ಅಹಮದಾಬಾದ್: ಡೆಲ್ಲಿ ತಂಡದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಅವರ ಬ್ಯಾಟಿಂಗ್ ಅಬ್ಬರದ ಫಲವಾಗಿ ಡೆಲ್ಲಿ ಕ್ಯಾಪಿಟಲ್ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್ಗಳಿಂದ ಗೆದ್ದು ಬೀಗಿದೆ.
Advertisement
ಗೆಲ್ಲಲು 167 ರನ್ಗಳ ಗುರಿ ಪಡೆದ ಡೆಲ್ಲಿ 17.5 ಓವರ್ ಗಳಲ್ಲಿ 167 ರನ್ ಸಿಡಿಸಿ ಭರ್ಜರಿ ಜಯಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಆರ್ಸಿಬಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
Advertisement
Advertisement
ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಜೊಡಿ ಮೊದಲ ವಿಕೆಟ್ಗೆ 63 ರನ್(38 ಎಸೆತ) ಜೊತೆಯಾಟವಾಡಿತು. ಪೃಥ್ವಿ ಶಾ 39 ರನ್(22 ಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ಸ್ವೀವ್ ಸ್ಮಿತ್ 24ರನ್ (22 ಸೆತ, 1 ಸಿಕ್ಸ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಅದರೆ ಇತ್ತ ಧವನ್ ಮಾತ್ರ ತಮ್ಮ ಬ್ಯಾಟಿಂಗ್ ಪರಾಕ್ರಮ ಮುಂದುವರಿಸಿ ತಂಡದ ಗೆಲುವಿನ ಗಡಿ ಮುಟ್ಟಿಸಿದರು. ಉತ್ತಮವಾಗಿ ಬ್ಯಾಟ್ ಬೀಸಿದ ಧವನ್ 69 ರನ್(47 ಎಸೆತ, 6 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗದೆ ಉಳಿದರು. ಇವರಿಗೆ ಕಡೆಯಲ್ಲಿ ಉತ್ತಮ ಸಾಥ್ ನೀಡಿದ ಶಿಮ್ರಾನ್ ಹೆಟ್ಮಿಯರ್ ಬೌಂಡರಿ ಸಿಕ್ಸ್ ಬಾರಿಸಿ 16ರನ್(4 ಎಸೆತ, 1 ಬೌಂಡರಿ, 2 ಸಿಕ್ಸ್) ಮಾಡಿ ಮಿಂಚಿದರು.
Advertisement
ಮಯಾಂಕ್ ಅಗರ್ವಾಲ್ ನಾಯಕನ ಆಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡದ ಹಂಗಾಮಿ ನಾಯಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಆಧಾರವಾಗಿ ಕಡೆಯವರೆಗೆ ಬ್ಯಾಟಿಂಗ್ ಮಾಡಿ ಮಿಂಚಿದರು. ಒಂದು ಕಡೆಯಲ್ಲಿ ಪಂಜಾಬ್ ತಂಡದ ವಿಕೆಟ್ ಪತನವಾಗುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಮಯಂಕ್ ಏಕಾಂಗಿಯಾಗಿ ತಂಡವನ್ನು ಆಧರಿಸಿದರು. ಕ್ರಿಸ್ ಗೇಲ್ 13ರನ್(16 ಎಸೆತ, 1 ಸಿಕ್ಸ್) ಸಿಡಿಸಿ ರಬಾಡಗೆ ಬಲಿಯಾದರು. ನಂತರ ಬಂದ ಡೇವಿಡ್ ಮಲಾನ್ ಸಿಡಿಯುವ ಸೂಚನೆ ನೀಡಿದರು ಕೂಡ 26ರನ್(26 ಎಸೆತ 1 ಬೌಂಡರಿ, 1ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಪಂಜಾಬ್ ತಂಡಕ್ಕೆ ನೆರವಾಗಲಿಲ್ಲ. ಆದರೆ ನಾಯಕ ಮಯಾಂಕ್ ಅಗರ್ವಾಲ್ ಆರಂಭಿಕನಾಗಿ ಬಂದು ಕಡೆಯ ವರೆಗೆ ಬ್ಯಾಟ್ ಬೀಸಿ 99ರನ್(58 ಎಸೆತ, 8 ಬೌಂಡರಿ, 4 ಸಿಕ್ಸ್) ಸಿಡಿಸಿ ಔಟ್ ಆಗದೆ ಉಳಿದರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 166ರನ್ ಗಳಿಸಿತು.
ಡೆಲ್ಲಿ ಪರ ಬೌಲಿಂಗ್ನಲ್ಲಿ ಮಿಂಚಿದ ಕಗಿಸೋ ರಬಾಡ 3 ವಿಕೆಟ್ ಪಡೆದರೆ. ಆವೀಶ್ ಖಾನ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.