-40 ಲಕ್ಷ ಮೌಲ್ಯದ ಚಿನ್ನಾಭರಣ, 40 ಸಾವಿರ ನಗದು
-ದರೋಡೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಲಕ್ನೋ: ಗ್ರಾಹಕರಂತೆ ಬಂದ ಮೂವರು ಗನ್ ತೋರಿಸಿ 40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ನಗದು ಎಗರಿಸಿ ಎಸ್ಕೇಪ್ ಆಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢನನಲ್ಲಿ ನಡೆದಿದೆ. ದರೋಡೆಯ ಎಲ್ಲ ದೃಶ್ಯಗಳು ಮಳಿಗೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Advertisement
ಅಲಿಗಢ ನಗರದ ಬನ್ನಾದೇವಿ ಇಲಾಖೆಯಲ್ಲಿ ಸುಂದರ್ ಜ್ಯುವೆಲೆರ್ಸ್ ನಲ್ಲಿ ಹಾಡಹಹಗಲೇ ದರೋಡೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ವೇಳೆ ಮಾಸ್ಕ್ ಧರಿಸಿ ಬಂದ ದರೋಡೆಕೋರರು ಮೊದಲಿಗೆ ಕೋವಿಡ್ ನಿಯಮಗಳನ್ನ ಪಾಲಿಸಿದ್ದಾರೆ. ಅಂಗಡಿಯವರಿಂದ ಸ್ಯಾನಿಟೈಸರ್ ಪಡೆದು ಹಾಕಿಕೊಂಡಿದ್ದಾರೆ. ಮಳಿಗೆ ಒಳಗೆ ಬರುತ್ತಿದ್ದಂತೆ ಬ್ಯಾಗ್ ನಲ್ಲಿದ್ದ ಗನ್ ಹೊರಗೆ ತೆಗದು ಬೆದರಿಸಿ ದರೋಡೆ ಮಾಡಿದ್ದಾರೆ.
Advertisement
Advertisement
ಒಳಗೆ ಬರುತ್ತಿದ್ದಂತೆ ಮಾಲೀಕನ ಮಗನ ಹಣೆಗೆ ಗನ್ ಹಿಡಿದು ಚಿನ್ನಾಭರಣ ನೀಡುವಂತೆ ಬೆದರಿಕೆ ಹಾಕಿದ್ರು. ಇನ್ನು ಅಂಗಡಿಯಲ್ಲಿದ್ದ ಕೆಲಸಗಾರರು ಒಳಭಾಗದಿಂದ ಮೇಲೆ ಹೋಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ದರೋಡೆಕೋರರು ಕೈಗೆ ಸಿಕ್ಕ ಚಿನ್ನಾಭರಣ ಮತ್ತು ನಗದು ತೆಗೆದುಕೊಂಡು ಮಿಂಚಿನಂತೆ ಮರೆಯಾದ್ರು ಎಂದು ಚಿನ್ನದ ಮಳಿಗೆ ಮಾಲೀಕ ಹೇಳಿದ್ದಾರೆ.
Advertisement
ದರೋಡೆಕೋರರು 700 ಗ್ರಾಂ ಚಿನ್ನಾಭರಣ ಮತ್ತು ಅಂದಾಜು 40 ಸಾವಿರ ರೂ. ನಗದು ದರೋಡೆ ಮಾಡಿದ್ದಾರೆ. ಮಳಿಗೆ ಮತ್ತು ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಗಳಲ್ಲಿ ದರೋಡೆಕೋರರ ಚಲನಾವಳಿ ಪತ್ತೆಯಾಗಿದೆ. ಶೀಘ್ರದಲ್ಲೇ ದರೋಡೆಕೋರರನ್ನ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.