Connect with us

Bengaluru City

ಕೊರೊನಾ ಹೆಸರಲ್ಲಿ ದುಡ್ಡಿನ ದಂಧೆಗೆ ಇಳಿದ ಖಾಸಗಿ ಅಂಬುಲೆನ್ಸ್ ಏಜೆನ್ಸಿ

Published

on

– ಐದಾರು ಕಿಮೀ ದೂರಕ್ಕೆ 12 ಸಾವಿರ ಚಾರ್ಜ್

ಬೆಂಗಳೂರು: ಕೊರೊನಾ ಹೆಸರಿನಲ್ಲಿ ಕೆಲ ಖಾಸಗಿ ಅಂಬುಲೆನ್ಸ್ ಏಜೆನ್ಸಿಗಳು ದುಡ್ಡಿನ ದಂಧೆ ಮಾಡಲು ಶುರು ಮಾಡಿದ್ದು, ಕೇವಲ ಐದರಿಂದ ಆರು ಕಿಮೀ ಕೋವಿಡ್ ಸೋಂಕಿತನನ್ನು ಸಾಗಿಸಲು ಸಾವಿರಾರು ರೂ ಹಣ ಕೇಳುತ್ತಿವೆ.

ಕೊರೊನಾ ಬೆಂಗಳೂರಿನಲ್ಲಿ ರಣಕೇಕೆ ಹಾಕುತ್ತಿದೆ. ದಿನ ದಿನ ಎರಡು ಸಾವಿರಕ್ಕೂ ಅಧಿಕ ಸೋಂಕಿತರು ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾಗುತ್ತಿದ್ದಾರೆ. ಬೆಡ್ ಸಿಗದೇ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬಾರದೇ ರೋಗಿಗಳು ಸಾಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಅಂಬುಲೆನ್ಸ್ ಏಜೆನ್ಸಿಗಳು ದುಡ್ಡು ಮಾಡುವ ದಂಧೆ ಮಾಡುತ್ತೀವೆ. ಈ ವಿಚಾರ ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲು ಬಟಾ ಬಯಲಾಗಿದೆ.

ಖಾಸಗಿ ಅಂಬುಲೆನ್ಸ್ ದಂಧೆ- 1
ಪ್ರತಿನಿಧಿ : ಹಲೋ ಸರ್ ನಮಸ್ಕಾರ. ಪ್ರೈವೇಟ್ ಅಂಬುಲೆನ್ಸ್ ಸರ್ವಿಸ್ ಅಲ್ವಾ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಹೌದು ಸರ್
ಪ್ರತಿನಿಧಿ : ಜಯನಗರದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಹೋಗ್ಬೇಕು.
ಖಾಸಗಿ ಆಂಬ್ಯುಲೆನ್ಸ್ ಏಜೆನ್ಸಿ: ಕೋವಿಡ್ ಪೇಶೆಂಟಾ ಸರ್?
ಪ್ರತಿನಿಧಿ : ಹಾ.. ಹೌದು
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ಕೋವಿಡ್ ಅಂಬುಲೆನ್ಸ್ 5 ಸಾವಿರ ಆಗುತ್ತೆ
ಪ್ರತಿನಿಧಿ : ಕಡಿಮೆ ಆಗಲ್ವಾ? ಐಸಿಯು ವೆಂಟಿಲೇಟರ್ ಇರುತ್ತಾ ಸರ್
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ವೆಂಟಿಲೇಟರ್ ಇಲ್ಲ ಸರ್
ಪ್ರತಿನಿಧಿ : ವಿಥೌಟ್ ವೆಂಟಿಲೇಟರ್ 5 ಸಾವಿರ
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ವೆಂಟಿಲೇಟರ್ ಅಂಬುಲೆನ್ಸ್ ಬೇಕಂದ್ರೆ 12 ಸಾವಿರ ಆಗುತ್ತೆ ನಿಮ್ಗೆ.
ಪ್ರತಿನಿಧಿ: ಸರ್ ಸ್ಪಾಟ್‍ಗೆ ಬರೋದಕ್ಕೆ ಎಷ್ಟೊತ್ತು ಆಗುತ್ತೆ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಒಂದು ಗಂಟೆಯಿಂದ ಒಂದೂವರೆ ಗಂಟೆ ಆಗುತ್ತೆ…
ಪ್ರತಿನಿಧಿ: ವೆಂಟಿಲೇಟರೇಬೇಕು. ಆದರೆ 12 ಸಾವಿರದಿಂದ ಕಡಿಮೆ ಮಾಡ್ಕೊಳ್ಳೋಕೆ ಆಗಲ್ವಾ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಇಲ್ಲ ಸರ್. ನೀವ್ 108ಗೆ ಕಾಲ್ ಮಾಡಿ.
ಪ್ರತಿನಿಧಿ : ನಾನ್ ಕೋವಿಡ್ ಪೇಶಂಟ್‍ಗೆ ಎಷ್ಟಾಗುತ್ತೆ ಸರ್…?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ವೆಂಟಿಲೇಟರ್ ಗೆ 4 ಸಾವಿರ ಆಗುತ್ತೆ. ವಿತೌಟ್ ವೆಂಟಿಲೇಟರ್ ಗೆ 2 ಸಾವಿರ ಆಗುತ್ತೆ.

