– ಚಿತ್ರ ಮಂದಿರ, ಈಜುಕೊಳ, ಮನೋರಂಜನಾ ಸ್ಥಳಗಳಿಗೆ ನಿರ್ಬಂಧ
– ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಸಾಮಾಜಿಕ ಕಬ್‍ಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲ ನಿರ್ಬಂಧಗಳನ್ನು ಹೇರಿದೆ.
Advertisement
ಅಂತರಾಜ್ಯ ಪ್ರಯಾಣಿಕರು ರಾಜ್ಯಕ್ಕೆ ಪ್ರವೇಶಿಸಬೇಕಾದರೆ ಪಾಲಿಸಬೇಕಾದ ಕೊರೊನಾ ನಿಯಮಗಳಲ್ಲಿ ಸಹ ರಾಜ್ಯಸರ್ಕಾರ ಸಡಿಲಿಕೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಕ್ಲಬ್‍ಗಳನ್ನು ತೆರೆಯಲು ಸಹ ಅನುಮತಿ ನೀಡಿದೆ. ಕ್ಲಬ್ ಗಳಲ್ಲಿ ಮೇಜಿನ ಮೇಲೆ ಆಹಾರ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶ ನೀಡಲಾಗಿದ್ದು, ಸಾಮಾಜಿಕ ಕ್ಲಬ್ ಗಳಲ್ಲಿ ಮದ್ಯ ಸರಬರಾಜನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Advertisement
ಸೋಟ್ರ್ಸ್ ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಸಹ ಅನುಮತಿ ನೀಡಲಾಗಿದೆ. ಪ್ರೇಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಬಹುದು ಎಂದು ಸರ್ಕಾರ ತಿಳಿಸಿದೆ. ಯಾವುದೇ ಕ್ರೀಡಾ ಚಟುವಟಿಕೆಗೆ ಪ್ರೇಕ್ಷರು ಭಾಗವಹಿಸುವಂತಿಲ್ಲ ಎಂದು ಹೇಳಲಾಗಿದೆ.
Advertisement
Advertisement
ಈಜುಕೊಳ, ಮನೋರಂಜನಾ ಸ್ಥಳಗಳು, ಉದ್ಯಾನವನ, ಚಿತ್ರಮಂದಿರಗಳು, ಬಾರ್ ಗಳು, ಸಭಾಂಗಣ, ಅಸೆಂಬ್ಲಿ ಹಾಲ್‍ಗಳಿಗೆ ಹೇರಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ. ಅಲ್ಲದೆ ಸಾಮಾಜಿಕ, ರಾಜಕೀಯ , ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಮತ್ತು ಇತರೆ ಬೃಹತ್ ಸಭೆಗಳ ನಿರ್ಬಂಧವನ್ನು ಸಹ ಮುಂದುವರಿಸಲಾಗಿದೆ.