗರ್ಭಪಾತವಾಗಿದೆ ಎಂದು ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ಮಾಹಿತಿ ನಿಡಿದ್ದಾರೆ.
Advertisement
Advertisement
3 ತಿಂಗಳ ಗರ್ಭಿಣಿ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದರು. ಸೋಮವಾರ ರಾತ್ರಿ ತೀವ್ರ ತಕ್ತಸ್ರಾವವಾಗಿ ಗರ್ಭಿಣಿ ನರಳಾಡಿದ್ದರು. ಭಾನುವಾರ ರಾತ್ರಿಯಿಂದಲೇ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
Advertisement
ಗರ್ಭಿಣಿಗೆ ಚಿಕಿತ್ಸೆ ನೀಡುವಂತೆ ಕೋವಿಡ್ ವಾರ್ಡ್ ನಲ್ಲಿದ್ದ ರೋಗಿಗಳು ಮಧ್ಯಾಹ್ನದ ಊಟ ಬಿಟ್ಟು ಪ್ರತಿಭಟನೆ ಮಾಡಿದ್ದರು. ರೋಗಿಗಳ ಆಕ್ರೋಶಕ್ಕೆ ಮಣಿದು ಗರ್ಭಿಣಿಯನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ತೀವ್ರ ರಕ್ತಸ್ರಾವದಿಂದ ಗರ್ಭಪಾತವಾಗಿದೆ. ಸೋಂಕಿತ ಮಹಿಳೆ ಚೇತರಿಸಿಕೊಳ್ಳುತ್ತಿದ್ದು ಯಾವುದೇ ಅಪಾಯವಿಲ್ಲ ಎಂಬುದಾಗಿ ತಿಳಿದುಬಂದಿದೆ.
Advertisement