ಬೆಂಗಳೂರು: ಫುಡ್ ಡೆಲಿವರಿ ತಡವಾಗಿಕೊಟ್ಟಿದ್ದು ಅಲ್ಲದೆ, ಮಹಿಳೆಗೆ ರಕ್ತ ಬರುವಂತೆ ಹೊಡೆದಿದ್ದ ಜೊಮ್ಯಾಟೊ ಸಿಬ್ಬಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕಾಮರಾಜ್ ಆಗಿದ್ದಾನೆ. ಈತ ಫುಡ್ ಆರ್ಡರ್ ಮಾಡಿದ್ದ ಹಿತೇಶಾ ಚಂದ್ರಾಣಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಇಲೆಕ್ಟ್ರಾನಿಕ್ ಪೊಲೀಸರು ಡೆಲಿವರಿಬಾಯ್ನನ್ನು ಬಂಧಿಸಿದ್ದಾರೆ.
Advertisement
Advertisement
ಏನಿದು ಘಟನೆ?
ಮಂಗಳವಾರ ಮಧ್ಯಾಹ್ನ ಚಂದ್ರಾಣಿ ಜೊಮ್ಯಾಟೊದಲ್ಲಿ ಊಟವನ್ನು ಆರ್ಡರ್ ಮಾಡಿದ್ದಾರೆ. ಮಧ್ಯಾಹ್ನ 3:30ರ ಸುಮಾರಿಗೆ ಊಟ ಡೆಲಿವರಿ ಆಗುವುದಾಗಿ ಆ್ಯಪ್ನಲ್ಲಿ ತಿಳಿಸಲಾಗಿತ್ತು. ಆದರೆ ಡೆಲಿವರಿ ಬಾಯ್ ಕಾಮರಾಜ್ 4:30ಕ್ಕೆ ಬಂದಿದ್ದಾನೆ. ಊಟ ಬರುವುದು ತಡವಾಗಿದೆ ಎಂದು ಯುವತಿ ಜೊಮ್ಯಾಟೊ ತಿಳಿಸಿ ಆರ್ಡರ್ ರದ್ದು ಮಾಡಿದ್ದರು. ನಂತರ ಡೆಲಿವರಿ ಬಾಯ್ ಊಟ ಹಿಡಿದುಕೊಂಡು ಮನೆ ಬಾಗಿಲಿಗೆ ಬಂದಿದ್ದಾನೆ. ಆರ್ಡರ್ ಅನ್ನು ನಾನು ಕ್ಯಾನ್ಸಲ್ ಮಾಡಿದ್ದೇನೆ ಎಂದು ಹಿತೇಶಾ ತಿಳಿಸಿದ್ದಾರೆ ಈ ವೇಳೆ ಕೋಪಗೊಂಡ ಕಾಮರಾಜ್ ಬಾಗಿಲನ್ನು ದೂಡಿ ಮನೆಯೊಳಗೆ ನುಗ್ಗಿ ಊಟವನ್ನು ಇಟ್ಟು ಬಂದಿದ್ದಾನೆ.
Advertisement
Karnataka: A delivery man of Zomato (in photo) has been booked and arrested for allegedly attacking a woman in Bengaluru, according to Bengaluru DCP (South East) Joshi Srinath
Zomato says, “We deeply regret this incident & apologise to Hitesha for this traumatic experience”. pic.twitter.com/L3T4RUDvx2
— ANI (@ANI) March 11, 2021
Advertisement
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಿನ್ನ ಗುಲಾಮ ನಾನಲ್ಲ ಎಂದು ಡೆಲವರಿ ಬಾಯ್ ಕಾಮರಾಜ್ ಹೇಳಿದ್ದಾನೆ. ಹಿತೇಶಾ ಮತ್ತು ಡೆಲಿವರಿ ಬಾಯ್ ಜಗಳದಲ್ಲಿ ಆಕೆಯ ಮೂಗಿಗೆ ಪಂಚ್ ಮಾಡಿದ್ದಾನೆ. ನಂತರ ಯುವತಿ ಕಣ್ಣೀರು ಹಾಕುತ್ತಾ ನಡೆದಿರುವ ಘಟನೆಯನ್ನು ಹೇಳಿ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿ ಡೆಲವರಿಬಾಯ್ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
So guys this just happened to me yesterday
Pls support me @zomato @zomatoin @viralbhayani77 @sagarmaheshwari @ATSBB @bbcnewsindia @narendramodi @cnnbrk @AltNews @NBCNews @itvnews @DgpKarnataka @TV9Telangana pic.twitter.com/TBso6N23k3
— Hitesha Chandranee (@HChandranee) March 10, 2021
ಡೆಲವರಿಬಾಯ್ನ್ನು ಕೆಲಸದಿಂದ ಕಿತ್ತು ಹಾಕಿದ್ದೇವೆ. ಕ್ಷಮಿಸಿ ಎಂದು ಹೇಳಲು ಸಾಧ್ಯವಿಲ್ಲ, ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಘಟನೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಈ ಆಘಾತಕಾರಿ ಅನುಭವಕ್ಕಾಗಿ ಹಿತೇಶಾಗೆ ಕ್ಷಮೆಯಾಚಿಸುತ್ತೇವೆ. ನಾವು ಹಿತೇಶಾರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಅಗತ್ಯವಾದ ವೈದ್ಯಕೀಯ ಆರೈಕೆ ಮತ್ತು ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಜೊಮ್ಯಾಟೊ ಟ್ವೀಟ್ ಮಾಡಿದೆ.