ಚಿಕ್ಕಮಗಳೂರು: ಕಳೆದೊಂದು ವಾರದ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಏಳೆಂಟು ದಿನಗಳ ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಕಾಫಿ ಬೀಜಗಳು ಗಿಡದಲ್ಲೇ ಕೊಳೆಯುತ್ತಿವೆ.
ಮೂಡಿಗೆರೆ ತಾಲೂಕಿನ ತುರುವೆ ಗ್ರಾಮದ ರಘು ಎಂಬವರ ತೋಟದಲ್ಲಿ ಕಾಫಿ ಬೀಜ ಗಿಡದಲ್ಲೇ ಕೊಳೆಯುತ್ತಿದೆ. ಇದರಿಂದ ಕಾಫಿ ಬೆಳೆಗೆ ಕೊಳೆ ರೋಗದ ಭೀತಿ ಎದುರಾಗಿದೆ. ಏಳೆಂಟು ದಿನಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಕಾಫಿ ಗಿಡದಲ್ಲೇ ಕೊಳೆಯು ಸ್ಥಿತಿ ನಿರ್ಮಾಣವಾಗಿದೆ. ಮಳೆ ಗಾಳಿಗೆ ಸಾಕಷ್ಟು ಕಾಫಿ ನೆಲಕಂಡಿದೆ. ಅಳಿದುಳಿದ ಕಾಫಿ ಈಗ ಒಣಗಲು ಆರಂಭವಾಗಿದೆ. ಕಾಫಿ ಜಿಲ್ಲೆಯ ಪ್ರಮುಖ ಬೆಳೆ. ಕಾಫಿಯಿಂದಲೇ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅದರಲ್ಲಿ ಮಧ್ಯಮದ ವರ್ಗದ ಬೆಳೆಗಾರರೇ ಜಾಸ್ತಿ. ಆದರೆ ಎರಡ್ಮೂರು ವರ್ಷಗಳಿಂದ ಬೆಳೆಗಾರರ ಸ್ಥಿತಿ ಇದೇ ಆಗಿದೆ.
Advertisement
Advertisement
ಕಳೆದ ಎರಡು ವರ್ಷ ತಿಂಗಳುಗಟ್ಟಲೇ ಮಳೆ ಸುರಿದರು ಈ ರೀತಿ ಜುಲೈ ವೇಳೆಗೆ ಕಾಫಿ ಗಿಡದಲ್ಲೇ ಒಣಗಿದ್ದು ತೀರಾ ವಿರಳ. ಮಳೆ-ಗಾಳಿಗೆ ಉದುರಿತ್ತು. ಆದರೆ ಒಣಗಿರಲಿಲ್ಲ. ಈ ವರ್ಷ ಏಳೆಂಟು ದಿನದ ಮಳೆ ಬಳಿಕ ಗಿಡದಲ್ಲೇ ಒಣಗುತ್ತಿದೆ. ಇದು ಬೆಳೆಗಾರರಿಗೆ ನುಂಗಲಾರಾದ ಬಿಸಿ ತುಪ್ಪವಾಗಿದೆ. ಇದನ್ನೂ ಓದಿ: 1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ
Advertisement
Advertisement
ಕಾಫಿ ಈಗ ಉದುರಿದರೆ ಅಥವಾ ಒಣಗಿದರೆ ಬೆಳೆಗಾರರ ಕಥೆ ಮುಗಿಯಿತು. ಅದು ಯಾವುದಕ್ಕೂ ಉಪಯೋಗಕ್ಕೆ ಬರಲ್ಲ. ಜಿಲ್ಲೆಯ ಕಾಫಿ ಬೆಳೆಗಾರರ ಬದುಕು ಕಳೆದ ಎರಡ್ಮೂರು ವರ್ಷಗಳಿಂದ ಇದೇ ಆಗಿದೆ. ಕಳೆದೆರಡು ವರ್ಷವೂ ಶೇಕಡ 50ರಷ್ಟು ಕಾಫಿ ಮಣ್ಣು ಪಾಲಾಗಿತ್ತು. ಈಗ ಮಳೆಗಾಲದ ಆರಂಭದಲ್ಲೇ ಕಾಫಿ ಉದುರೋದು, ಗಿಡದಲ್ಲೇ ಕೊಳೆಯುವುದನ್ನ ಕಂಡು ಕಾಫಿ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಇದನ್ನೂ ಓದಿ: ರೆಡ್ ಟೇಪ್ ಕಿತ್ತಾಕಿದ್ದಕ್ಕೆ ಗೇಟ್ ಲಾಕ್ ಮಾಡಿ ಕೀ ಎತ್ಕೊಂಡು ಹೋದ ಅಧಿಕಾರಿಗಳು