– ಇದು ಪಬ್ಲಿಕ್ ಟಿವಿಯ ಬಿಗ್ ಎಕ್ಸ್ ಪೋಸ್
ಬೆಂಗಳೂರು: ಕೊರೊನಾ ಬಂದರೆ ಸರ್ಕಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲ್ಲ. ಕೊರೊನಾ ವೈರಸ್ ವಿಚಾರದಲ್ಲಿ ಸರ್ಕಾರ ಸಿಲಿಕಾನ್ ಸಿಟಿ ಮಂದಿಯ ಕಣ್ಣಿಗೆ ಮಣ್ಣೆರಚಿದ ಅಸಲಿ ಕಥೆಯನ್ನು ಇಂದು ಪಬ್ಲಿಕ್ ಟಿವಿ ಬಯಲಿಗೆಳೆದಿದೆ.
ಹೌದು. ಕೊರೊನಾಗೆ ಸರ್ಕಾರ ಬಿಡುಗಡೆ ಮಾಡಿದ ಖಾಸಗಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಸಿಗಲ್ಲ. ಸರ್ಕಾರಿ ಆಸ್ಪತ್ರೆ ಬೆಡ್ ಫುಲ್ ಆಗಿದ್ದು, ಇನ್ನು ಸರ್ಕಾರ ಬಿಡುಗಡೆ ಮಾಡಿದ ಖಾಸಗಿ ಆಸ್ಪತ್ರೆಗಳಲ್ಲಿ ಟ್ರೀಟ್ ಮೆಂಟ್ ಸಿಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
Advertisement
Advertisement
ಬೆಂಗಳೂರಿನ ಜನ ಸರ್ಕಾರದ ಮಾತನ್ನು ನಂಬಿ ಖಾಸಗಿ ಆಸ್ಪತ್ರೆಗೆ ಹೋದರೆ ಅಷ್ಟೆ. 51 ಖಾಸಗಿ ಆಸ್ಪತ್ರೆಗಳ ಹೆಸರು ಹಾಗೂ ನಂಬರನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ 51 ಖಾಸಗಿ ಆಸ್ಪತ್ರೆಯ ದೂರವಾಣಿ ಸಂಖ್ಯೆಯಲ್ಲಿ ಸುಮಾರು 40 ಆಸ್ಪತ್ರೆಗಳ ನಂಬರ್ಗೆ ಕಾಲ್ ಕನೆಕ್ಟ್ ಆಗಲ್ಲ, ರಾಂಗ್ ನಂಬರ್ ಅಥವಾ ನಂಬರ್ ನಾಟ್ ಎಕ್ಸಿಸ್ಟ್ ಅನ್ನುವ ಉತ್ತರ ಬರುತ್ತೆ.
Advertisement
ಪಬ್ಲಿಕ್ ಟಿವಿ ಸತತ ಒಂದು ಗಂಟೆಗಳ ಕಾಲ ಅಷ್ಟು ನಂಬರ್ಗೆ ಟ್ರೈ ಮಾಡಿದರೂ ಕಾಲ್ ಕನೆಕ್ಟ್ ಆಗಲೇ ಇಲ್ಲ. ಬದಲಾಗಿ ಸಂಪರ್ಕಕ್ಕೆ ಸಿಕ್ಕಿದ್ದು ಬೆರಳೆಣಿಕೆಯಷ್ಟೇ ಖಾಸಗಿ ಆಸ್ಪತ್ರೆಗಳು ಮಾತ್ರ.
Advertisement
ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಾ?, ಏನಂದ್ರು ಆಸ್ಪತ್ರೆ ಸಿಬ್ಬಂದಿ…?
