– ಮುಖ್ಯ ಆರೋಪಿ ರೌಡಿಶೀಟರ್ ಮಹ್ಮದ್ ಗೌಸ್ ಪರಾರಿ
ರಾಯಚೂರು: ಶಕ್ತಿನಗರದ ರಾಘವೇಂದ್ರ ಕಾಲೋನಿಯಲ್ಲಿ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಆರೋಪಿಗಳು ಸೆರೆಸಿಕ್ಕಿದ್ದಾರೆ. ರಾಯಚೂರಿನ ರೌಡಿಶೀಟರ್ ಮಹ್ಮದ್ ಗೌಸ್ ತಂಡದ 12 ಜನರ ಬಂಧನವಾಗಿದ್ದು, ಮುಖ್ಯ ಆರೋಪಿ ಗೌಸ್ ತಲೆ ಮರೆಸಿಕೊಂಡಿದ್ದಾನೆ.
ಮೇ 8ರಂದು ಆರ್ ಟಿಪಿಎಸ್, ವೈಟಿಪಿಎಸ್ ಗುತ್ತಿಗೆದಾರ ಕೇರಳ ಮೂಲದ ಹರ್ಷನ್ ಮನೆಗೆ ಮಹ್ಮದ್ ಗೌಸ್ ಹಾಗೂ 17 ಜನ ನುಗ್ಗಿ ಪಿಸ್ತೂಲ್, ಮಾರಕಾಸ್ತ್ರ ತೋರಿಸಿ ಹಣ ವಸೂಲಿ ಮಾಡಿದ್ದರು. ಹರ್ಷನ್ ರಿಂದ 5 ಲಕ್ಷ ರೂಪಾಯಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಲ್ಲದೇ ಒಂದು ವಾರದಲ್ಲಿ 15 ಲಕ್ಷ ಕೊಡುವಂತೆ ಕೊಲೆ ಬೆದರಿಕೆ ಹಾಕಿದ್ದರು.
Advertisement
Advertisement
ಕೊಲೆ ಬೆದರಿಕೆ ಹಿನ್ನೆಲೆ ಹರ್ಷನ್ ಅವರು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಹಿನ್ನೆಲೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ರಾಯಚೂರು ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಕೊಲೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ 12 ಜನರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಮುಖ್ಯ ಆರೋಪಿ ಮಹ್ಮದ್ ಗೌಸ್ ಸೇರಿ 5 ಜನ ಆರೋಪಿಗಳು ತಲೆಮರಿಸಿಕೊಂಡಿದ್ದಾರೆ. ಉನ್ನುಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಹೇಳಿದ್ದಾರೆ.