-ಪಿನ್ ಬಳಸಿ ಕಾಂಡೋಮ್ ರಂಧ್ರ ಹಾಕಿದ್ದ ವ್ಯಕ್ತಿ
ವಾಷಿಂಗ್ಟನ್: ಗೆಳತಿಗೆ ತಿಳಿಸದೇ ಕಾಂಡೋಮ್ ರಂಧ್ರ ಹಾಕಿ ಸೆಕ್ಸ್ ಮಾಡಿದ್ದ 47 ವರ್ಷದ ವ್ಯಕ್ತಿ 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ವರ್ಸಸ್ಟರ್ ಕ್ರೌನ್ ಕೋರ್ಟ್ ಈ ತೀರ್ಪು ನೀಡಿದ್ದು, ವ್ಯಕ್ತಿ ಮಹಿಳೆಯ ನಂಬಿಕೆಯನ್ನ ಹುಸಿ ಮಾಡಿದ್ದಾನೆ. ಇದೊಂದು ಹೇಯ ಕೃತ್ಯ ಎಂದು ನ್ಯಾಯಾಲಯ ಹೇಳಿದೆ.
Advertisement
ಅಂಡ್ರ್ಯೂ ಲೆವಿಸ್ ಶಿಕ್ಷೆಗೆ ಗುರಿಯಾದ ಟ್ರೈನ್ ಚಾಲಕ. 2018ರಲ್ಲಿ ಗೆಳತಿಯೊಡನೆ ಲೈಂಗಿಕ ಕ್ರಿಯೆ ಹೊಂದುವ ಮುನ್ನ ಕಾಂಡೋಮ್ ಗೆ ಪಿನ್ ಬಳಸಿ ರಂಧ್ರ ಹಾಕಿದ್ದನು. ಮಹಿಳೆ ಕಾಂಡೋಮ್ ನಲ್ಲಿ ರಂಧ್ರ ಇರೋದನ್ನ ಗಮನಿಸಿ ಲೆವಿಸ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ
Advertisement
Advertisement
ಲೆವಿಸ್ ತನ್ನೊಂದಿಗೆ ಹೇಯವಾಗಿ ನಡೆದುಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಲೆವಿಸ್ ಸೆಕ್ಸ್ ವೇಳೆ ಕಾಂಡೋಮ್ ಗಾತ್ರದಲ್ಲಿ ಏರುಪೇರಾಗಿ ಸ್ಫೋಟವಾಗಿದೆ ಎಂದು ಹೇಳಿಕೆ ನೀಡಿದ್ದಾನೆ. ಆದ್ರೆ ಲೆವಿಸ್ ಪ್ಲಾನ್ ಮಾಡಿಯೇ ಕಾಂಡೋಮ್ ಗಳಿಗೆ ರಂಧ್ರ ಹಾಕಿ ಸೆಕ್ಸ್ ನಡೆಸಿದ್ದಾನೆ. ಇದೊಂದು ಚಿಕ್ಕ ಪ್ರಕರಣವಾದ್ರೂ ಮಹಿಳೆಯ ಹಕ್ಕಿನ ವಿಚಾರವಾಗಿದೆ ಎಂದು ಸರ್ಕಾರಿ ಪರ ವಕೀಲರಾದ ಗ್ಲ್ಯಾನ್ ಸ್ಯಾಮುಯೆಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದನ್ನೂ ಓದಿ: ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿದ! ವೈದ್ಯರು ಹೇಳಿದ್ದು ಏನು?
Advertisement
ಲೆವಿಸ್ ಗೆ ಮಹಿಳೆಯನ್ನ ಗರ್ಭಿಣಿ ಮಾಡುವ ಉದ್ದೇಶವಿರಲಿಲ್ಲ. ಗರ್ಭ ಧರಿಸೋದ ವಿಷಯದಲ್ಲಿ ಮಹಿಳೆ ಸಂಪೂರ್ಣ ಸ್ವತಂತ್ರಳು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಕೆಗೆ ಹಕ್ಕಿದೆ. ಸೆಕ್ಸ್ ವೆಳೆ ಸ್ವಾಭಾವಿಕವಾಗಿಯೇ ಕಾಂಡೋಮ್ ಹರಿದಿರಬಹುದು. ಇದೊಂದು ಸಂಪೂರ್ಣ ಭಿನ್ನ ಪ್ರಕರಣ ಎಂದು ಲೆವಿಸ್ ಪರ ವಕೀಲ ಲಿನೆಟ್ ಮೆಕ್ಲೆಮೆಂಟ್ ವಾದಿಸಿದ್ದರು. ಇದನ್ನೂ ಓದಿ: ಕಾಂಡೋಮ್ ಕಂಪನಿ ವಿರುದ್ಧ ಸಮರ ಆರಂಭಿಸಿದ ಗ್ರಾಹಕ-ಕಾಂಡೋಮ್ ಧರಿಸಿದ್ರು ಪತ್ನಿ ಗರ್ಭಿಣಿ
ವಾದ-ಪ್ರತಿವಾದ ಆಲಿಸಿದ ವರ್ಸಸ್ಟರ್ ಕ್ರೌನ್ ಕೋರ್ಟ್, ಮಹಿಳೆಗೆ ಗರ್ಭ ಧರಿಸೋದು ಇಷ್ಟವಿರಲಿಲ್ಲ. ಆದ್ರೆ ಲೆವಿಸ್ ಆಕೆ ಆತನ ಮೇಲೆ ಇರಿಸಿದ್ದ ನಂಬಿಕೆಯನ್ನ ಹುಸಿಗೊಳಿಸಿದ್ದಾನೆ. ಇದು ಅತ್ಯಾಚಾರದ ಪ್ರಕರಣ. ಹಾಗಾಗಿ ಲೆವಿಸ್ 4 ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ. ಇದನ್ನೂ ಓದಿ: ಇಂಟರ್ನೆಟ್ನಲ್ಲಿ ವೈರಲ್ ಆಗ್ತಿರೋ ‘ಕಾಂಡೋಮ್ ಚಾಲೆಂಜ್’ ಟ್ರೈ ಮಾಡ್ಬೇಡಿ!