ಬೆಂಗಳೂರು: ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಸರ್ಗ ಸಹಜ ಗಿಡಮೂಲಿಕೆಗಳನ್ನು ಬಳಸಿ ಅಭಿವೃದ್ಧಿಪಡಿಸಿದ ಆಯುರ್ವೇದ ಔಷಧಿ ‘ವೈರಾನಾರ್ಮ್’ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ, ಖೋಡೆ ಸಮೂಹವು ಪರ್ಯಾಯ ಔಷಧ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದೆ.
ಕ್ಯಾಪ್ಯೂಲ್ ರೂಪದಲ್ಲಿ ಲಭ್ಯವಿರುವ ‘ವೈರಾನಾರ್ಮ್’ ಅನ್ನು ಅಥೆರಾ ಡಾಬರ್ ರೀಸರ್ಚ್ ಫೌಂಡೇಷನ್ (ಡಿ.ಆರ್.ಎಫ್.) ಲೈಫ್ ಸೈನ್ಸಸ್ ನ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸುದೀರ್ಘಾವಧಿಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ (ಚಿಕಿತ್ಸಾ ಪ್ರಯೋಗ)ಗೆ ಒಳಪಡಿಸಿದ ವಿಶಿಷ್ಟ ಆಯುರ್ವೇದ ಕ್ಯಾಪ್ಸೂಲ್ ಇದಾಗಿದೆ.
Advertisement
ಕ್ಲಿನಿಕಲ್ ಟ್ರಯಲ್ ಗಳಲ್ಲಿ ಪರಿಣಾಮಕಾರಿ ಎಂದು ದೃಢಪಟ್ಟಿರುವ ‘ವೈರಾನಾರ್ಮ್’ ಅನ್ನು ಅಪೇಕ್ಷಿತ ಫಲಿತಾಂಶ ಪರೀಕ್ಷೆ ಹಾಗೂ ಸುರಕ್ಷತಾ ಅಧ್ಯಯನಗಳಿಗೆ ಒಳಪಡಿಸಲಾಗಿದೆ. ಇದು ದೇಹದಲ್ಲಿ ವೈರಾಣುಗಳ ಸಂಖ್ಯೆ ಹೆಚ್ಚುವುದನ್ನು ತಡೆಯುತ್ತದೆ. ಆದ್ದರಿಂದ, ರೋಗಲಕ್ಷಣವಿಲ್ಲದ ಹಾಗೂ ರೋಗಲಕ್ಷಣದೊಂದಿಗೆ ಅಲ್ಪ ಪ್ರಮಾಣದಿಂದ ಸಾಧಾರಣ ಪ್ರಮಾಣದವರೆಗಿನ ಕೋವಿಡ್ ಸೋಂಕಿತರಿಗೆ ಇದನ್ನು ಈಗಾಗಲೇ ನೀಡುತ್ತಿರುವ ಚಿಕಿತ್ಸೆಯ ಜೊತೆಗೆ ಹೆಚ್ಚುವರಿಯಾಗಿ ನೀಡಬಹುದು. ಅಲ್ಪ ಪ್ರಮಾಣದ ಸೋಂಕಿನ ಪ್ರಮಾಣವು ಸಾಧಾರಣ ಹಂತಕ್ಕೆ ಹೋಗದಂತೆ ತಡೆಯಲು ಇದು ಸಹಕಾರಿಯಾಗಿದೆ.
