– ಧಾರಾವಿ ಬಗ್ಗೆ ಭಾರೀ ಮೆಚ್ಚುಗೆ
ಜಿನೆವಾ: ಕಳೆದ ಆರು ವಾರಗಳಿಂದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದರೂ, ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
"In ???????????????????????????????????????????????? & ???????? & even in Dharavi, a densely packed area in Mumbai, a strong focus on community engagement & the basics of testing, tracing, isolating & treating all those that are sick is key to breaking the chains of transmission & suppressing the virus"-@DrTedros
— World Health Organization (WHO) (@WHO) July 10, 2020
Advertisement
ಈ ಬಗ್ಗೆ ಮಾತನಾಡಿರುವ ಡಬ್ಲ್ಯೂಹೆಚ್ಒ ಮುಖ್ಯಸ್ಥ ಟೆಡ್ರೋಸ್, ಇಟಲಿ, ಸ್ಪೇನ್ ಹಾಗೂ ದಕ್ಷಿಣ ಕೊರಿಯಾದಲ್ಲಿ ಕೂಡ ಸ್ಲಂಗಳಿವೆ. ಅಲ್ಲಿ ಕೊರೊನಾ ವೈರಸ್ ಸೋಂಕು ಮಿತಿಮೀರಿ ಹರಡಿದೆ. ಆದರೆ ಮುಂಬೈನ ಧಾರಾವಿ ಸ್ಲಂನಲ್ಲಿ ಮಾತ್ರ ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಹೀಗೆ ಜಗತ್ತಿನಲ್ಲಿ ಕೆಲವೆಡೆ ಏಕಾಏಕಿ ಕೊರೊನಾ ಸೋಂಕಿನ ಸಂಖ್ಯೆ ಏರಿದ್ದರೂ, ಅದನ್ನು ಮತ್ತೆ ನಿಯಂತ್ರಣಕ್ಕೆ ತರಬಹುದೆಂಬ ಉದಾಹರಣೆಗಳು ಸಾಕಷ್ಟಿವೆ ಎಂದಿದ್ದಾರೆ.
Advertisement
Advertisement
ಮುಂಬೈನ ಧಾರಾವಿ ಸ್ಲಂನಲ್ಲಿ ಜನಸಂಖ್ಯೆ ಹೆಚ್ಚಿದ್ದು, ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿತ್ತು. ಹೀಗಾಗಿ ತಕ್ಷಣವೇ ಅಲ್ಲಿ ಟೆಸ್ಟಿಂಗ್, ಸಂಪರ್ಕದ ಮಾಹಿತಿ, ಐಸೋಲೇಷನ್ ಹಾಗೂ ಚಿಕಿತ್ಸೆ ನೀಡುವ ಮೂಲಕ ನಿಯಂತ್ರಣಕ್ಕೆ ತರಲಾಗಿದೆ.
Advertisement
ಇಡೀ ಜಗತ್ತಿನಲ್ಲಿ ಸುಮಾರು 555,000 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಚೀನಾದಲ್ಲಿ ಕಳೆದ ಡಿಸೆಂಬರ್ ನಿಂದ ಮತ್ತೆ ಸೋಂಕು ಹರಡಲು ಆರಂಭವಾಗಿದೆ.