– ಯತ್ನಾಳ್ ವಿರುದ್ಧ ಕ್ರಮಕ್ಕೆ ರಾಜ್ಯಾಧ್ಯಕ್ಷರಿಗೆ ಮನವಿ
ದಾವಣಗೆರೆ: ಗೂಂಡಾಗಿರಿಗೆ ಮತ್ತೊಂದು ಹೆಸರೇ ಡಿಕೆಶಿ ಮತ್ತು ಡಿಕೆ ಸುರೇಶ್. ಅವರ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Advertisement
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರ್ ಆರ್ ನಗರದಲ್ಲಿ ಬಿಜೆಪಿಯು ಕಾಂಗ್ರೆಸ್ ಅಭ್ಯರ್ಥಿ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ದೌರ್ಜನ್ಯ ಮಾಡ್ತಾ ಇದ್ದೀವಿ. ಅವರು ತಪಸ್ಸು ಮಾಡ್ತಾ ಇದ್ದಾರೆ ಪಾಪಾ. ಗೂಂಡಾಗಿರಿಗೆ ಮತ್ತೊಂದು ಹೆಸರೇ ಡಿಕೆಶಿ ಮತ್ತು ಡಿಕೆ ಸುರೇಶ್. ಅವರ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತು. ತಮ್ಮ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದ್ರು ಹೇಳ್ತಾರೆ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಇದೇ ವೇಳೆ ಸಿಎಂ ವಿರುದ್ಧ ಮಾತನಾಡಿದ್ದ ಯತ್ನಾಳ್ ಬಗ್ಗೆಯೂ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದರು. ಪಕ್ಷಕ್ಕೆ ಕಿರಿಕಿರಿ ಮಾಡ್ತಾ ಇರೋ ಆ ವ್ಯಕ್ತಿ ಯಾರು ಅಂತ ಜನರಿಗೆ ಈಗಾಗಲೇ ಗೊತ್ತಾಗಿದೆ. ಪಕ್ಷಕ್ಕೆ ಪದೇ ಪದೇ ಕಿರಿಕಿರಿ ಮಾಡ್ತಾ ಇದ್ದಾನೆ ಅಂತ ಜನರಿಗೆ ಗೊತ್ತಿದೆ. ಆತನ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರಿಗೆ ತಿಳಿಸಲಾಗಿದೆ, ಕ್ರಮ ಕೈಗೊಳ್ಳುತ್ತಾರೆ ಎಂದರು.
Advertisement
ನೆರೆ ಪ್ರವಾಹಕ್ಕೆ ಇಬ್ಬರನ್ನು ಬಿಟ್ಟು ಎಲ್ಲಾ ಸಚಿವರು ಹೋಗಿದ್ದರು. ಶಶಿಕಲಾ ಜೊಲ್ಲೆ ಹಾಗೂ ಕಾರಜೋಳರಿಗೆ ಕೊರೊನಾ ಬಂದಿತ್ತು. ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನೆರೆ ಹಾವಳಿ ಉಂಟಾದ ಕಡೆ ಈಗಾಗಲೇ ಸರ್ವೆ ಮಾಡಿಸಲಾಗುತ್ತಿದೆ. ಸರ್ವೆ ಮುಗಿದ ನಂತರ ಅವರಿಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.