Advertisement
Advertisement
ನ್ಯೂಟ್ರೋಫಿಲ್- ಲಿಂಫೋಸೈಟ್ ಅನುಪಾತ (ಎನ್.ಎಲ್.ಆರ್.) ಎಂಬುದು ಕೋವಿಡ್ ಬಾಧಿತರ ಸೋಂಕು ಉಲ್ಬಣವನ್ನು ತೋರಿಸುವ ಜೈವಿಕ ಸೂಚಕವಾಗಿದೆ. ಇದು ಅತ್ಯಂತ ಉಪಯುಕ್ತವಾದ, ತ್ವರಿತವಾದ ಹಾಗೂ ದುಬಾರಿಯಲ್ಲದ ವಿಧಾನವೂ ಆಗಿದೆ. ಎನ್.ಎಲ್.ಆರ್. ಅನುಪಾತ ಕಡಿಮೆಯಿದ್ದರೆ ಉರಿಯೂತ ಕಡಿಮೆ ಮಟ್ಟದಲ್ಲಿದೆ ಹಾಗೂ ಅಧಿಕ ಸೈಟೋಟಾಕ್ಸಿಕ್ ಟಿ ಜೀವಕೋಶ ಪ್ರತಿರೋಧಕತೆ ಎಂಬುದನ್ನು ಸೂಚಿಸುತ್ತದೆ. ಹೀಗೆಂದರೆ ವೈರಾಣುಗಳ ಸಂಖ್ಯೆ ಕಡಿಮೆ ಎಂದೂ ಹಾಗೆಯೇ ಚೇತರಿಕೆಗೆ ಪೂರಕ ಎಂಬುದು
Advertisement
ಮನುಷ್ಯನ ದೇಹವು ಕಾಯಿಲೆಯ ವಿರುದ್ಧ ಎರಡು ಬಗೆಯ ಪ್ರತಿರೋಧಗಳನ್ನು ತೋರುತ್ತದೆ. ಮೊದಲನೆಯದು, ‘ಪ್ರತಿಜೈವಿಕ ಮಧ್ಯವರ್ತಿ ಪ್ರತಿರೋಧ’ವಾದರೆ, ಎರಡನೆಯದು, ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವಾಗಿದೆ. ಸಾಮಾನ್ಯ ವಿಧಾನಗಳ ಮೂಲಕ ಮಾಪನ ಮಾಡಲಾಗದ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವು ವೈರಾಣುಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ‘ವೈರಾನಾರ್ಮ್’ ಔಷಧಿಯು ವ್ಯಕ್ತಿಯ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವನ್ನು ಹೆಚ್ಚಿಸುವ ಮೂಲಕ ಬೇಗನೇ ಚೇತರಿಸಿಕೊಳ್ಳಲು ಹಾಗೂ ಸೋಂಕು ಹರಡುವುದನ್ನು ತಡೆಯಲು ಸಹಕರಿಸುತ್ತದೆ. ಇದು, ಕೋವಿಡ್ ಬಾಧಿತರ ಪ್ರಮುಖ ರೋಗಲಕ್ಷಣವಾದ ಕೆಮ್ಮಿನ ತೀವ್ರತೆ, ಅದರ ಅವಧಿ ಹಾಗೂ ದೀರ್ಘಶ್ವಾಸದ ಕೊರತೆಯನ್ನು ತಗ್ಗಿಸುತ್ತದೆ ಎಂಬುದು ಕ್ಲಿನಿಯಲ್ ಟ್ರಯಲ್ ಗಳಲ್ಲಿ ದೃಢಪಟ್ಟಿದೆ. ಈ ಔಷಧಿಗೆ ಬಳಸುವ ಗಿಡಮೂಲಿಕೆ ಅಂಶಗಳು ವೈರಾಣುವು ಮೂಗಿನಲ್ಲಾಗಲೀ ಅಥವಾ ಗಂಟಲಿನಲ್ಲಾಗಲೀ ಜೀವಕೋಶದೊಂದಿಗೆ ಬೆಸೆದುಕೊಳ್ಳುವುದಕ್ಕೆ ಅವಕಾಶ ನೀಡದಿರುವ ಮೂಲಕ ರಕ್ಷಣೆ ನೀಡುತ್ತವೆ.
