ಯಾದಗಿರಿ: ಕಬ್ಬಿನ ಬಾಕಿ ಉಳಿಸಿಕೊಂಡ ಹಿನ್ನೆಲೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿಯನ್ನು ಸೀಜ್ ಮಾಡಲಾಗಿದೆ. ತಹಶಿಲ್ದಾರರ ಸುರೇಶ್ ಮತ್ತು ಸಿಬ್ಬಂದಿ ಕಾರ್ಖಾನೆಯ ಮುಖ್ಯ ಗೇಟ್ಗೆ ಬೀಗ ಹಾಕಿ, ಫ್ಯಾಕ್ಟರಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.
Advertisement
ಕೋರ್ ಗ್ರೀನ್ ಯಾದಗಿರಿ ಜಿಲ್ಲೆಯಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆಯಾಗಿದೆ. ಯಾದಗಿರಿ, ವಡಗೇರಾ, ಹುಣಸಗಿ, ಕಲಬುರಗಿ ಜಿಲ್ಲೆಯ ಚಿತ್ತಾಪುರ, ಯಡ್ರಾಮಿ, ಜೇವರ್ಗಿ ತಾಲೂಕಿನ ನೂರಾರು ರೈತರು ಈ ಕೇಳದ ಬಾರಿ ತಾವು ಬೆಳದ ಕಬ್ಬನ್ನು ಫ್ಯಾಕ್ಟರಿಗೆ ನೀಡಿದ್ದರು. ಆದರೆ ಫ್ಯಾಕ್ಟರಿ ಮಾಲೀಕರು ಸರಿಯಾದ ಸಮಯಕ್ಕೆ ಕಬ್ಬಿನ ಹಣ ರೈತರಿಗೆ ನೀಡಿಲ್ಲ. ಸುಮಾರು 30 ಕೋಟಿ ಹಣವನ್ನು ರೈತರಿಗೆ ನೀಡಬೇಕಾಗಿದೆ. ರೈತರಿಂದ ನೂರಾರು ಕೋಟಿ ಮೌಲ್ಯದ ಕಬ್ಬು ಖರೀದಿ ಮಾಡಿರುವ ಫ್ಯಾಕ್ಟರಿ ಮಾಲೀಕ ಸೀಜನ್ ಮುಗಿದ ಬಳಿಕ ಪರಾರಿಯಾಗಿದ್ದಾರೆ. ಇದನ್ನೂ ಓದಿ: ದೂದ್ ಗಂಗಾ ಯೋಜನೆ -ಬಿಎಸ್ವೈ ಮಹತ್ವದ ಚರ್ಚೆ
Advertisement
Advertisement
ಇದರಿಂದಾಗಿ ಕಬ್ಬು ಮಾರಿದ ರೈತರು ವಡಗೇರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಪರಿಣಾಮ ಡಿಸಿ ರಾಗಪ್ರಿಯ , ಫ್ಯಾಕ್ಟರಿ ಸೀಜ್ ಮಾಡುವಂತೆ ತಹಶಿಲ್ದಾರರಿಗೆ ಆದೇಶ ಮಾಡಿದ್ದರು.
Advertisement