1. ಬಿಎಂಎಸ್ ಆಸ್ಪತ್ರೆ
ನಮ್ಮಲ್ಲಿ ಐಸೋಲೇಷನ್ ವಾರ್ಡ್ ಎಲ್ಲ ರೆಡಿಯಾಗಿಲ್ಲ, ಸರ್ಕಾರ ಕೊಟ್ಟಿದ್ದಾರೆ. ಅವರನ್ನೇ ಕೇಳಬೇಕು ನಾವು ಕೋವಿಡ್ ಪೇಷೆಂಟ್ ಗೆ ಟ್ರೀಟ್ ಮೆಂಟ್ ಕೊಡಲ್ಲ.
2. ಸಾಗರ್ ಆಸ್ಪತ್ರೆ
ಸರ್ಕಾರ ಹೆಸರು ಕೊಟ್ಟಿದ್ದಾರೆ. ಆದರೆ ನಾವು ಕೋವಿಡ್ ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡಲ್ಲ. ಸದ್ಯಕ್ಕೆ ಯಾವ ಪೇಷೆಂಟ್ ಇಲ್ಲ. ನೋಡೋಣ. ರೆಡಿಯಾದ ಮೇಲೆ ಬೇಕಾದರೆ ಹೇಳ್ತೀವಿ. ಆದರೆ ಈಗ ಯಾರಿಗೂ ಕೊಡಲ್ಲ.
3. ವೇಗ್ ಹಾಸ್ಪಿಟಲ್
ನಮ್ಮಲ್ಲಿ ಇವತ್ತು ಇನ್ನೂ ಡಿಸೈಡ್ ಆಗಬೇಕು. ಹೆಚ್ಚು ಬೆಡ್ ಎಲ್ಲಾ ಇಲ್ಲ. ಐಸಿಯು ಅಂತೂ ಒಂದೂ ಇಲ್ಲ. ಜನರಲ್ ವಾರ್ಡ್ ಗೆ ಹತ್ತು ಸಾವಿರ ಪ್ರತಿದಿನ, ಸಂಜೆ ಕಾಲ್ ಮಾಡಿ ನೋಡೋಣ. ನಾವಿನ್ನು ಡಿಸೈಡ್ ಮಾಡಿಲ್ಲ.
4. ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜ್
ಮೇಡಂ ನಾನು ಕೆಲಸ ಬಿಟ್ಟು ತುಂಬಾ ಟೈಂ ಆಗಿದೆ. ಬೇರೆ ಆಸ್ಪತ್ರೆಯಲ್ಲಿ ಇದ್ದೇನೆ. ನನ್ನ ನಂಬರ್ ಲಿಸ್ಟ್ ನಲ್ಲಿ ಯಾಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಂಗೂ ತುಂಬಾ ಫೋನ್ ಬರ್ತಿದೆ. ನಾನೀಗ ಆ ಆಸ್ಪತ್ರೆಯಲ್ಲಿಲ್ಲ ಎಂದು ಪಬ್ಲಿಕ್ ಟಿವಿ ಪ್ರತಿನಿಧಿ ಬಳಿ ಹೇಳಿದ್ದಾರೆ.
5. ಐ ಪೌಂಡೇಷನ್
ನೋಡಿ ನಾವು ಕೊರೊನಾಗೆ ಟ್ರೀಟ್ಮೆಂಟ್ ಕೊಡಲ್ಲ. ನಮ್ ಹೆಸರು ಇಲ್ಲಿ ಯಾಕೆ ಕೊಟ್ಟಿದ್ದಾರೋ ನೀವು ಹೋಗಿ ಸರ್ಕಾರನಾ ಕೇಳಿ. ನಮ್ಮಲ್ಲಿ ಕೊರೊನಾಗೆ ಟ್ರೀಟ್ ಮೆಂಟ್ ಕೊಡಲ್ಲ.
ಒಟ್ಟಿನಲ್ಲಿ ಸರ್ಕಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಹಾಮಾರಿ ಕೊರೊನಾಗೆ ಚಿಕಿತ್ಸೆ ಸಿಗುತ್ತಿಲ್ಲ. ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಮೂಲಕ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡ್ತಿದೆಯಾ ಅನ್ನೋ ಅನುಮಾನ ಮೂಡುತ್ತಿದೆ.