ಗಾಂಧಿನಗರ: ಗರ್ಭಿಣಿ ನರ್ಸ್ ರಂಜಾನ್ ಉಪವಾಸದಲ್ಲಿದ್ದರು ಕೋವಿಡ್ ರೋಗಿಗಳ ಸೇವೆ ಸಲ್ಲಿಸುತ್ತಿರುವುದರ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
ನ್ಯಾನ್ಸಿ ಆಯೆಜಾ ಮಿಸ್ತ್ರಿ ಉಪವಾಸ ಮಾಡುತ್ತಲೇ ಗುಜರಾತ್ನ ಸೂರತ್ನ ಕೋವಿಡ್ ಆರೈಕೆ ಕೇಂದ್ರವೊಂದರಲ್ಲಿ ದಣಿವೆಯಿಲ್ಲದೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿದಿನ ಎಂಟರಿಂದ ಹತ್ತು ಗಂಟೆಗಳ ಕಾಲ, ಮಿಸ್ತ್ರಿ ಆಲ್ಥಾನ್ ಸಮುದಾಯ ಭವನದಲ್ಲಿ ಅಟಲ್ ಕೋವಿಡ್ – 19 ಕೇಂದ್ರದಲ್ಲಿ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ.
Advertisement
Gujarat: Nancy Ayeza Mistry, a four months pregnant nurse has been attending patients at a COVID care center in Surat, while observing ‘Roza’.
She says, “I am doing my duty as a nurse. I consider serving people as prayer.” pic.twitter.com/Hx1EQXEAOx
— ANI (@ANI) April 24, 2021
Advertisement
ನಾಲ್ಕು ತಿಂಗಳ ಗರ್ಭಿಣಿಯಾಗಿರುವ ನ್ಯಾನ್ಸಿ ಅವರು ಉಪವಾಸವನ್ನು ಮಾಡುತ್ತಾ ಕೊರೊನಾ ರೋಗಿಗಳು ಸೇವೆಯನ್ನು ಮಾಡುತ್ತಿದ್ದಾರೆ. ನರ್ಸ್ನ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವರ್ಷವೂ ಕೊರೊನಾ ಸಂದರ್ಭದಲ್ಲಿ ಅವರು ಕೆಲಸ ಮಾಡಿದ್ದರು. ಆದರೆ ಈ ವರ್ಷ ಗರ್ಭಿಣಿಯಾಗಿದ್ದರೂ ತಮ್ಮ ಕರ್ತವ್ಯ ಮಾಡುವುದನ್ನು ನಿಲ್ಲಿಸಿಲ್ಲ. ಇದನ್ನು ಓದಿ : ವೀಡಿಯೋ ವೈರಲ್-ಗರ್ಭಿಣಿ ಅಧಿಕಾರಿಯಿಂದ ಜನರಿಗೆ ಕೋವಿಡ್ ಪಾಠ
Advertisement
ನಾನು ದಾದಿಯಾಗಿ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಜನರಿಗೆ ಸೇವೆ ಮಾಡುವುದನ್ನು ನಾನು ಪ್ರಾರ್ಥನೆ ಎಂದು ಪರಿಗಣಿಸುತ್ತೇನೆ ಎಂದು ನ್ಯಾನ್ಸಿ ಆಯೆಜಾ ಮಿಸ್ತ್ರಿ ಹೇಳಿದ್ದಾರೆ.