“ಕಡಿಮೆಯಾಗುವ ಎನ್.ಎಲ್.ಆರ್. ಅನುಪಾತವು ಕೋಶ ಮಟ್ಟದ ಉರಿಯೂತವನ್ನು ಹಾಗೂ ಕೋಶ ಮಧ್ಯವರ್ತಿ ಪ್ರತಿರೋಧದ ಹೆಚ್ಚಳವನ್ನು ಖಾತರಿಪಡಿಸುತ್ತದೆ. ಎನ್.ಎಲ್. ಅನುಪಾತವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಕ್ಲಿನಿಕಲ್ ಟ್ರಯಲ್ ನಲ್ಲಿ ಕ್ರಮಬದ್ಧವಾಗಿ ಸಾಬೀತುಪಡಿಸಿರುವ ಪರ್ಯಾಯ ಔಷಧಿ ಇದೊಂದೇ ಆಗಿದೆ. ರೋಗ ಪ್ರತಿರೋಧದ ಮೂಲಭೂತ ತತ್ತ್ವಗಳನ್ನು ಆಧರಿಸಿ ‘ವೈರಾನಾರ್ಮ್’ ಅಭಿವೃದ್ಧಿಪಡಿಸಿರುವುದರಿಂದ ವೈರಸ್ ನ ರೂಪಾಂತರಗಳಿಗೂ ಇದು ಪರಿಣಾಮಕಾರಿಯಾಗಿರುತ್ತದೆ” ಎನ್ನುತ್ತಾರೆ ಈ ಔಷಧಿಯನ್ನು ಸೂತ್ರೀಕರಿಸಿದ ಡಾ.ಕೆ.ಜಿ.ಪದ್ಮನಾಭನ್.
ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಬಾಧಿತ ಗರ್ಭಿಣಿಯರಿಗೆ ಹಾಗೂ ಮಗುವಿಗೆ ಜನ್ಮ ನೀಡಿದ ತಾಯಂದಿರ ಮೇಲೆ ‘ವೈರಾನಾರ್ಮ್’ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಅನುಮತಿ ನೀಡಿದೆ ಎಂದು ಅಲ್ತಿಯಾ ಡಾಬರ್ ಸಂಶೋಧನಾ ಫೌಂಡೇಷನ್ ಲೈಫ್ ಸೈನ್ಸಸ್ ನ ಡಾ. ಮನು ಜಗ್ಗಿ ಒತ್ತಿ ಹೇಳುತ್ತಾರೆ.
ರಾಷ್ಟ್ರೀಯ ಆಸ್ಪತ್ರೆಗಳ ಮೌಲ್ಯಾಂಕನ ಮಂಡಳಿಯ ಮಾನ್ಯತೆ ಹೊಂದಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಸಿ.ಟಿ.ಆರ್.ಐ. (ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ- ಇಂಡಿಯಾ) ಅನುಮೋದನೆ ಪಡೆದು ಈ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಇದಕ್ಕಾಗಿ 250 ಕೋವಿಡ್ ಸೋಂಕು ಬಾಧಿತರನ್ನು ಆಯ್ಕೆ ಮಾಡಿ 6 ತಿಂಗಳ ಕಾಲ ಪರೀಕ್ಷೆಗಳನ್ನು ನಡೆಸಲಾಯಿತು. ಸಿ.ಟಿ.ಆರ್.ಐ. ಮಾರ್ಗದರ್ಶಿ ಸೂತ್ರದ ಪ್ರಕಾರ, ಇವರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಇದರಲ್ಲಿ, ಒಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡಲಾಗುತ್ತಿತ್ತು. ಇನ್ನೊಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡುತ್ತಿರಲಿಲ್ಲ. ‘ವೈರಾನಾರ್ಮ್’ ಕೊಡದವರಿಗಿಂತ ಅದನ್ನು ಕೊಟ್ಟವರಲ್ಲಿ ಚೇತರಿಕೆಯು ಉತ್ತಮವಾಗಿರುವುದು ವಿವರವಾದ ವಿಶ್ಲೇಷಣೆಗಳಿಂದ ದೃಢಪಟ್ಟಿದೆ.
ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಇದು ಕಿರಿಯ ವಯಸ್ಕರು (40ಕ್ಕಿಂತ ಕಡಿಮೆ ವರ್ಷ) ಹಾಗೂ ಹಿರಿಯ ವಯಸ್ಕರು (60ಕ್ಕಿಂತ ಹೆಚ್ಚು ವರ್ಷ), ಎರಡೂ ವಯೋಮಾನದವರಲ್ಲಿ, ‘ಟಿ’ ಜೀವಕೋಶಗಳ ಪ್ರತಿರೋಧವನ್ನು ಉತ್ತೇಜಿಸುವ ಜೊತೆಗೆ ಜೀವಕೋಶೀಯ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಎಂಬುದು ಕಂಡುಬಂದಿದೆ. ಕೋವಿಡ್ 2ನೇ ಅಲೆಯು ಹಿರಿಯ ವಯಸ್ಸಿನವರ ಜೊತೆಗೆ ಕಿರಿಯ ವಯಸ್ಸಿನವರನ್ನೂ ಬಾಧಿಸುತ್ತಿರುವ ಈ ಸನ್ನಿವೇಶದಲ್ಲಿ ಇದು ಹೆಚ್ಚು ಗಮನ ಸೆಳೆಯುವ ಸಂಗತಿಯಾಗಿದೆ.
ಜೀವಕೋಶ ಪ್ರತಿರೋಧದಲ್ಲಿ ಆಗುವ ಹೆಚ್ಚಳವು ದೀರ್ಘಾವಧಿ ಚೇತರಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೇ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಂತಹ ಸಹವರ್ತಿ ರೋಗಗಳಿಂದ ಬಾಧಿತರಾದವರಿಗೂ ‘ವೈರಾನಾರ್ಮ್’ ಸುರಕ್ಷಿತವಾಗಿದೆ.
ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾಮಿ ಖೋಡೆ ಅವರು ಈ ಉತ್ಪನ್ನ ಬಿಡುಗಡೆಯಾಗುತ್ತಿರುವುದಕ್ಕೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. “ನಮ್ಮ ಕುಟುಂಬದ ಹಿರಿಯರ ಆಶೀರ್ವಾದ ಹಾಗೂ ದೂರದರ್ಶಿತ್ವದ ಬಲದಿಂದ ಈ ಉತ್ಪನ್ನ ರೂಪಿಸುವಲ್ಲಿ ನಾನು ಶಕ್ತಿ ಮೀರಿ ತೊಡಗಿಸಿಕೊಂಡಿದ್ದೇನೆ. ಕ್ಲಿನಿಕಲ್ ಟ್ರಯಲ್ ನಲ್ಲಿ ‘ವೈರಾನಾರ್ಮ್’ ಪರಿಣಾಮಕಾರಿ ಎಂದು ದೃಢಪಟ್ಟಿದ್ದು, ಅದರ ಹಿಂದಿನ ತಾಂತ್ರಿಕ ವಿವರಗಳನ್ನು ಜನರ ಮುಂದಿಡಲು ಸಂತೋಷವಾಗುತ್ತಿದೆ” ಎಂದು ಅವರು ಹೇಳುತ್ತಾರೆ.
ವೈಜ್ಞಾನಿಕ ತತ್ತ್ವಾಧಾರಿಕ ನೈಸರ್ಗಿಕ ಅಂಶಗಳಿಂದ ಕೂಡಿರುವ ‘ವೈರಾನಾರ್ಮ್’, ಕಾಯಿಲೆಗಳಿಗೆ ಪ್ರತಿರೋಧ ಹೆಚ್ಚಿಸುವ ಮೂಲಕ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖವಾಗಲು ಸಹಕರಿಸುತ್ತದೆ’ ಎಂದೂ ಸ್ವಾಮಿ ಹೇಳುತ್ತಾರೆ.
‘ವೈರಾನಾರ್ಮ್’ ರಾಜ್ಯ/ದೇಶದೆಲ್ಲೆಡೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ 60 ಕ್ಯಾಪ್ಸೂಲ್ ಗಳ ಬಾಟಲಿಗೆ ರೂ 2,100 ಇದೆ.