ಬೆಂಗಳೂರು: ಕೋವಿಡ್ ಟೆಸ್ಟ್ ಮಾಡಿಸುವಂತೆ ಬಿಬಿಎಂಪಿ ಅಧಿಕಾರಿಗಳು ಯುವಕರ ಮೇಲೆ ಹಲ್ಲೆ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಬಿಎಂಪಿ ವತಿಯಿಂದ ಸಿಲಿಕಾನ್ ಸಿಟಿಯ ಬಹುತೇಕ ಏರಿಯಾಗಳಲ್ಲಿ ಕೋವಿಡ್ ಕ್ಯಾಂಪ್ ಗಳನ್ನು ಹಾಕಲಾಗಿದೆ. ನಗರ್ತಪೇಟೆಯ ಮುಖ್ಯ ರಸ್ತೆಯಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ಮುಂಭಾಗ ಕೋವಿಡ್ ಕ್ಯಾಂಪ್ ಹಾಕಲಾಗಿದ್ದು, ಸ್ವ್ಯಾಬ್ ಟೆಸ್ಟ್ ಸಂಗ್ರಹ ಮಾಡುವ ಕೆಲಸ ಮಾಡಲಾಗುತ್ತಿದೆ.
ಇಂದು ಇಬ್ಬರು ಬಿಬಿಎಂಪಿ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸುವಂತೆ ಯುವಕನೊಬ್ಬನನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಯುವಕ ಪ್ರತಿರೋಧ ಒಡ್ಡಿದಾಗ ಥಳಿಸಿ ಕೆಳಗೆ ಬೀಳಿಸಿದ್ದಾರೆ. ಮತ್ತೆರಡು ವೀಡಿಯೊಗಳಲ್ಲೂ ಕೂಡ ಯುವಕರನ್ನು ಬಲವಂತವಾಗಿ ಎಳೆದೊಯ್ಯುವ ಕೆಲಸ ಮಾಡಿದ್ದು, ಇವರ ಈ ಕೃತ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಟೀಕೆ ಮಾಡಿ ಸಿಬ್ಬಂದಿಯ ಕ್ರಮವನ್ನು ಖಂಡಿಸಿದ್ದಾರೆ.
Date: 24/05/2021
Time: 10:00am
Place- Nagrathpete road, Bengaluru
These group of people claim to be BBMP covid camp
They stop random people on the street and ask them to take covid SWAB test. Common people are forced to take th test and when denied these are the circumstances. pic.twitter.com/MhXFMR2Dvv
— Gautham Jain M (ಗೌತಮ್ ಜೈನ್) (@gauthamjain1) May 24, 2021
ಬೆಳಗ್ಗೆ 10 ಗಂಟೆ ಒಳಗೆ ಅಗತ್ಯ ವಸ್ತುಗಳಿಗಾಗಿ ಹೊರಬಂದರೆ ಬಲವಂತವಾಗಿ ಎಳೆದುಕೊಂಡು ಹೋಗಿ ಟೆಸ್ಟ್ ಮಾಡ್ತಾರೆ ಅಂತಾ ಸ್ಥಳೀಯರು ಆರೋಪ ಕೂಡ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಕ್ಯಾಂಪ್ ಅನ್ನು ಸಿಬ್ಬಂದಿ ಮುಚ್ಚಿ ತೆರಳಿದ್ದಾರೆ.
https://twitter.com/CaptRathee/status/1396803095942684676
ನಡೆದಿದ್ದು ಏನು?
ಕಿಶನ್ ಕ್ಯಾಂಪ್ ನೋಡಿ ವ್ಯಾಕ್ಸಿನ್ ಹಾಕ್ತಿರಬಹುದು ಅಂತಾ ರಿಜಿಸ್ಟರ್ ಮಾಡಿಸಿಕೊಂಡಿದ್ದ. ಮೊಬೈಲ್ ಗೆ ಒಟಿಪಿ ಬಂದಾಗ ಕೋವಿಡ್ ಟೆಸ್ಟ್ ಅಂತಾ ಗೊತ್ತಾಗಿ ಸ್ವ್ಯಾಬ್ ಕೊಡಲು ಹಿಂದೇಟು ಹಾಕಿದ್ದ. ಈ ವೇಳೆ ಬಿಬಿಎಂಪಿ ಅಧಿಕಾರಿ ನಾಗಭೂಷಣ್ ಹಲ್ಲೆ ನಡೆಸಿದ್ದಾರೆ.
ಎಳೆತಂದು ಹಲ್ಲೆ ನಡೆಸಿರೊ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸುಮೊಟೊ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 323, 341 , 504 ಅಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂಂತೆ ನೋಟಿಸ್ ನೀಡಲಾಗಿದೆ. ಮತ್ತೆರಡು ವೀಡಿಯೊಗಳನ್ನ ಸಹ ಪೊಲೀಸರು ಪರಿಶೀಲನೆ ನಡೆಸಿದ್ದು, ದೂರುದಾರರು ಸಿಗಬಹುದಾ ಅಂತಾ ಹುಡುಕಾಟ ನಡೆಸ್ತಿದ್ದಾರೆ.