ದುಬೈ: ಕ್ರಿಕೆಟ್ ಇತಿಹಾಸದಲ್ಲಿ ಎರಡು ಸೂಪರ್ ಓವರ್ ಕಂಡು ದಾಖಲೆ ಬರೆದ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಲ್ ಅವರ ಅತ್ಯುತ್ತಮ ಫೀಲ್ಡಿಂಗ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಮೊದಲ ಸೂಪರ್ ಓವರ್ನಲ್ಲಿ ಬ್ಯಾಟ್ ಮತ್ತು ಬೌಲ್ ಮಾಡಿದವರು ಎರಡನೇ ಸೂಪರ್ ಓವರ್ನಲ್ಲಿ ಬ್ಯಾಟ್, ಬೌಲ್ ಮಾಡುವಂತಿಲ್ಲ ಎಂಬ ನಿಯಮದ ಹಿನ್ನೆಲೆಯಲ್ಲಿ ಪಂಜಾಬ್ ಪರ ಕ್ರಿಸ್ ಜೋರ್ಡಾನ್ ಅವರು ಎರಡನೇ ಸೂಪರ್ ಓವರ್ ಬೌಲ್ ಮಾಡಿದರು.
Advertisement
Mayank u beauty ❣️❣️#MIvKXIP #IPLinUAE #MayankAgarwal #SuperOver pic.twitter.com/OPO8N65aoY
— Alok Srivastava???????????????? (@BrightBeast1) October 18, 2020
Advertisement
ಮೊದಲ ಬಾಲ್ ವೈಡ್ ಆದರೆ ನಂತರದ ಬಾಲಿನಲ್ಲಿ ಒಂದು ಸಿಂಗಲ್ ಬಂತು. ಎರಡನೇ ಬಾಲಿನಲ್ಲಿ ಒಂದು ರನ್ ಬಂತು. ಮೂರನೇ ಎಸೆತವನ್ನು ಕೀರನ್ ಪೊಲಾರ್ಡ್ ಬೌಂಡರಿಗಟ್ಟಿದರು. ನಾಲ್ಕನೇ ಎಸೆತ ಮತ್ತೆ ವೈಡ್ ಆಯ್ತು. ನಾಲ್ಕನೇ ಬಾಲ್ ಸಿಂಗಲ್ ಬಂದು ಹಾರ್ದಿಕ್ ಪಾಂಡ್ಯ ಔಟ್ ಆದರು. ಐದನೇ ಬಾಲ್ ಡಾಟ್ ಬಾಲ್ ಆಯ್ತು. ಇದನ್ನೂ ಓದಿ: ಪಂದ್ಯ ಟೈ ಆಗಿ ಸೂಪರ್ ಓವರ್ ಗೆ ಹೋಗಿದ್ದು ಹೇಗೆ?
Advertisement
ಮಯಾಂಕ್ ಅಗರ್ವಾಲ್ ಎಂಬ ಸೂಪರ್ ಮ್ಯಾನ್.. ಎಂತಹ save ಅದು.. ???????? pic.twitter.com/LxyHKevluH
— adarsha um (@AdarshaUm) October 18, 2020
Advertisement
ಸ್ಟ್ರೈಕ್ನಲ್ಲಿದ್ದ ಕೊನೆಯ ಎಸೆತವನ್ನು ಕೀರನ್ ಪೋಲಾರ್ಡ್ ಸಿಕ್ಸರ್ ಅಟ್ಟಲು ಬಲವಾಗಿ ಹೊಡೆದರು. ಚೆಂಡು ಸಿಕ್ಸ್ಗೆ ಹೋಗುತ್ತದೆ ಎನ್ನುವಷ್ಟರಲ್ಲಿ ಬೌಂಡರಿ ಗೆರೆ ಬಳಿ ಇದ್ದ ಮಯಾಂಕ್ ಜಿಗಿದು ಬಾಲನ್ನು ತಡೆದು ಎಸೆದರು. 4ರನ್ ತಡೆದ ಪರಿಣಾಮ ಮುಂಬೈ 11 ರನ್ ಗಳಿಸಿತು.
Incredible save from Mayank Agarwal. He may have won the match for his team already.#MIvsKXIP #IPL2020 pic.twitter.com/tzaZ7jDYBf
— ???????????????? ???????????????????????? (@SivaHarsha_23) October 18, 2020
ಒಂದು ವೇಳೆ ನೇರವಾಗಿ ಸಿಕ್ಸ್ ಹೋಗುತ್ತಿದ್ದರೆ ಅಥವಾ ತಡೆಯುವ ಪ್ರಯತ್ನದಲ್ಲಿ ಕೈಗೆ ಸಿಕ್ಕಿ ಬಾಲ್ ಬೌಂಡರಿ ಗೆರೆ ದಾಟುತ್ತಿದ್ದರೆ ಕ್ರಿಸ್ ಗೇಲ್ ಮತ್ತು ಮಯಾಂಕ್ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ ಮಯಾಂಕ್ ಅವರ ಅತ್ಯುತ್ತಮ ಫೀಲ್ಡಿಂಗ್ ಪಂದ್ಯವನ್ನೇ ಬದಲಾಯಿಸಿ ಬಿಟ್ಟಿತು. 4 ರನ್ ಸೇವ್ ಮಾಡಿ ಕೇವಲ 2 ರನ್ ನೀಡಿದ ಮಯಾಂಕ್ ಅವರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Before calling IPL scripted, think about the effort these players are putting in the game!!????????
What a save by Mayank Agarwal???????? pic.twitter.com/x4mlo9uxTr
— अ????????????????45♡???????? (@daddyissue45_) October 18, 2020
11 ರನ್ಗಳ ಗುರಿಯನ್ನು ಪಡೆದ ಪಂಜಾಬ್ ಪರ ಆಟವಾಡಲು ಗೇಲ್ ಮತ್ತು ಅಗರ್ವಾಲ್ ಕ್ರೀಸಿಗೆ ಬಂದರು. ಮುಂಬೈ ಪರ ಟ್ರೆಂಟ್ ಬೌಲ್ಟ್ ಬೌಲ್ ಮಾಡಿದರು. ಮೊದಲ ಬಾಲನ್ನೇ ಕ್ರಿಸ್ ಗೇಲ್ ಸಿಕ್ಸರ್ ಗೆ ಅಟ್ಟಿದರು. ನಂತರ ಎರಡನೇ ಬಾಲನ್ನು ಗೇಲ್ ಅವರು ಸಿಂಗಲ್ ತೆಗೆದುಕೊಂಡರು. ನಂತರ ಮೂರನೇ ಬಾಲನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬೌಂಡರಿಗಟ್ಟಿದರು. ನಂತರ ಒಂದು ರನ್ ಬೇಕಿದ್ದಾಗ ನಾಲ್ಕನೇ ಬಾಲನ್ನು ಕೂಡ ಮಯಾಂಕ್ ಬೌಂಡರಿ ಕಳುಹಿಸಿ ಪಂಜಾಬ್ಗೆ ಜಯ ತಂದುಕೊಟ್ಟರು.
https://twitter.com/ShivamChatak/status/1317903973290893312