ಖಾಸಗಿ ಅಂಬುಲೆನ್ಸ್ ದಂಧೆ- 2
ಪ್ರತಿನಿಧಿ : ಅಂಬುಲೆನ್ಸ್ ಏಜೆನ್ಸಿ ಅಲ್ವಾ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಹಾ ಹೌದು ಸರ್.
ಪ್ರತಿನಿಧಿ : ವೆಂಟಿಲೇಟರ್ ಇರೋ ಆಂಬ್ಯುಲೆನ್ಸ್ ಬೇಕಿತ್ತು
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಎಲ್ಲಿಂದ ಎಲ್ಲಿಗೆ?
ಪ್ರತಿನಿಧಿ : ಶಾಂತಿನಗರದಿಂದ ಕೆಸಿ ಜನರಲ್ ಆಸ್ಪತ್ರೆಗೆ
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ಏನು ಪೇಶೆಂಟ್
ಪ್ರತಿನಿಧಿ : ಕೋವಿಡ್ ಪೇಶಂಟ್
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ನಮ್ದು ಜಾಸ್ತಿಯಾಗುತ್ತೆ. ಪೈಪ್ ಎಲ್ಲವೂ ಚೇಂಜ್ ಮಾಡ್ಬೇಕು. 12 ಸಾವಿರ ಹಣ ಆಗುತ್ತೆ..
ಪ್ರತಿನಿಧಿ : ಫಿಕ್ಸಾ ಸರ್…?
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ನಾವ್ ಇನ್ನೊಂದು ಆಸ್ಪತ್ರೆಗೆ ತೆಗೆದುಕೊಂಡು ಹೋದ್ರೂ ಚಾರ್ಜ್ ಮಾಡ್ತಾನೇ ಇರ್ತೀವಿ.

ಖಾಸಗಿ ಅಂಬುಲೆನ್ಸ್ ದಂಧೆ-3
ಪ್ರತಿನಿಧಿ: ಸರ್ ನಮಸ್ತೆ, ಒಂದು ವೆಂಟಿಲೇಟರ್ ಅಂಬುಲೆನ್ಸ್ ಬೇಕಿತ್ತು
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಎಲ್ಲಿಂದ
ಪ್ರತಿನಿಧಿ : ರಾಜಾಜಿನಗರದಿಂದ
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಅಲ್ಲಿಂದ
ಪ್ರತಿನಿಧಿ :ವಿಕ್ಟೋರಿಯಾ
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಕೋವಿಡ್ ಕೇಸಾ?
ಪ್ರತಿನಿಧಿ :ಹು
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ಆಕ್ಸಿಜನ್ ವೈಹಿಕಲ್ ನಮತ್ರ ಇದೆ. 6 ಸಾವಿರದ 500 ಆಗುತ್ತೆ. ಕೋವಿಡ್ ಕಿಟ್, ಪಿಪಿಇ ಕಿಟ್, ಕೆಮಿಕಲ್ ವಾಶ್ ಮಾಡ್ಕೊಂಡು ಬರ್ತಾರೆ.

