CrimeKarnatakaLatestMain PostNational

ಗೆಳೆಯನೊಂದಿಗೆ ಪ್ರಯಾಣಿಸುತ್ತಿದ್ದಾಗ ಆಟೋದಿಂದ ಹೊರ ಬಿದ್ದು ಮಹಿಳೆ ಸಾವು

– ಆಟೋದಲ್ಲಿ ಇಬ್ಬರ ನಡುವೆ ಜಗಳ

ನವದೆಹಲಿ: ಚಲಿಸುತ್ತಿರುವ ಆಟೋದಿಂದ ಮಹಿಳೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ಕೇಲ್ ಖಾನ್ ಪ್ರದೇಶದಲ್ಲಿ ನಡೆದಿದೆ.

ಕಲ್ಯಾಣ್‍ಪುರಿ ನಿವಾಸಿ ಪರಮ್‍ಜೀತ್ ಕೌರ್ ಮೃತ ಮಹಿಳೆ. ಪರಮ್‍ಜಿತ್ ತನ್ನ ಸ್ನೇಹಿತರೊಂದಿಗೆ ಆಟೋದಲ್ಲಿ ಹೋಗುವಾಗ ಬಿದ್ದು ಸಾವನ್ನಪ್ಪಿದ್ದು, ಈ ಸಂಬಂಧ ಮೋತಿಬಾಗ್ ನಿವಾಸಿ ಹೃತಿಕ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ವಿಚಾರಣೆಯ ವೇಳೆ ಪರಮ್‍ಜೀತ್, ಹೃತಿಕ್ ಜೊತೆ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ. ಇಬ್ಬರು ನಡುವೆ ಜಗಳವಾಗುತ್ತಿತ್ತು. ಆಶ್ರಮ ಚೌಕ್ ಬಳಿ ಆಟೋರಿಕ್ಷಾ ಹತ್ತುವ ಮೊದಲೇ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಹೃತಿಕ್ ಪರಮ್‍ಜೀತ್‍ಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದನು.

ಆಟೋದಲ್ಲಿಯೂ ಇಬ್ಬರ ನಡುವೆ ಜಗಳ ಮುಂದುವರಿದಿದೆ. ಆಗಲೂ ಹೃತಿಕ್ ಪರಮ್‍ಜೀತ್ ಕಪಾಳಕ್ಕೆ ಮತ್ತೆ ಹೊಡೆದಿದ್ದಾನೆ. ಆಗ ಆಕೆ ಸಿಟ್ಟಿನಿಂದ ತನ್ನ ಮೊಬೈಲ್‍ನನ್ನು ಎಸೆದಿದ್ದಾಳೆ. ಮುರಿದ ಫೊನ್ ಎತ್ತಿಕೊಂಡು ಮತ್ತೆ ಆಟೋವನ್ನು ಹತ್ತಿದ್ದಾರೆ. ನಂತರ ಆಟೋರಿಕ್ಷಾ ಎನ್‍ಎಚ್ 24 ಫ್ಲೈಓವರ್ ತಲುಪಿದಾಗ, ಮಹಿಳೆ ವಾಹನದಿಂದ ಹೊರಗೆ ಬಿದ್ದಳು ಎಂದು ಆಟೋ ಚಾಲಕ ಶಂಶುಲ್ ಅಲಿ ಮತ್ತು ಹೃತಿಕ್ ಹೇಳಿದ್ದಾರೆ.

ಗಾಯಗೊಂಡ ಕಲ್ಯಾಣ್‍ಪುರಿಯನ್ನು ಪಾಂಡವ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ ವೈದ್ಯರು ಮಹಿಳೆ ಸಾವನ್ನಪ್ಪಿರೋದನ್ನ ದೃಢಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಆರ್.ಪಿ. ಮೀನಾ ತಿಳಿಸಿದ್ದಾರೆ.

Leave a Reply

Your email address will not be published.

Back to top button