ಉಡುಪಿ: ದುಷ್ಕರ್ಮಿಗಳು ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಸೃಷ್ಟಿ ಮಾಡಿದ್ದಾರೆ. ಕೋಸ್ಟ್ ಗಾರ್ಡ್ ಎಸ್ಪಿ ಚೇತನ್ ಕುಮಾರ್ ಹೆಸರಿನಲ್ಲಿ ಅಕೌಂಟ್ ತೆರೆದಿರುವ ಕಿಡಿಗೇಡಿಗಳು ದುಷ್ಕೃತ್ಯ ಎಸಗುವ ಹುನ್ನಾರ ಮಾಡಿದ್ದರು.
ಕೋಸ್ಟಲ್ ಎಸ್ಪಿ ಎಸ್ಪಿ ಸಿಂಗ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಿ, ಚೇತನ್ ಕುಮಾರ್ ಅವರ ಫೋಟೋ ಬಳಸಲಾಗಿತ್ತು. ಇದಾಗಿ ಕೇವಲ ಅರ್ಧಗಂಟೆಯಲ್ಲಿ ದುಷ್ಕೃತ್ಯ ಬೆಳಕಿಗೆ ಬಂದಿದೆ. ಉಡುಪಿಯ ಮತ್ತು ಬೆಂಗಳೂರಿನ ಸೈಬರ್ ಕ್ರೈಂಗೆ ಎಸ್ಪಿ ಚೇತನ್ ಕುಮಾರ್ ದೂರು ನೀಡಿದ್ದಾರೆ.
Advertisement
Advertisement
ನಕಲಿ ಅಕೌಂಟ್ ಕ್ರಿಯೆಟ್ ಮಾಡಿದ್ದು ಯಾರು?, ಇದರ ಹಿಂದಿನ ಉದ್ದೇಶ ಏನು? ಎಂಬ ಬಗ್ಗೆ ಪೊಲೀಸರು ಈಗಾಗಲೇ ತನಿಖೆಯನ್ನು ಶುರುಮಾಡಿದ್ದಾರೆ. ಎಸ್ಪಿ ಚೇತನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಪಿ ಚೇತನ್ ಕುಮಾರ್, ಈ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಉಡುಪಿ ಜಿಲ್ಲಾ ವಿಭಾಗಕ್ಕೆ ದೂರು ನೀಡಿದ್ದೇವೆ. ಅಕೌಂಟ್ ಕ್ರಿಯೇಟ್ ಆಗಿ ಕೆಲವೇ ನಿಮಿಷಗಳಲ್ಲಿ ಬಗ್ಗೆ ಮಾಹಿತಿ ಗೊತ್ತಾಗಿದೆ. ಕೃತ್ಯದ ಹಿಂದಿನ ಉದ್ದೇಶವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ ಎಂದರು.