ಕೋಲ್ಕತ್ತಾ: ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡವೊಂದು ಕಾಲುವೆಗೆ ಉರುಳಿ ಬಿದ್ದಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.
ದಾಸ್ಪುರದ ನಿಶ್ಚಿಂತಾಪುರ ಗ್ರಾಮದಲ್ಲಿ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕಾಲುವುಗೆ ಬೀಳುತ್ತಿರುವ 30 ಸೆಕೆಂಡುಗಳ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕ್ಷಣಾರ್ಧದಲ್ಲಿ ಮೂರು ಅಂತಸ್ತಿನ ಕಟ್ಟಡ ಕಾಲುವೆಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Advertisement
Advertisement
ಕಟ್ಟಡ ಹತ್ತಿರದ ರಾಜ್ಯ ನೀರಾವರಿ ಕಾಲುವೆಯಲ್ಲಿ ಸ್ವಚ್ಛತೆ ಮಾಡುವಾಗ ಕಟ್ಟಡದ ಅಡಿಪಾಯ ಸಡಿಲಗೊಂಡಿದೆ. ಇದರಿಂದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕಾಲುವೆಗೆ ಬಿದ್ದಿದೆ. ಎರಡು ದಿನಗಳ ಹಿಂದೆಯೇ ಕಟ್ಟಡ ಬಿರುಕು ಬಿಟ್ಟಿತ್ತು ಎಂದು ವರದಿಯಾಗಿದೆ.
Advertisement
ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕ್ಷಣಾರ್ಧದಲ್ಲಿ ಕಾಲುವೆಗೆ ಉರುಳಿ ಬಿದ್ದಿದೆ. ಇದರಿಂದ ನನಗೆ ಭಾರೀ ನಷ್ಟವಾಗಿದೆ. ಆದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕಟ್ಟಡದ ಮಾಲೀಕ ಹೇಳಿದ್ದಾರೆ.
Advertisement
ನಿಸರ್ಗ ಚಂಡಮಾರುತ್ತದಿಂದ ಹಲವು ಕಡೆ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣ ಬಂಗಾಳದಲ್ಲಿ ಶುಕ್ರವಾರದಿಂದ ಭಾರೀ ಮಾನ್ಸೂನ್ ಮಳೆಯಾಗುತ್ತಿದೆ.