ಲಾಸ್ಏಂಜಲೀಸ್: ಕೊರೋನಾ ಸೋಂಕಿಗೆ ಹೆದರಿ ವ್ಯಕ್ತಿಯೊಬ್ಬ ಅಮೆರಿಕಾದ ಏರ್ ಪೋರ್ಟ್ ನಲ್ಲಿ 3 ತಿಂಗಳ ಕಾಲ ಅಡಗಿ ಕುಳಿತು ಇದೀಗ ಅರೆಸ್ಟ್ ಆಗಿರುವ ಘಟನೆ ಚಿಕಾಗೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
Advertisement
ಆದಿತ್ಯ ಸಿಂಗ್ (36) ಮೂರು ತಿಂಗಳ ಕಾಲ ವಿಮಾನ ನಿಲ್ದಾಣದಲ್ಲಿ ಯಾರಿಗೂ ತಿಳಿಯದಂತೆ ಅಡಗಿ ಕುಳಿತು ಅಚ್ಚರಿಯನ್ನು ಮೂಡಿಸಿದ್ದಾನೆ. 2020ರಲ್ಲಿ ಅಕ್ಟೋಬರ್ 19 ರಂದು ಚಿಕಾಗೋ ವಿಮಾನ ನಿಲ್ದಾಣದಲ್ಲಿ ಅಡಗಿ ಕುಳಿತಿದ್ದನು. ಆದರೆ ಇತ್ತಿಚೇಗೆ ಏರ್ಲೈನ್ ಅಧಿಕಾರಿಗಳ ಸಿಕ್ಕಿ ಬಿದ್ದಾಗ ಈ ಸುದ್ದಿ ಬೆಳಕಿಗೆ ಬಂದಿದೆ.
Advertisement
Advertisement
ಏರ್ಲೈನ್ ಅಧಿಕಾರಿಗಳು ಆತನನ್ನು ವಿಚಾರಿಸಿದ್ದಾರೆ. ಆಗ ಆದಿತ್ಯ, ನಾನು ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕೊರೋನಾ ಭಯದಿಂದ ಏರ್ ಪೋರ್ಟ್ ನಲ್ಲೆ ಉಳಿದುಕೊಂಡಿದ್ದೇನೆ. ಪ್ರಯಾಣ ಮಾಡಿದರೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಇಲ್ಲೇ ಉಳಿದುಕೊಳ್ಳುವ ತೀರ್ಮಾನ ಮಾಡಿದ್ದೆನು. ಭಿಕ್ಷೆ ಬೇಡಿ ಜೀವನವನ್ನು ನಡೆಸುತ್ತಿದ್ದೇನು ಎಂದು ಹೇಳಿದ್ದಾನೆ. ತಕ್ಷಣ ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
Advertisement