ಉತ್ತರಕನ್ನಡ: ತಾಲೂಕಿನ ಕಿರೇಸೂರು ಗ್ರಾಮದ ಬಳಿ ಬೆಳ್ಳಂಬೆಳಗ್ಗೆ ವಾಹನ ಪಲ್ಟಿಯಾಗಿರುವ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನವೊಂದು ಪಲ್ಟಿಯಾಗಿದೆ. ಕ್ರೂಸರ್ ಪಲ್ಟಿಯಾದ ಪರಿಣಾಮ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದುರಂತಕ್ಕಿಡಾಗಿರುವ ವಾಹನ ಹಾಗೂ ಪ್ರಯಾಣಿಕರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Advertisement
Advertisement
ರಸ್ತೆ ಅಪಘಾತಕ್ಕಿಡಾಗಿರುವ ವಾಹನದಲ್ಲಿರುವವರು ಮುಧೋಳದಿಂದ ಶಿಗ್ಗಾಂವಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Advertisement