ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶ್ವೇತಾ ಚೆಂಗಪ್ಪ ಅವರು 3 ತಿಂಗಳು ಮುಂಚಿತವಾಗಿಯೇ ಲಸಿಕೆಯ ಮೊದಲ ಡೋಸ್ ಪಡೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
ಕೆಲ ದಿನಗಳ ಹಿಂದೆ ಲಸಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ ಸೋಂಕು ಗುಣಮುಖರಾದ ಮೂರು ತಿಂಗಳ ನಂತರ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿತ್ತು. ಆದರೆ ವೈದ್ಯರ ಸಲಹೆಯಂತೆ ಮತ್ತು ನನ್ನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಲಸಿಜೆ ಪಡೆದಿದ್ದೇನೆ ಎಂದು ಶ್ವೇತಾ ಚಂಗಪ್ಪ ಹೇಳಿದ್ದಾರೆ.
Advertisement
Advertisement
ಮೊದಲ ಡೋಸ್ ಸಿಕ್ಕಿದೆ. ಕೋವಿಡ್ ಆರೋಗ್ಯ ಸೇತು ಅಪ್ಲಿಕೇಶನ್ನಲ್ಲಿ ನಿಮ್ಮನ್ನು ನೋಂದಾಯಿಸಿ ಮತ್ತು ಲಸಿಕೆ ಪಡೆಯಿರಿ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಏಕೈಕ ಭರವಸೆ ವ್ಯಾಕ್ಸಿನೇಷನ್ ಆಗಿದೆ. ಸ್ಟ್ರಾಂಗ್ ಆಗಿ ಇರುವುದು ಬಹಳ ಮುಖ್ಯವಾಗಿದೆ. ಮನೆಯಲ್ಲೇ ಇರಿ ಎಂದು ಬರೆದುಕೊಂಡು ಇನ್ಸ್ಟಾಗ್ರಾಮ್ನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement
View this post on Instagram
ನಟಿ ಶ್ವೇತಾ ಚೆಂಗಪ್ಪ ತಮಗೆ ಕೊರೊನಾ ಸೋಂಕಾಗಿದ್ದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ಜೊತೆಗೆ ಕ್ವಾರಂಟೈನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ ಆ ದಿನಗಳ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಲೈವ್ ಬರುವ ಮೂಲಕ ಹಂಚಿಕೊಂಡಿದ್ದರು.
View this post on Instagram
21 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದ ಶ್ವೇತಾ ಚೆಂಗಪ್ಪ ಏ.29ರಂದು ತಮಗೆ ನೆಗೆಟಿವ್ ಬಂದಿದ್ದ ವಿಷಯ ಹಂಚಿಕೊಂಡಿದ್ದರು. ಏಪ್ರಿಲ್ 30ರಂದು ಲೈವ್ ಬಂದು ತಮ್ಮ 21 ದಿನಗಳ ಅನುಭವವನ್ನು ಹಂಚಿಕೊಂಡಿದ್ದರು. ಅದು ತುಂಬಾ ಕಠಿಣ ಸಮಯ ಎಂದಿದ್ದರು.
View this post on Instagram
ಕೋವಿಡ್ನಿಂದ ಗುಣಮುಖರಾದವರು ಮೂರು ತಿಂಗಳು ಲಸಿಕೆ ಹಾಕಿಸಿಕೊಳ್ಳುವಂತಿಲ್ಲ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ. ಹೀಗಿದ್ದರೂ ನಟಿ ಶ್ವೇತಾ ಚೆಂಗಪ್ಪ ಮಾತ್ರ 3 ತಿಂಗಳು ಆಗುವ ಮೊದಲೇ ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದೇನೆ ಎಂದು ಬರೆದು ಕೊಂಡಿದ್ದಾರೆ ಇದು ಹೇಗೆ ಸಾಧ್ಯ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.