-ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾದ್ರೆ ತಪ್ಪು
ಬೆಂಗಳೂರು: ಕ್ಯಾಸಿನೋಗೆ ಯಾರದೋ ಜೊತೆ ಹೋದರು ಅನ್ನೋದು ತಪ್ಪಲ್ಲ. ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ರೆ ತಪ್ಪು ಎಂದು ಹೇಳುವ ಮೂಲಕ ಶಾಸಕ ಜಮೀರ್ ಅಹ್ಮದ್ ಖಾನ್ ನಡೆಯನ್ನ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಮರ್ಥಿಸಿಕೊಂಡಿದ್ದಾರೆ.
Advertisement
ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಜಮೀರ್ ಅಹ್ಮದ್ ಕ್ಯಾಸಿನೋಗೆ ಹೋಗಿರುವದನ್ನ ಒಪ್ಪಿಕೊಂಡಿದ್ದಾರೆ. ಈ ವಿಷಯದ ಕುರಿತು ನಾನು ಹೆಚ್ಚು ಮಾತನಾಡಲ್ಲ. ಬೇಕಿದ್ರೆ ಅವರನ್ನೇ ನೀವು ಕೇಳಬೇಕು. ನಾನು ವಿದೇಶಕ್ಕೆ ಹೋದಾಗ ಕ್ಯಾಸಿನೋ ಆಡುವ ಜಾಗವನ್ನ ನೋಡಿದ್ದೇನೆ. ಆದ್ರೆ ಅಲ್ಲಿ ಆಡಿಲ್ಲ. ಜಮೀರ್ ಕೊಲಂಬೋಗೆ ಹೋಗಿದ್ದು ಅಪರಾಧವಲ್ಲ ಎಂದು ಹೇಳಿದರು. ಇದನ್ನೂ ಓದಿ: ಎತ್ತಣ ಮಾಮರ, ಎತ್ತಣ ಕೋಗಿಲೆ. ಕದ್ದುಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ- ಜಮೀರ್ ಹೇಳಿಕೆಗೆ ಹೆಚ್ಡಿಕೆ ತಿರುಗೇಟು
Advertisement
Advertisement
ಡ್ರಗ್ಸ್ ಬಹಳ ವರ್ಷದಿಂದಲೇ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದರೆ ನಿಷ್ಪಕ್ಷಪಾತವಾಗಿ ಆಗಲಿ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ಪ್ರಕರಣ ಬಳಸಿಕೊಳ್ಳಬಾರದು. ಪ್ರಕರಣದ ತನಿಖೆಯನ್ನ ರಾಜಕೀಯ ದುರುದ್ದೇಶದಿಂದ ನಡೆಸಬಾರದು. ಜಮೀರ್ ಡ್ರಗ್ಸ್ ದಂಧೆಯಲ್ಲಿದ್ದರಾ? ಅದು ಗೊತ್ತಿಲ್ಲ. ಇನ್ನು ಜಮೀರ್ ಡ್ರಗ್ಸ್ ಜಾಲದಲ್ಲಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸುತ್ತಾರೆ. ಫಾಝಿಲ್ ಎಂಬಾತ ಡ್ರಗ್ಸ್ ದಂಧೆಯಲ್ಲಿದ್ದಾನೆ ಎಂದು ಹೇಳಲಾಗುತ್ತಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ
Advertisement
ಫೋಟೋದಲ್ಲಿ ಕಳ್ಳನು ನನ್ನ ಜೊತೆಯಲ್ಲಿರುತ್ತಾನೆ. ಹಾಗಂತ ನನ್ನನ್ನು ಕಳ್ಳ ಎಂದು ಹೇಳಲು ಆಗುತ್ತಾ?. ಜಮೀರ್ ನನ್ನನ್ನ ಭೇಟಿಯಾದಾಗ ಈ ಬಗ್ಗೆ ಕೇಳಿದಾಗ ತಮ್ಮದೇನೂ ತಪ್ಪಿಲ್ಲ ಎಂದು ಹೇಳಿದ್ದಾರೆ. ಪ್ರಶಾಂತ್ ಸಂಬರಗಿ ಬಿಜೆಪಿ ಜೊತೆಯಲ್ಲಿ ಇಲ್ವಾ? ಹಾಗಂತ ನಾವು ಏನಾದ್ರೂ ಆರೋಪ ಮಾಡಿದ್ದೀವಾ? ಡ್ರಗ್ಸ್ ಜಾಲದಲ್ಲಿ ಯಾರಿದ್ದಾರೆ ಅನ್ನೋದನ್ನ ಸಂಬರಗಿ ಕೇಳಿ. ರಾಜಕೀಯ ದುರುದ್ದೇಶದಿಂದ ಆರೋಪ ಮಾಡೋದು ತಪ್ಪು ಎಂದು ತಿಳಿಸಿದರು. ಇದನ್ನೂ ಓದಿ: ವಾಚ್ಮ್ಯಾನ್ ಆಗ್ಲಿಲ್ಲ, ಇನ್ನೂ ಆಸ್ತಿ ಬರ್ದು ಕೊಡ್ತೀರಾ -ಜಮೀರ್ಗೆ ಕುಟುಕಿದ ರಾಮದಾಸ್