ಹಾವೇರಿ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಏನಾದರೂ ಆಗಿ ಬಿದ್ದು- ಓದ್ದಾಡುತ್ತಿದ್ದರೂ ಮುಟ್ಟಿ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಅರೇ ಪ್ರಜ್ಞಾವ್ಯಸ್ಥೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಪರದಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.
Advertisement
Advertisement
50 ವರ್ಷದ ಅಪರಿಚಿತ ವ್ಯಕ್ತಿ ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆಯ ಪಕ್ಕದಲ್ಲೇ ಬಿದ್ದು ನರಳಾಡಿದರೂ ಜನರು ನೋಡಿಕೊಂಡು ಓಡಾಡಿದ್ದಾರೆ. ಆದರೆ ಯಾರು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಿಲ್ಲ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್, ಒಂದು ಗಂಟೆಗಳ ಕಾಲ ಅಂಬುಲೆನ್ಸ್ಗೆ ಕರೆ ಮಾಡಿದರೂ, ಯಾವ 108 ವಾಹನ ಸಿಗಲಿಲ್ಲ.
Advertisement
Advertisement
ಸ್ಥಳದಲ್ಲಿಯೇ ಇದ್ದ ಪೊಲೀಸರು ಹಾಗೂ ಟಂಟಂ ವಾಹನದ ಸಿಬ್ಬಂದಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಆ ವ್ಯಕ್ತಿ ನಿನ್ನೆಯಿಂದ ಸರಿಯಾಗಿ ಊಟ ಮಾಡಿರಲಿಲ್ಲ. ಹಾಗಾಗಿ ಅಶಕ್ತನಾಗಿ ರಸ್ತೆಯ ಪಕ್ಕದಲ್ಲೇ ಬಿದ್ದು ಒದ್ದಾಡಿದ್ದಾನೆ. ಸದ್ಯ ಇದೀಗ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ಧಾರವಾಡ ಹಾಗೂ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.