ಮಡಿಕೇರಿ: ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಸಂಬಂಧಿಕರಿಗೆ ಕೊಡಗು ರಕ್ಷಣಾ ವೇದಿಕೆ ಉಚಿತ ಊಟ, ತಿಂಡಿ ನೀಡುತ್ತಿದೆ.
Advertisement
ಕೊಡಗಿನಲ್ಲಿ ಕೋವಿಡ್ ಸೋಂಕು ಮತ್ತಷ್ಟು ಹರಡದಂತೆ ಜಿಲ್ಲಾಡಳಿತ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ. ಮೂರು ದಿನಗಳು ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕೆ ನಾಲ್ಕು ಗಂಟೆಗಳ ಕಾಲ ಅವಕಾಶ ನೀಡಿದೆ. ಹೀಗಾಗಿ ಬಹುತೇಕ ಲೌಕ್ ಡೌನ್ನಲ್ಲಿರುವ ಕೊಡಗು ಜಿಲ್ಲೆಯಲ್ಲಿ ಹೋಟೆಲ್, ಕ್ಯಾಂಟಿನ್ಗಳು ಪಾರ್ಸಲ್ ಸೇವೆಯನ್ನು ಒದಿಗಿಸುತ್ತಿಲ್ಲ.
Advertisement
Advertisement
ಸೋಂಕಿನಿಂದ ಗಂಭೀರ ಸಮಸ್ಯೆ ಎದುರಿಸುತ್ತಿರುವರೊಂದಿಗೆ ಆಸ್ಪತ್ರೆಗೆ ಬರುತ್ತಿರುವ ಮತ್ತು ಹಳ್ಳಿ ಹಳ್ಳಿಗಳಿಂದ ಕೋವಿಡ್ ಪರೀಕ್ಷೆಗೆ ಬರುತ್ತಿರುವ ನೂರಾರು ಜನರು ತಿಂಡಿ ಊಟಗಳಿಲ್ಲದೆ, ಹಸಿವಿನಿಂದ ಪರದಾಡುವಂತಾಗಿದೆ. ಇಂತಹ ಸ್ಥಿತಿಯನ್ನು ಸ್ವತಃ ಅನುಭವಿಸಿದ್ದ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಚರ್ಚಿಸಿ ಜನರು ಹಸಿವಿನಿಂದ ಬಳಲದಂತೆ ಮಾಡಲು ಪ್ರತಿದಿನ `ನಮ್ಮವರಿಗಾಗಿ ನಾವು’ ಹೆಸರಿನಲ್ಲಿ ಉಚಿತ ಊಟ ತಿಂಡಿ ವ್ಯವಸ್ಥೆ ಮಾಡುತ್ತಿದ್ದಾರೆ.
Advertisement
ಲಾಕ್ ಡೌನ್ಗೂ ಕೆಲವೇ ದಿನಗಳ ಮುನ್ನವಷ್ಟೇ ಪವನ್ ಪೆಮ್ಮಯ್ಯ ಮತ್ತು ಅವರ ನಾಲ್ಕು ವರ್ಷದ ಮಗುವಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಈ ಸಂದರ್ಭದಲ್ಲಿ ವಿವಿಧ ಪರೀಕ್ಷೆಗಳಿಗೆಂದು ತೆರಳಿದ್ದ ಪವನ್ ಪೆಮ್ಮಯ್ಯ ಮತ್ತವರ ಮಗ ಇಡೀ ದಿನ ಊಟವಿಲ್ಲದೆ ಪರದಾಡಿದ್ದರಂತೆ. ಕೋವಿಡ್ನಿಂದ ಗುಣಮುಖರಾಗುತ್ತಿದ್ದಂತೆ ಪವನ್ ಪೆಮ್ಮಯ್ಯ ಮತ್ತು ಅವರ ತಂಡ ದಾನಿಗಳ ಸಹಾಯ ಪಡೆದು ಪ್ರತಿ ದಿನ ಕನಿಷ್ಠ 300 ಜನರಿಗೆ ತಿಂಡಿ ಊಟವನ್ನು ಒದಗಿಸುತ್ತಿದೆ. ವೃತ್ತಿಯಲ್ಲಿ ವಕೀಲರಾಗಿರುವ ಪವನ್ ಪೆಮ್ಮಯ್ಯ ತಮ್ಮ ತಂಡದವರ ಸಹಾಯದಿಂದ ತಮ್ಮ ಮನೆಯ ಬಳಿಯೇ ಊಟ ತಿಂಡಿ ತಯಾರಿಸಿ ಪ್ಯಾಕ್ ಮಾಡಿ ಬಳಿಕ ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
ಇವರ ಈ ಕಾರ್ಯಕ್ಕೆ ಕೊಡಗು ಹೊರ ಜಿಲ್ಲೆ ಮತ್ತು ದುಬೈನ ಕನ್ನಡ ಸಂಘಟನೆಗಳ ಸಾಕಷ್ಟು ದಾನಿಗಳು ಸಹಾಯ ಹಸ್ತ ನೀಡಿದ್ದಾರೆ. ನಮ್ಮ ಕಾರ್ಯಕ್ಕೆ ಇನ್ನಷ್ಟು ಬೆಂಬಲ ದೊರೆತಲ್ಲಿ ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಲು ಚಿಂತಿಸಿರುವ ಕೊಡಗು ರಕ್ಷಣಾ ವೇದಿಕೆ, ಲಾಕ್ಡೌನ್ ಮುಗಿಯುವವರೆಗೂ ಊಟ ತಿಂಡಿಯ ವ್ಯವಸ್ಥೆ ಮಾಡಲು ನಿರ್ಧರಿಸಿದೆ.