ಖಾಸಗಿ ಅಂಬುಲೆನ್ಸ್ ದಂಧೆ- 4
ಪ್ರತಿನಿಧಿ : ಅಂಬುಲೆನ್ಸ್ ಬೇಕಿತ್ತು ಸರ್, ಅವೈಲೇಬಲ್ ಇದೆಯಾ ಸರ್?
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ಎಲ್ಲಿಂದ ಎಲ್ಲಿಗೆ ಹೋಗಬೇಕು ಸರ್?
ಪ್ರತಿನಿಧಿ : ಯಲಹಂಕದಿಂದ ವಿಕ್ಟೋರಿಯಾಗೆ ಹೋಗಬೇಕು
ಖಾಸಗಿ ಅಂಬುಲೆನ್ಸ್ ಏಜೆನ್ಸಿ : ಏನಾಗಿದೆ?
ಪ್ರತಿನಿಧಿ : ಕೋವಿಡ್ ಪೇಶಂಟ್
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ವೆಂಟಿಲೇಟರಾ, ನಾರ್ಮಲ್ ಇದೆಯಾ?
ಪ್ರತಿನಿಧಿ : ಉಸಿರಾಟದ ಸಮಸ್ಯೆಯಿದೆ. ತುಂಬಾ ಸೀರಿಯಸ್ ಇದೆ
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಆಸ್ಪತ್ರೆಯಲ್ಲಿದ್ದೀರಾ? ಮನೆಯಲ್ಲಿದಿರಾ?
ಪ್ರತಿನಿಧಿ: ಮನೆ ಎಷ್ಟಾಗುತ್ತೆ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: 6 ಸಾವಿರ ಆಗುತ್ತೆ
ಪ್ರತಿನಿಧಿ: ಅಂಬುಲೆನ್ಸ್ ಬೇಕಿತ್ತು. ಯಲಹಂಕದಿಂದ ಕೆಸಿ ಜನರಲ್‍ಗೆ ಬರಬೇಕು. ಕೋವಿಡ್ ಪೇಶೆಂಟ್. ಎಷ್ಟಾಗುತ್ತೆ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: 3500 ರಿಂದ 4 ಸಾವಿರ ಆಗುತ್ತೆ.
ಪ್ರತಿನಿಧಿ : ವಿತ್ ವೆಂಟಿಲೇಟರ್‍ಗೆ ಎಷ್ಟು ಆಗುತ್ತೆ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: 8 ಸಾವಿರ ಆಗುತ್ತೆ.

ಖಾಸಗಿ ಅಂಬುಲೆನ್ಸ್ ದಂಧೆ-5
ಪ್ರತಿನಿಧಿ : ಮೇಡಂ ಒಂದು ಅಂಬುಲೆನ್ಸ್ ಬೇಕಿತ್ತು. ಕೋವಿಡ್ ಪೇಶೇಂಟ್ ಶಿಫ್ಟ್‍ಗೆ.
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಎಲ್ಲಿಗೆ ಹೋಗಬೇಕು?
ಪ್ರತಿನಿಧಿ : ಜಯನಗರದಿಂದ ಯಲಹಂಕಗೆ
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ಪೇಶೆಂಟ್‍ಗೆ ಆಕ್ಸಿಜನ್ ಬೇಕಾ. ನಾರ್ಮಲ್ ಇದಿರಾ?
ಪ್ರತಿನಿಧಿ: ಉಸಿರಾಟದ ಸಮಸ್ಯೆ ಇದೆ
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ವಿತ್ ಆಕ್ಸಿಜನ್ ಬೇಕಾ? 7 ಸಾವಿರ ಸರ್.
ಪ್ರತಿನಿಧಿ: ವೆಂಟಿಲೇಟರ್ ಇದ್ರೆ?
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ವೆಂಟೀಲೆಟರ್ ಇದ್ರೆ 10 ಸಾವಿರ ಸರ್
ಖಾಸಗಿ ಅಂಬುಲೆನ್ಸ್ ಏಜೆನ್ಸಿ: ವೈಟಿಂಗ್ ಎಲ್ಲ ಅಂದ್ರೆ 500ರೂ. ಜಾಸ್ತಿ ಆಗುತ್ತೆ ಸರ್.

Click to comment

Leave a Reply

Your email address will not be published. Required fields are marked *