CricketLatestMain PostSports

ಕೊಹ್ಲಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯನ್ನು ಮುರಿದ ಉತ್ತಪ್ಪ

ಅಬುಧಾಬಿ: ಇದುವರೆಗೂ ಐಪಿಎಲ್‍ನಲ್ಲಿ ಆರ್.ಸಿ.ಬಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ರಾಬಿನ್ ಉತ್ತಪ್ಪ ಅವರ ಖಾತೆ ಸೇರ್ಪಡೆಯಾಗಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಬುಧವಾರ ನಡೆದ ಪಂದ್ಯದಲ್ಲಿ ಸೋಲುಂಡಿತ್ತು. ಇದರೊಂದಿಗೆ ಐಪಿಎಲ್‍ನಲ್ಲಿ ಅತಿ ಹೆಚ್ಚು ಸೋಲುಂಡ ಆಟಗಾರ ಎಂಬ ದಾಖಲೆಯನ್ನು ರಾಬಿನ್ ಉತ್ತಪ್ಪ ಪಡೆದುಕೊಂಡಿದ್ದಾರೆ.

ಇದುವರೆಗೂ ರಾಬಿನ್ ಉತ್ತಪ್ಪ ಆಡಿರುವ ತಂಡಗಳು ಸೋಲುಂಡ ಒಟ್ಟು ಪಂದ್ಯಗಳ ಸಂಖ್ಯೆ 91ಕ್ಕೇರಿದೆ. ಆ ಬಳಿಕ ಸ್ಥಾನದಲ್ಲಿ ಕೊಹ್ಲಿ 90, ದಿನೇಶ್ ಕಾರ್ತಿಕ್ 87, ರೋಹಿತ್ ಶರ್ಮಾ 85 , ಅಮಿತ್ ಮಿಶ್ರಾ 57 ಪಂದ್ಯಗಳೊಂದಿಗೆ ಕ್ರಮವಾಗಿ 2 ರಿಂದ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

34 ವರ್ಷದ ರಾಬಿನ್ ಉತ್ತಪ್ಪ ಇದುವರೆಗೂ ಐಪಿಎಲ್‍ನಲ್ಲಿ ಐದು ತಂಡಗಳ ಪರ ಆಡಿದ್ದು, 2020ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 3 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಇದಕ್ಕೂ ಮುನ್ನ ಕೋಲ್ಕತ್ತಾ ಪರ ಆಡುತ್ತಿದ್ದ ರಾಬಿನ್, ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದರು. ರಾಜಸ್ಥಾನ ತಂಡದಲ್ಲಿ ಸ್ಮಿತ್, ಸಂಜು ಸ್ಯಾಮ್ಸನ್, ಜಾಸ್ ಬಟ್ಲರ್ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದು, ಉತ್ತಪ್ಪ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವ ಉತ್ತಪ್ಪ, ಕ್ರಮವಾಗಿ 5, 9 ಮತ್ತು 2 ರನ್ ಗಳನಷ್ಟೇ ಗಳಿಸಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಮೊದಲ ಎರಡು ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಬುಧವಾರ ಸೋಲಿನ ಕಹಿಯನ್ನು ಅನುಭವಿಸಿತ್ತು. ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬ್ಯಾಟಿಂಗ್‍ನಲ್ಲಿ ವಿಫಲವಾಗಿದ್ದು ತಂಡದ ಸೋಲಿಗೆ ಕಾರಣವಾಗಿದೆ. ಇತ್ತ ಇದೇ ಪಂದ್ಯದಲ್ಲಿ ಉತ್ತಪ್ಪ ಕೊರೊನಾ ನಿಯಮಗಳನ್ನು ಮುರಿದು, ಆಚಾನಕ್ ಆಗಿ ಬಾಲಿಗೆ ಎಂಜುಲು ಹಚ್ಚಿರುವ ಘಟನೆಯೂ ನಡೆದಿದೆ. ಇದನ್ನೂ ಓದಿ: ಕ್ಯಾಚ್ ಬಿಟ್ಟು ಬಾಲಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿಕೊಂಡ ಉತ್ತಪ್ಪ

Leave a Reply

Your email address will not be published. Required fields are marked *

Back to top button