– ಮೊದಲ ಪ್ರಯತ್ನದಲ್ಲೇ ಆಪ್ ಉತ್ತಮ ಸಾಧನೆ
ಗಾಂಧಿನಗರ: ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಸಾಧನೆ ಮಾಡಿದ್ದರೆ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ. ಮೊದಲ ಪ್ರಯತ್ನದಲ್ಲೇ ಆಮ್ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಿದೆ.
Thank you Gujarat!
Results of municipal elections across the state clearly show the unwavering faith people have towards politics of development and good governance.
Grateful to the people of the state for trusting BJP yet again.
Always an honour to serve Gujarat.
— Narendra Modi (@narendramodi) February 23, 2021
Advertisement
6 ಮಹಾನಗರ ಪಾಲಿಕೆಗಳ ಒಟ್ಟು 576 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 449 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಅಹಮಾದಾಬಾದ್, ಸೂರತ್, ವಡೋದರ, ರಾಜ್ಕೋಟ್, ಜಾಮ್ನಗರ, ಭಾವಾನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
Advertisement
I would like to appreciate the efforts of each and every Karyakarta of @BJP4Gujarat, who reached out to people and elaborated on our Party’s vision for the state. The Gujarat government’s pro-people policies have positively impacted the entire state.
— Narendra Modi (@narendramodi) February 23, 2021
Advertisement
ಕಾಂಗ್ರೆಸ್ ಕೇವಲ 44 ಕ್ಷೇತ್ರಗಳನ್ನು ಗೆದ್ದುಕೊಂಡರೆ, 470 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ 27 ಸ್ಥಾನಗಳನ್ನು ಗೆದ್ದುಕೊಂಡಿದೆ. ಸೂರತ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂರನೇ ಸ್ಥಾನಕ್ಕೆ ಆಪ್ ತಳ್ಳಿದೆ. ಹೀನಾಯ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಕೋಟ್, ಸೂರತ್, ಭಾವಾನಗರದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.
Advertisement
गुजरात निकाय चुनाव में भाजपा को 85% सीटें जीताकर जनता ने एक बार पुनः सिद्ध किया है कि गुजरात भाजपा का गढ़ है।
कोरोना व किसान आंदोलन से जुड़ी भ्रांतियों को नकार कर जनता ने @narendramodi जी के नेतृत्व में भाजपा की विकासनीति पर पुनः विश्वास जताया है।@BJP4Gujarat इकाई को बधाई। pic.twitter.com/jQGapuauEU
— Amit Shah (@AmitShah) February 23, 2021
ಪ್ರಧಾನಿ ನರೇಂದ್ರ ಮೋದಿ ಈ ಗೆಲುವು ನನ್ನ ಪಾಲಿಗೆ ವಿಶೇಷವಾಗಿದೆ. ಅಭಿವೃದ್ಧಿಗೆ ಜನ ಮತ ಹಾಕಿದ್ದಾರೆ. 2 ದಶಕಗಳಿಂದ ಜನ ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಗೆಲುವಿಗೆ ಕಾರಣರಾದ ಬಿಜೆಪಿಯ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
नई राजनीति की शुरुआत करने के लिए गुजरात के लोगों को दिल से बधाई।
— Arvind Kejriwal (@ArvindKejriwal) February 23, 2021
ಕಳೆದ ವಾರ ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಬಿಜೆಪಿ ಐದನೇ ಸ್ಥಾನಕ್ಕೆ ಕುಸಿದಿತ್ತು. ಆಗ ಇದು ಕೃಷಿ ಕಾಯ್ದೆಗಳ ಪರಿಣಾಮದಿಂದಾಗಿ ಜನತೆ ಬಿಜೆಪಿ ನಡೆಗೆ ಅಸಮಾಧಾನಗೊಂಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿತ್ತು.