DharwadDistrictsKarnatakaLatestMain Post

ಗಾಳಿಯಲ್ಲಿ ಗುಂಡು ಹಾರಿಸಿ ‘ಕೈ’ ಮುಖಂಡನ ಹುಟ್ಟುಹಬ್ಬ ಆಚರಣೆ

Advertisements

ಧಾರವಾಡ: ಕಾಂಗ್ರೆಸ್ ಮುಖಂಡನೋರ್ವನ ಬರ್ತ್ ಡೇಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಗೆಳೆಯನೊಬ್ಬ ಶುಭಕೋರಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ಹುಟ್ಟು ಹಬ್ಬದ ಅಚರಣೆ ಮಾಡಲಾಗಿದೆ. ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ ಹುಟ್ಟುಹಬ್ಬ ವೇಳೆ ಈ ಗುಂಡು ಹಾರಿಸಿ ಆಚರಿಸಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿದ ಮಲ್ಲಿಕಾರ್ಜುನ ಆಯಟ್ಟಿ ಎಂಬ ಅಣ್ಣಪ್ಪಗೌಡರ ಗೆಳೆಯ, ತನ್ನ ಕೈಯಲ್ಲಿ ಇದ್ದ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮಲ್ಲಿಕಾರ್ಜುನ ಸಹ ಕಾಂಗ್ರೆಸ್ ಮುಖಂಡನಾಗಿದ್ದು, ಕಳೆದ ರಾತ್ರಿ ಬರ್ತ್ ಡೇ ವೇಳೆ ಪಾರ್ಟಿಗೆ ಬಂದಿರುವ ವೇಳೆ ಮಲ್ಲಿಕಾರ್ಜುನ ಗುಂಡು ಹಾರಿಸಿ ಶುಭಕೋರಿದ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published.

Back to top button