ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಟೂರ್ನಿ ನವೆಂಬರ್ ಅಂತ್ಯದಲ್ಲಿ ಆರಂಭವಾಗಲಿದ್ದು, ಟೀಂ ಇಂಡಿಯಾ ಆಟಗಾರರು ಟೂರ್ನಿಯಲ್ಲಿ ರೆಟ್ರೋ ಥೀಮ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಸ್ಪೋರ್ಟ್ಸ್ ಔಟ್ ಲುಕ್ ವರದಿ ಮಾಡಿದೆ.
ಆಸೀಸ್ ವಿರುದ್ಧ ಟೂರ್ನಿಗಾಗಿ ಈಗಾಗಲೇ ದುಬೈನಿಂದ ಹೋರಾಟಿರುವ ಟೀಂ ಇಂಡಿಯಾ ಆಟಗಾರರು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ನೆಟ್ ತರಬೇತಿ ಆರಂಭಿಸಲಿದ್ದಾರೆ. ಆಸೀಸ್ ಪ್ರವಾಸ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಹೊಸ ಪಿಪಿಇ ಕಿಟ್ ಧರಿಸಿ ಆಟಗಾರರು ಆಸೀಸ್ ಗೆ ಪ್ರಯಾಣಿಸಿದ ಫೋಟೋಗಳನ್ನು ಬಿಸಿಸಿಐ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇತ್ತ ಹೊಸ ಜೆರ್ಸಿ ರೆಟ್ರೋ ಥೀಮ್ನಲ್ಲಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರರು ಧರಿಸಿದ್ದ ಜೆರ್ಸಿಯ ಲುಕ್ಗೆ ಮೆರುಗು ನೀಡಿ 70 ದಶಕದ ಸ್ಫೂರ್ತಿಯೊಂದಿಗೆ ಹೊಸ ಜೆರ್ಸಿಯನ್ನು ಸಿದ್ಧಪಡಿಸಲಾಗಿದೆ. ನೀಲಿ ಬಣ್ಣದಲ್ಲಿದ್ದ ಜೆರ್ಸಿ ಕಡು ನೀಲಿಬಣ್ಣಕ್ಕೆ ಬದಲಾಗಿದ್ದು, ಭುಜದ ಭಾಗದಲ್ಲಿ ಮೊದಲು ಬಿಳಿ, ಕೆಂಪು, ಹಸಿರು, ನೀಲಿ ಬಣ್ಣಗಳ ಪಟ್ಟಿಗಳನ್ನು ಕಾಣಬಹುದಾಗಿದೆ. ಜೆರ್ಸಿಯ ಮೇಲೆ ಎಂಪಿಎಲ್ ಸ್ಪೋರ್ಟ್ಸ್ ಹೆಸರನ್ನು ಮುದ್ರಿಸಲಾಗಿದೆ. ಟೀಂ ಇಂಡಿಯಾ ಆಟಗಾರರಿಗೆ ಹೊಸ ಪ್ರಯೋಜಕತ್ವ ನೀಡುತ್ತಿರುವ ಎಂಪಿಎಲ್ ಸ್ಪೋರ್ಟ್ಸ್ ಹೊಸ ಕಿಟ್ಗಳನ್ನು ನೀಡುತ್ತಿದೆ.
Advertisement
#TeamIndia is BACK!
Let’s embrace the new normal ????#AUSvIND pic.twitter.com/csrQ3aVv21
— BCCI (@BCCI) November 11, 2020
Advertisement
ಇದೇ ಟೂರ್ನಿಯಲ್ಲಿ ಆಸೀಸ್ ತಂಡ ಕೂಡ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ. ಆಸೀಸ್ನ ಸ್ಥಳೀಯ ಅಂಶಗಳನ್ನು ಸಾರಿ ಹೇಳುವಂತೆ ಹೊಸ ಜೆರ್ಸಿಯನ್ನು ವಿನ್ಯಾಸ ಮಾಡಲಾಗಿದೆ. ಅಲ್ಲದೇ 1868ರ ಕ್ರಿಕೆಟ್ ತಂಡದ ಕಥೆಯನ್ನು ಈ ಸಮವಸ್ತ್ರ ಹೇಳುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಟಿ20 ಸರಣಿಯಲ್ಲಿ ಆಸೀಸ್ ಪಡೆ ಹೊಸ ಜೆರ್ಸಿಯನ್ನು ಧರಿಸಲಿದೆ.
Customised PPE Kits✔️
Customised Mask☑️
How cool is this new look! #TeamIndia pic.twitter.com/jnfuG1veWX
— BCCI (@BCCI) November 11, 2020
ಐಪಿಎಲ್ ಟೂರ್ನಿಯಂತೆ ಸಂಪೂರ್ಣ ಬಯೋಸೆಕ್ಯೂರ್ ವಾತಾವರಣದಲ್ಲೇ ಟೂರ್ನಿ ನಡೆಯಲಿದೆ. ನ.27 ರಿಂದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಆ ಬಳಿಕ ಟಿ20 ಹಾಗೂ ಟೆಸ್ಟ್ ಪಂದ್ಯಗಳು ನಡೆಯಲಿದೆ. ಟೂರ್ನಿಯ ವಿಶೇಷವಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ಡಿಸೆಂಬರ್ 17 ರಂದು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಇದಾಗಿದೆ.
The Australian men’s team will celebrate our First Nations people this summer by wearing this incredible Indigenous playing shirt for the entirety of the #AUSvIND Dettol T20 series! ????????❤️ pic.twitter.com/GmD36G8XoC
— Cricket Australia (@CricketAus) November 11, 2020
ಟಿ20 ತಂಡ: ಕೊಹ್ಲಿ, ಧವನ್, ಮಯಾಂಕ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಜಡೇಜಾ, ವಾಷಿಂಗ್ಟನ್ ಸುಂದರ್, ಚಹಲ್, ಬುಮ್ರಾ, ಶಮಿ, ಶೈನಿ, ದೀಪಕ್ ಚಹರ್, ನಟರಾಜನ್.
ಏಕದಿನ ತಂಡ: ವಿರಾಟ್ ಕೊಹ್ಲಿ, ಧವನ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್, ಜಡೇಜಾ, ಚಹಲ್, ಕುಲ್ದೀಪ್ ಯಾದವ್, ಬುಮ್ರಾ, ಶಮಿ, ಶೈನಿ, ಶಾರ್ದೂಲ್ ಠಾಕೂರ್, ಸಂಜು ಸ್ಯಾಮ್ಸನ್.
Here we go pic.twitter.com/U7RRi14b1R
— K L Rahul (@klrahul11) November 11, 2020
ಟೆಸ್ಟ್ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಯಾಂಕ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಸ್ವರ ಪೂಜಾರಾ, ರಹಾನೆ, ಹನುಮ ವಿಹಾರಿ, ಶುಭ್ಮನ್ ಗೀಲ್, ವೃದ್ಧಿಮಾನ್ ಸಹಾ, ರಿಷಬ್ ಪಂತ್, ಬುಮ್ರಾ, ಶಮಿ, ಉಮೇಶ್ ಯಾದವ್, ಶೈನಿ, ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.