– ತೆಲಂಗಾಣದಿಂದ ಮಧ್ಯಪ್ರದೇಶವರೆಗೂ ಬಂದ ಕಾರ್ಮಿಕ ದಂಪತಿ
ಭೋಪಾಲ್: ಲಾಕ್ಡೌನ್ನಿಂದ ಕಾರ್ಮಿಕರ ವಲಯ ಹೆಚ್ಚಿನ ಸಮಸ್ಯೆ ಎದುರಿಸುತ್ತಿದೆ. ಈಗ ಇಲ್ಲೊಬ್ಬ ಕಾರ್ಮಿಕ ತನ್ನ ಗರ್ಭಿಣಿ ಪತ್ನಿಯನ್ನು ಗಾಡಿ ಬಂಡಿಯಲ್ಲಿ ಕೂರಿಸಿಕೊಂಡು ಸುಮಾರು 700 ಕಿ.ಮೀ ಎಳೆದುಕೊಂಡು ಬಂದಿರುವ ಘಟನೆ ನಡೆದಿದೆ.
ತನ್ನ ಪತ್ನಿ ಹಾಗೂ ಮಗುವನ್ನು ಗಾಡಿ ಬಂಡಿಯಲ್ಲಿ ಕುರಿಸಿಕೊಂಡು ಎಳೆದುಕೊಂಡು ಬಂದಿರುವ ಕಾರ್ಮಿಕನನ್ನು ರಾಮು ಘೋರ್ಮರೆ ಎಂದು ಗುರುತಿಸಲಾಗಿದೆ. ಈತ ಮಾರ್ಚ್ 17ರಂದು ಕೆಲಸವನ್ನು ಹುಡುಕಿಕೊಂಡು ಕುಟುಂಬ ಸಮೇತ ತೆಲಂಗಾಣಕ್ಕೆ ಹೋಗಿದ್ದಾನೆ. ಆದರೆ ಈತ ಅಲ್ಲಿಗೆ ಹೋದ 5 ದಿನದಲ್ಲಿ ಲಾಕ್ಡೌನ್ ಘೋಷಣೆಯಾಗಿದೆ. ಆದ್ದರಿಂದ ವಾಪಸ್ ಬಂದಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
बालाघाट का एक #मजदूर जो कि हैदराबाद में नौकरी करता था 800 किलोमीटर दूर से एक हाथ से बनी लकड़ी की गाड़ी में बैठा कर अपनी 8 माह की गर्भवती पत्नी के साथ अपनी 2 साल की बेटी को लेकर गाड़ी खींचता हुआ बालाघाट पहुंच गया @ndtvindia @ndtv #modispeech #selfreliant #Covid_19 pic.twitter.com/0mGvMmsWul
— Anurag Dwary (@Anurag_Dwary) May 13, 2020
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ರಾಮು, ನಾನು ನನ್ನ ಗರ್ಭಿಣಿ ಪತ್ನಿ ಮತ್ತು ಮಗುವಿನೊಂದಿಗೆ ಮಾರ್ಚ್ 17ರಂದು ತೆಲಂಗಾಣ ಕೆಲಸಕ್ಕಾಗಿ ಹೋಗಿದ್ದೇವೆ. ಆದರೆ ನಾವು ಹೋದ ಐದೇ ದಿನಕ್ಕೆ ಲಾಕ್ಡೌನ್ ಆಯ್ತು. ಆಗ ಅಲ್ಲಿ ಉಳಿದುಕೊಳ್ಳಲು ನನಗೆ ಮನೆ ಮತ್ತು ದುಡ್ಡಿನ ಸಮಸ್ಯೆ ಎದುರಾಯಿತು. ವಾಪಸ್ ಬರಲು ಬಸ್ ರೈಲು ಏನೂ ಇರಲಿಲ್ಲ. ಹಾಗಾಗಿ ಸ್ವಲ್ಪ ದಿನ ಬಿಟ್ಟು ನಾನೇ ಮರದಿಂದ ಗಾಡಿ ಬಂಡಿಯನ್ನು ತಯಾರಿಸಿಕೊಂಡು ಅದರಲ್ಲಿ ಪತ್ನಿಯನ್ನು ಕುರಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ರಾಮುವಿನ ಪತ್ನಿ ಗರ್ಭಿಣಿಯಾಗಿದ್ದು, ಆಕೆಗೆ ನಡೆಯಲು ಸಾಧ್ಯವಿಲ್ಲ. ಜೊತೆಗೆ ಸಣ್ಣ ಮಗು ಇರುವ ಕಾರಣದಿಂದ ರಾಮು ಗಾಡಿ ಬಂಡಿಯನ್ನು ಮಾಡಿಕೊಂಡು ಅದರಲ್ಲಿ ಅವರನ್ನು ಕೂರಿಸಿಕೊಂಡು ಬಂದಿದ್ದಾರೆ. ಸುಮಾರು 700 ಕಿ.ಮೀ ನಡೆದಿರುವ ರಾಮು, ಗಾಡಿಯನ್ನು ಎಳೆದುಕೊಂಡು ತೆಲಂಗಾಣದಿಂದ ಮಧ್ಯಪ್ರದೇಶದ ಗಡಿ ಭಾಗದವರಿಗೂ ಬಂದಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ರಾಮುವಿನ ಪತ್ನಿ, ನಾವು ತೆಲಂಗಾಣಕ್ಕೆ ಹೋದ ಕೇಲವೆ ದಿನಗಳಲ್ಲಿ ಲಾಕ್ಡೌನ್ ಜಾರಿ ಆಯ್ತು. ಹಾಗಾಗಿ ಅಲ್ಲೇ ಇದ್ದೇವು. ಆದರೆ ನಮಗೆ ತಿನ್ನಲು ಆಹಾರ ಇರಲಿಲ್ಲ. ಉಳಿಯಲು ಸರಿಯಾದ ಜಾಗವೂ ಇಲ್ಲ. ಮಾಡಲು ಕೆಲಸವಿಲ್ಲ. ಆದ್ದರಿಂದ ನಾವು ಅಲ್ಲಿಂದ ವಾಪಸ್ ಬರಲು ತೀರ್ಮಾನ ಮಾಡಿದ್ದೇವು. ನಂತರ ನನ್ನ ಪತಿ ಈ ರೀತಿಯ ಬಂಡಿ ಮಾಡಿದರು. ಅದರಲ್ಲಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಕೇವಲ ಒಂದು ಹೊತ್ತಿನ ಊಟ ತಿಂದು ದಿನ ಪೂರ್ತಿ ತನ್ನ ಗರ್ಭಿಣಿ ಹೆಂಡತಿಯ ಜೊತೆ ಮಗುವನ್ನು ಎಳೆದುಕೊಂಡು ಬಂದ ರಾಮುವನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ವಿಚಾರಿಸಿ ನಂತರ ಅವನಿಗೆ ತಿನ್ನಲು ಊಟ ಮತ್ತು ಬಿಸ್ಕೆಟ್ ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿ ನಿತೀಶ್ ಭಾರ್ಗವ ಅವರು ಅಲ್ಲಿಂದ ರಾಮು ಕುಟುಂಬ ಮನೆಗೆ ಹೋಗಲು ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.