– ಕೊನೆಯ ಮೂರು ಓವರಿನಲ್ಲಿ ರನ್ಗೆ ಕಡಿವಾಣ
– ಸ್ಯಾಮ್ ಕರ್ರನ್ ಸ್ಫೋಟಕ ಆಟ
ಪುಣೆ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಕ್ಯಾಚ್ ಕೈ ಚೆಲ್ಲಿ ಸೋಲುವ ಭೀತಿಯಲ್ಲಿ ಸಿಲುಕಿದ್ದ ಭಾರತ ಕೊನೆಗೆ 7 ರನ್ಗಳಿಂದ ರೋಚಕವಾಗಿ ಗೆದ್ದು ಪೇಟಿಎಂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.
330 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ ಟೆಸ್ಟ್ ಬಳಿಕ ಟಿ20 ಸರಣಿಯನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಜಯಿಸಿದೆ.
Advertisement
ಆರಂಭದಿಂದಲೇ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ 95 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಒಂದು ಹಂತದಲ್ಲಿ 168 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲುವ ಭೀತಿಯಲ್ಲಿದ್ದ ಇಂಗ್ಲೆಂಡ್ ಸ್ಯಾಮ್ ಕರ್ರನ್, ಮೊಯಿನ್ ಆಲಿ, ಅದಿಲ್ ರಶೀದ್ ಅವರ ಸಾಹಸದಿಂದ 300 ರನ್ಗಳ ಗಡಿಯನ್ನು ದಾಟಿ ಗೆಲುವಿನ ಹತ್ತಿರ ಬಂದಿತ್ತು.
Advertisement
Advertisement
ಭಾರತ ಗೆದ್ದಿದ್ದು ಹೇಗೆ?
22 ರನ್ ಗಳಿಸಿದ್ದಾಗ ಹಾರ್ದಿಕ್ ಪಾಂಡ್ಯ ಸ್ಯಾಮ್ ಕರ್ರನ್ ಅವರ ಕ್ಯಾಚ್ ಕೆಚ್ಚಿಲ್ಲಿದ್ದರು. ಇದರ ಸಂಪೂರ್ಣ ಲಾಭವನ್ನು ಪಡೆದ ಕರ್ರನ್ ಅಜೇಯ 95 ರನ್ ಗಳಿಸಿ ಇಂಗ್ಲೆಂಡ್ ವಿಜಯದ ಹತ್ತಿರ ತಗೆದುಕೊಂಡು ಬಂದಿದ್ದರು. ಶಾರ್ದೂಲ್ ಠಾಕೂರ್ ಎಸೆದ ಇನ್ನಿಂಗ್ಸ್ನ 47ನೇ ಓವರಿನಲ್ಲಿ 18 ರನ್ ಬಂದ ಹಿನ್ನೆಲೆಯಲ್ಲಿ ಇಂಗ್ಲೆಂಡ್ಗೆ ಜಯದ ಆಸೆ ಚಿಗುರಿತ್ತು.
Advertisement
ಕೊನೆಯ ಮೂರು ಓವರಿನಲ್ಲಿ 23 ರನ್ಗಳ ಅಗತ್ಯವಿತ್ತು. ಭುವನೇಶ್ವರ್ ಕುಮಾರ್ ಎಸೆದ 48ನೇ ಓವರಿನಲ್ಲಿ 2 ವೈಡ್ ಸೇರಿದಂತೆ 4 ರನ್ ಬಂತು. ಹಾರ್ದಿಕ್ ಪಾಂಡ್ಯ ಎಸೆದ 49ನೇ ಓವರಿನಲ್ಲಿ 5 ರನ್ ಬಂತು. ಈ ಓವರಿನಲ್ಲಿ ಶಾರ್ದೂಲ್ ಠಾಕೂರ್ ಮಾರ್ಕ್ ವುಡ್ ಕ್ಯಾಚ್ ಡ್ರಾಪ್ ಮಾಡಿದರೆ ಕರ್ರನ್ ಅವರ ಕ್ಯಾಚನ್ನು ನಟರಾಜನ್ ಕೈ ಚೆಲ್ಲಿದರು. ಕ್ಯಾಚ್ಗಳು ಡ್ರಾಪ್ ಆದ ಕಾರಣ ಪಂದ್ಯ ರೋಚಕ ಘಟಕ್ಕೆ ತಲುಪಿತು.
