ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ತಡವಾಗಿ ಜ್ನಾನೋದಯವಾಗಿದೆ. ಕೊರೊನಾ ಜಾಸ್ತಿ ಆಗ್ತಿದ್ದಂತೆ ವ್ಯಾಕ್ಸಿನ್ ಪಡೆಯಲು ಮುಗಿಬಿದ್ದಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಕೊರೊನಾ ನಿಯಮವನ್ನೇ ಮರೆತಿದ್ದಾರೆ. ಮತ್ತೊಂದ್ಕಡೆ ಇಲ್ಲಿದ್ರೆ ಕೊರೊನಾ ಕಾಟ ತಪ್ಪಿದ್ದಲ್ಲ ಅಂತ ಮತ್ತೆ ಗುಳೆ ಹೊರಟಿದ್ದಾರೆ.
Advertisement
ಹೌದು. ಜನವರಿಯಿಂದಲೇ ಬನ್ನಿ ಮುಂದೆ ಬನ್ನಿ ಲಸಿಕೆ ಹಾಕಿಸಿಕೊಳ್ಳಿ ಅಂದ್ರೂ ಕೇಳೋರೇ ಇರಲಿಲ್ಲ. ಯಾರಿಗೆ ಬೇಕು ಲಸಿಕೆ ಅಂತ ಇಲ್ಲದ ನೆಪ ಹೇಳಿಕೊಂಡು ತಿರುಗಾಡ್ತಿದ್ದರು. ಇದೀಗ ಕೊರೊನಾ ಎರಡನೇ ಅಲೆ ಬೀಸ್ತಿದ್ದಾಗೆ ಜನ ತಾ ಮುಂದು ನಾ ಮುಂದು ಅಂತ ಈಗ ಲಸಿಕೆಗೆ ಮುಗಿ ಬಿದ್ದಿದ್ದಾರೆ. ಲಸಿಕೆ ಪಡೆಯೋವಾಗ ಮತ್ತೆ ಕೊರೊನಾ ನಿಯಮ ಮರೆತು ತಪ್ಪು ಮಾಡ್ತಿದ್ದಾರೆ. ಬೆಂಗಳೂರಿನ ಪ್ಯಾಲೆಸ್ ಗುಟ್ಟಹಳ್ಳಿ ವ್ಯಾಕ್ಸಿನ್ ಸೆಂಟರ್. ಫೋರ್ಟಿಸ್ ಆಸ್ಪತ್ರೆಯ ವ್ಯಾಕ್ಸಿನ್ ಸೆಂಟರ್ನಲ್ಲೂ ಸರತಿ ಸಾಲು ಹನುಮನ ಬಾಲದಂತಿತ್ತು.
Advertisement
Advertisement
ಇಲ್ಲಿ ಜನರಿಗೆ ಬುದ್ಧಿ ಹೇಳೋರು ಕೂಡ ಇಲ್ಲವಾಗಿದೆ. ವ್ಯಾಕಿನೇಷನ್ ಸಿಬ್ಬಂದಿ ಕೂಡ ಜನರಿಗೆ ಹೇಳಿ ಹೇಳಿ ಸಾಕಾಗಿ ಹೋದರೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಯಾವುದೇ ನಿಯಮಗಳಿಲ್ಲದೇ ಜನ ಲಸಿಕೆಗೆ ಮುಗಿ ಬಿದ್ದಿದ್ದಾರೆ. ಕೊರೊನಾ ರೂಲ್ಸ್ ಗಳನ್ನ ಬ್ರೇಕ್ ಮಾಡಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆದ ಬಳಿಕ ಅಬ್ಸರ್ವೇಷನ್ ರೂಂನಲ್ಲಿ ಕೆಲ ಹೊತ್ತು ಇರಬೇಕಾದ ಜನ ಅದನ್ನೂ ಮಾಡ್ತಿಲ್ಲ. ಸದ್ಯ ಈ ಕೊರೊನಾ ಕೈಯಿಂದ ತಪ್ಪಿಸಿಕೊಂಡ್ರೆ ಸಾಕು ಅಂತ ಲಸಿಕೆ ಹಾಕಿಸಿಕೊಂಡು ಮನೆ ಕಡೆ ಕಾಲು ಕೀಳ್ತಿದ್ದಾರೆ.
Advertisement
ಮತ್ತೆ ಗುಳೆ ಹೊರಟ ಬೆಂಗಳೂರು ಮಂದಿ!:
ಕೊರೊನಾ 2ನೇ ಅಲೆ ಆರ್ಭಟಕ್ಕೆ ಬೆಚ್ಚಿಬಿದ್ದ ಬೆಂಗಳೂರು ಮಂದಿ ಮತ್ತೆ ಗುಳೆ ಹೋಗ್ತಿದ್ದಾರೆ. ಕೊರೊನಾ ಬಂದ್ರೆ ಬೆಡ್ ಇಲ್ಲ. ಹುಷಾರು ತಪ್ಪಿ ಹೆಚ್ಚುಕಡಿಮೆ ಆದ್ರೆ ಆಕ್ಸಿಜನ್ ಕೊರತೆ. ಇಲ್ಲಿದ್ರೆ ಜೀವಕ್ಕೆ ಗ್ಯಾರೆಂಟಿ ಇಲ್ಲ ಅಂತ ಕೆಲ ಜನ ಮನೆ ಖಾಲಿ ಮಾಡಿಕೊಂಡು ಊರಿನತ್ತ ಹೊರಟಿದ್ದಾರೆ. ಕಾರು ಬೈಕ್ಗಳಲ್ಲಿ ಅಗತ್ಯ ವಸ್ತುಗಳ ಜೊತೆ ಪಯಣ ಬೆಳೆಸಿದ್ದಾರೆ. ಪರಿಣಾಮ ನೆಲಮಂಗಲದ ನವಯುಗ ಟೋಲ್ ಬಳಿ ಜನರ ದಂಡು ಕಂಡು ಬಂತು.