ಗಾಂಧಿನಗರ: ಕೋವಿಡ್ 19 ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಐವರು ಕೊರೊನಾ ರೋಗಿಗಳು ದಾರುಣವಾಗಿ ಮೃತಪಟ್ಟ ಘಟನೆ ಗುಜರಾತ್ ನಲ್ಲಿ ನಡೆದಿದೆ.
ರಾಜ್ಕೋಟ್ನ ಉದಯ ಶಿವಾನಂದ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವಘಡ ಸಂಭವಿಸಿದ ಸಮಯದಲ್ಲಿ ಆಸ್ಪತ್ರೆಯಲ್ಲಿ 33 ಮಂದಿ ಕೊರೊನಾ ಸೋಂಕಿತರಿದ್ದರು. ಈ ಪೈಕಿ ಐವರು ಅಗ್ನಿ ದುರಂತಕ್ಕೆ ತುತ್ತಾಗಿದ್ದಾರೆ.
Advertisement
Gujarat: Five people died after a fire broke out at Shivanand COVID Hospital in Rajkot, last night.
CM Vijay Rupani has ordered a probe into the incident. The cause of the fire is yet to be ascertained. pic.twitter.com/aRXrGrD3NQ
— ANI (@ANI) November 27, 2020
Advertisement
ಘಟನೆ ನಡೆಯುತ್ತಿದ್ದಂತೆಯೇ ಮಾಹಿತಿ ಅರಿತ ಅಗ್ನಿಶಾಮದಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಿಟಕಿ ಮೂಲಕ ಉಳಿದವರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಅವರನ್ನು ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಘಟನೆ ಸಂಬಂಧ ತನಿಖೆ ನಡೆಸುವಂತೆ ಹಾಗೂ ಘಟನೆಗೆ ಕಾರಣವೇನು ಎಂಬುದನ್ನು ತಿಳಿದು ವರದಿ ನೀಡುವಂತೆ ಆದೇಶಿಸಿದ್ದಾರೆ.
Advertisement
Advertisement
ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸುವುದು ಇದೇ ಮೊದಲಲ್ಲ. ಈ ಹಿಂದೆಯೂ ಗುಜರಾತ್ ನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ನಡೆದಿವೆ. ಆಗಸ್ಟ್ 6 ರಂದು ಅಹಮ್ಮದಾಬಾದ್ ಆಸ್ಪತ್ರೆ, ಆಗಸ್ಟ್ 25ರಂದು ಜಾಮ್ ನಗರ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.