You gave your all @CurranSM ????
An incredible effort.
India win by 7 runs.
Scorecard: https://t.co/M2ktxQ420C pic.twitter.com/EjK1JufoVZ
— England Cricket (@englandcricket) March 28, 2021
ಕೊನೆಯ 6 ಎಸೆತಕ್ಕೆ 14 ರನ್ಗಳ ಅಗತ್ಯವಿತ್ತು. ನಟರಾಜನ್ ಎಸೆದ ಮೊದಲ ಎಸೆತವನ್ನು ಕರ್ರನ್ ಲಾಂಗ್ ಆನ್ ಕಡೆಗೆ ಹೊಡೆದರು. ಈ ವೇಳೆ ಮಾರ್ಕ್ ವುಡ್ ಎರಡು ರನ್ ಓಡಲು ಪ್ರಯತ್ನಿಸಿದರು. ಆದರೆ ಹಾರ್ದಿಕ್ ಪಾಂಡ್ಯ ಬಾಲನ್ನು ಮಿಂಚಿನ ವೇಗದಲ್ಲಿ ಕೀಪರ್ಗೆ ಎಸೆದ ಪರಿಣಾಮ ಒಂದೇ ರನ್ ಬಂತು. ರಿಷಭ್ ಪಂತ್ ಬೇಲ್ಸ್ ಹಾರಿಸಿದ ಕಾರಣ ಮಾರ್ಕ್ ವುಡ್ ರನೌಟ್ ಆದರು. ಮುಂದಿನ ಎಸೆತದಲ್ಲಿ ಒಂದು ರನ್ ಬಂದರೆ ನಂತರ ಎರಡು ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದಲ್ಲಿ 4 ರನ್ ಬಂದರೆ 6ನೇ ಎಸೆತವನ್ನು ಕರ್ರನ್ ಲಾಂಗ್ ಆನ್ ಕಡೆಗೆ ಹೊಡೆದರೂ ರನ್ ಓಡದ ಕಾರಣ ಭಾರತ 7 ರನ್ಗಳಿಂದ ಗೆದ್ದುಕೊಂಡಿತು.
ಜಾನಿ ಬೇರ್ಸ್ಟೋ 1 ರನ್, ಜೇಸನ್ ರಾಯ್ 14 ರನ್, ಬೇನ್ಸ್ಟೋಕ್ಸ್ 35 ರನ್, ಡೇವಿಡ್ ಮಲಾನ್ 50 ರನ್(50 ಎಸೆತ, 6 ಬೌಂಡರಿ), ಲಿಯಾಮ್ ಲಿವಿಂಗ್ಸ್ಟೋನ್ 36 ರನ್(31 ಎಸೆತ, 4 ಬೌಂಡರಿ, 1 ಸಿಕ್ಸರ್), ಮೊಯಿನ್ ಆಲಿ 29 ರನ್( 25 ಎಸೆತ, 2 ಬೌಂಡರಿ, 2 ಸಿಕ್ಸರ್), ಆದಿಲ್ ರಷಿದ್ 19 ರನ್, ಮಾರ್ಕ್ ವುಡ್ 14 ರನ್ ಹೊಡೆದರು.
50 for @dmalan29 ????
But he falls next ball to Thakur.
Scorecard: https://t.co/u5bhV0fzBS
???????? #INDvENG ???????????????????????????? pic.twitter.com/6gj9g8gaKh
— England Cricket (@englandcricket) March 28, 2021