ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಇಳಿಕೆಯಾಗಿದ್ದು, ಇಂದು ಶೇ.2.58ರಷ್ಟು ದಾಖಲಾಗಿದೆ. ಇವತ್ತು 4,517 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, 120 ಮಂದಿ ಸಾವನ್ನಪ್ಪಿದ್ದಾರೆ.
Advertisement
ಇಂದು 8,456 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 1,26,813 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 33,883 ಸೋಂಕಿತರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್-19 ಸೋಂಕಿನಿಂದ ಮೃತರ ಶೇಕಡಾವಾರು ಪ್ರಮಾಣ ಸಹ ಇಳಿಕೆಯಾಗಿದೆ. ಇಂದು ಶೇ.2.65ರಷ್ಟಿದೆ. ಇವತ್ತು 1,74,521 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
Advertisement
ರಾಜಧಾನಿಯಲ್ಲಿ ಸಾವಿರಕ್ಕೂ ಕಡಿಮೆ ಕೊರೊನಾ ಪ್ರಕರಣಗಳ ದಾಖಲಾಗಿದ್ದು, ಮಹಾಮಾರಿಯ ಅಬ್ಬರ ತಗ್ಗಿದೆ. ಇಂದು 933 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 71,282 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೀದರ್, ಕಲಬುರಗಿ ಮತ್ತು ವಿಜಯಪುರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೆಂಗಳೂರು ನಗರದ ಸೇರಿದಂತೆ ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 10, ಬಳ್ಳಾರಿ 67, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 111, ಬೆಂಗಳೂರು ನಗರ 933, ಬೀದರ್ 6, ಚಾಮರಾಜನಗರ 61, ಚಿಕ್ಕಬಳ್ಳಾಪುರ 123, ಚಿಕ್ಕಮಗಳೂರು 183, ಚಿತ್ರದುರ್ಗ 74, ದಕ್ಷಿಣ ಕನ್ನಡ 525, ದಾವಣಗೆರೆ 136, ಧಾರವಾಡ 77, ಗದಗ 28, ಹಾಸನ 346, ಹಾವೇರಿ 24, ಕಲಬುರಗಿ 9, ಕೊಡಗು 137, ಕೋಲಾರ 77, ಕೊಪ್ಪಳ 61, ಮಂಡ್ಯ 131, ಮೈಸೂರು 545, ರಾಯಚೂರು 19, ರಾಮನಗರ 12, ಶಿವಮೊಗ್ಗ 141, ತುಮಕೂರು 144, ಉಡುಪಿ 167, ಉತ್ತರ ಕನ್ನಡ 146, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 16ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.