ಗಣಿ ಜಿಲ್ಲೆಯಲ್ಲಿಂದು 98 ಜನಕ್ಕೆ ಕೊರೊನಾ

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿಂದು 98 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,452 ಕ್ಕೇರಿಕೆಯಾಗಿದೆ.

ಜಿಲ್ಲೆಯಲ್ಲಿ ಈ ದಿನ 98 ಮಂದಿಗೆ ಈ ಮಹಾಮಾರಿ ಕೊರೊನಾ ಸೋಂಕು ತಗುಲಿರೋದು ಧೃಡಪಟ್ಟಿದೆ. ಕೇವಲ ಜಿಂದಾಲ್ ಒಂದರಲ್ಲೇ ಈವರೆಗೆ 643 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,452 ಕ್ಕೇರಿಕೆಯಾಗಿದ್ದು, 1327 ಮಂದಿ ಗುಣಮುಖರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಸಾವಿನ ಸರಣಿಯೂ ಮುಂದುವರಿದಿದ್ದು ಸಾವನ್ನಪ್ಪಿದವರ ಸಂಖ್ಯೆ 60 ಕ್ಕೆ ಏರಿಕೆಯಾಗಿದೆ.

- Advertisement -

ಬಳ್ಳಾರಿಯ ಇಬ್ಬರು ಮಹಿಳೆಯರು ಹಾಗೂ ಹೊಸಪೇಟೆಯ ಒಬ್ಬ ಪುರುಷ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,065 ಸಕ್ರಿಯ ಪ್ರಕರಣಗಳಿದ್ದು, ಇಂದು ಅಂದಾಜು 90 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್ – 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

- Advertisement -

- Advertisement -