ಬೆಂಗಳೂರು: ಸರ್ಕಾರ ಹೇರಿರುವ ಜನತಾ ಕರ್ಫ್ಯೂ ನಿರ್ಧಾರಕ್ಕೆ ಬೀದಿ ಬದಿ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದು ಖರೀದಿ ಅವಧಿಯನ್ನು ವಿಸ್ತರಿಸಬೇಕು ಎಂದು ಹೇಳಿದ್ದಾರೆ.
ಕಳೆದ ವಾರ ಜಾರಿ ಮಾಡಲಾದ ಜನತಾ ಕರ್ಫ್ಯೂ ಸಮಯದಲ್ಲಿ ಅಗತ್ಯ ಸೇವೆ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6-10 ಗಂಟೆಗಳ ಸಮಯವನ್ನು ನಿಗದಿ ಮಾಡಲಾಗಿದೆ. ಆದರೆ ಈ ಸಮಯದಲ್ಲಿ ವ್ಯಾಪಾರಕ್ಕೆ ಗ್ರಾಹಕರು ಬರುವುದಿಲ್ಲ. ದಯಮಾಡಿ ಸಮಯವನ್ನು ವಿಸ್ತರಿಸಿ ಎಂದು ಸರ್ಕಾರಕ್ಕೆ ಗಾಂಧಿ ಬಜಾರ್ ತರಕಾರಿ ವ್ಯಾಪಾರಿಗಳು ಒತ್ತಾಯ ಮಾಡಿದ್ದಾರೆ.
Advertisement
Advertisement
ಮಾರ್ಕೆಟ್ ಸ್ಥಳಾಂತರದಿಂದ ತೊಂದರೆ ಆಗುತ್ತಿದೆ. ಈಗ ಮತ್ತೆ ಲಾಕ್ ಡೌನ್ ಮಾಡಿದರೆ ನಾವು ಬದುಕುವುದೇ ಕಷ್ಟವಾಗುತ್ತದೆ. ಬಡ ವ್ಯಾಪಾರಿಗಳಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
Advertisement
ಕಳೆದ ಲಾಕ್ಡೌನ್ನಿಂದ ಇನ್ನೂ ನಾವು ಚೇತರಿಸಿಕೊಂಡಿಲ್ಲ. ಈಗ ಮತ್ತೆ ಕರ್ಫ್ಯೂ ಮಾಡಿದ್ದಾರೆ. ದಯಮಾಡಿ ಅವಧಿ ಹೆಚ್ಚು ಮಾಡಬೇಕು. ವೀಕೆಂಡ್ ಲಾಕ್ಡೌನ್ ಸಮಯದಲ್ಲಿ ಜನ ಖರೀದಿಗೆ ಬಂದಿಲ್ಲ. ದಯಮಾಡಿ ತರಕಾರಿ, ಹಣ್ಣು ವ್ಯಾಪಾರಕ್ಕೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ.