ಲಕ್ನೋ: ನಡು ರಸ್ತೆಯಲ್ಲಿಯೇ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮಹಿಳೆ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.
Advertisement
ಲಕ್ನೋ ಟ್ರಾಫಿಕ್ ಸಿಗ್ನಲ್ನಲ್ಲಿ ಕ್ಯಾಬ್ ಚಾಲಕನಿಗೆ ಹಿಂದೆ-ಮುಂದೆ ನೋಡದೇ ಮಹಿಳೆ ಹಿಗ್ಗಾಮುಗ್ಗ ಥಳಿಸಿದ್ದ ವೀಡಿಯೋ ಸಿಸಿಟಿವಿ ಫೋಟೇಜ್ನಲ್ಲಿ ಸೆರೆಯಾಗಿತ್ತು. ಅಲ್ಲದೇ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
Viral Video: A Girl Continuously Beating a Man (Driver of Car) at Awadh Crossing, Lucknow, UP and allegedly Damaging his Phone inspite of him asking for Reason pic.twitter.com/mMH7BE0wu1
— Megh Updates ???? (@MeghUpdates) July 31, 2021
Advertisement
ಇದೀಗ ರಸ್ತೆಯಲ್ಲಿ ಕ್ಯಾಬ್ ಡ್ರೈವರ್ ಗೆ ಕಪಾಳಮೋಕ್ಷ ಮಾಡಿದ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ (ಡಿಸಿಪಿ) ಚಿರಂಜೀವ್ ನಾಥ್ ಸಿನ್ಹಾ ತಿಳಿಸಿದ್ದಾರೆ. ವೀಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯಿಂದ ನಾವು ದೂರು ಸ್ವೀಕರಿಸುತ್ತಿದ್ದು, ಕೃಷ್ಣ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
Advertisement
Not defending the girl here but the level of support this guy gets isn’t acceptable either. Yes, he stopped the car at the right time, but what if he didn’t. It’s a red signal, look at the way he and others are jumping the signal. He was speeding too. Don’t support either. https://t.co/MORiOdh3lU
— Rajeesh Nair ???????? (@iRajeeshNair) August 2, 2021
ವೀಡಿಯೋದಲ್ಲಿ ಬಿಳಿ ಶರ್ಟ್ ಧರಿಸಿದ್ದ ಮಹಿಳೆ ಜೀಬ್ರಾ ಕ್ರಾಸಿಂಗ್ ಮಧ್ಯೆ ನಿಂತು ಕ್ಯಾಬ್ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ ಟ್ರಾಫಿಕ್ ಜಾಮ್ ಆಗಿದೆ. ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಜಗಳವನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೂ ಮಹಿಳೆ ಬಿಡದೇ ಚಾಲಕನನ್ನು ಎಳೆದಾಡಿಕೊಂಡು ಕಪಾಳಕ್ಕೆ ಹೊಡೆಯುತ್ತಲೇ ಇರುತ್ತಾರೆ. ಈ ವೇಳೆ ಚಾಲಕನ ಮೊಬೈಲ್ನನ್ನು ಮಹಿಳೆ ಒಡೆದು ಹಾಕಿದ್ದಾರೆ. ಆಗ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡುವಂತೆ ಕ್ಯಾಬ್ ಚಾಲಕ ಸ್ಥಳೀಯರಿಗೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ:ನಡು ರಸ್ತೆಯಲ್ಲಿ ಕ್ಯಾಬ್ ಡ್ರೈವರ್ಗೆ ಹಿಗ್ಗಾಮುಗ್ಗ ಥಳಿಸಿದ ಯುವತಿ