Connect with us

Cinema

ಗೆಳೆಯನ ಜೊತೆ ಎಂಗೇಜ್ ಆದ ಹಾಟ್ ಬೆಡಗಿ ಪೂನಂ ಪಾಂಡೆ

Published

on

Share this

ಮುಂಬೈ: ನಟಿ ಮತ್ತು ರೂಪದರ್ಶಿ ಪೂನಂ ಪಾಂಡೆ ತನ್ನ ಬಾಯ್ ಫ್ರೆಂಡ್ ಸ್ಯಾಮ್ ಬಾಂಬೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತನ್ನ ನಿಶ್ಚಿತಾರ್ಥದ ವಿಚಾರವಾಗಿ ಪೂನಂ ಪಾಂಡೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಸ್ಯಾಮ್ ಬಾಂಬೆ ಕೊನೆಗೂ ನಾವು ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಬರೆದುಕೊಂಡಿದ್ದಾರೆ. ಸ್ಯಾಮ್ ಮತ್ತು ಪೂನಂ ಕಳೆದ ಕೆಲದಿನಗಳಿಂದ ಪ್ರೀತಿಸುತ್ತಿದ್ದರು.

View this post on Instagram

We finally did it!

A post shared by Sam Bombay (@sambombay) on

ಸ್ಯಾಮ್ ಹಂಚಿಕೊಂಡಿರುವ ಫೋಟೋದಲ್ಲಿ ಇಬ್ಬರು ಬೆರಳುಗಳಲ್ಲಿ ಉಂಗುರಗಳನ್ನು ತೊಟ್ಟಿದ್ದಾರೆ. ಆದರೆ ಈ ಬಗ್ಗೆ ಪೂನಂ ಪಾಂಡೆ ಇನ್ನೂ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಯಾವುದೇ ಪೋಸ್ಟ್ ಹಾಕಿಕೊಂಡಿಲ್ಲ. ಆದರೆ ಪ್ರಿಯಕರ ಸ್ಯಾಮ್ ಹಂಚಿಕೊಂಡಿರುವ ಫೋಟೋಗೆ ಕಮೆಂಟ್ ಮಾಡಿರುವ ಪೂನಂ ಬೆಸ್ಟ್ ಫೀಲಿಂಗ್ಸ್ ಎಂದು ಬರೆದು ರೆಡ್ ಹಾರ್ಟ್ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸದಾ ಸಕ್ರಿಯವಾಗಿರುವ ಪೂನಂ, ಕಳೆದ ಕೆಲದಿನಗಳಿಂದ ಸ್ಯಾಮ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ. ಆದರೆ ಕೆಲ ಪೂನಂ ಜೊತೆಗಿರುವ ಫೋಟೋಗಳನ್ನು ಸ್ಯಾಮ್ ಬಾಂಬೆ ಹಂಚಿಕೊಂಡಿದ್ದು, ನನ್ನ ಪ್ರೀತಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಜೋಡಿ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದ್ದು, ಎಲ್ಲರೂ ಕಮೆಂಟ್ ಮಾಡುವ ಮೂಲಕ ವಿಶ್ ಮಾಡುತ್ತಿದ್ದಾರೆ.

ಈ ಹಿಂದೆ ಪೂನಂ ಮತ್ತು ಆಕೆ ಗೆಳಯ ಸ್ಯಾಮ್ ಬಾಂಬೆಯ ಮೇಲೆ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಕೊರೊನಾ ಲಾಕ್‍ಡೌನ್ ಸಮಯದಲ್ಲೂ ಪೂನಂ ಮತ್ತು ಆಕೆಯ ಗೆಳಯ ತಮ್ಮ ಐಷಾರಮಿ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದರು. ಯಾವುದೇ ಸೂಕ್ತ ಕಾರಣವಿಲ್ಲದೇ ಸುಖಾ ಸುಮ್ಮನೆ ತಮ್ಮ ಕಾರಿನಲ್ಲಿ ಸುತ್ತುತ್ತಿದ್ದ ಪೂನಂ ಪಾಂಡೆಯ ಮೇಲೆ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement