– ಸವಿತಾ ಸಮಾಜದ ಮೂವರು ಸೇರಿ 31 ಮಂದಿಗೆ ಕೊರೊನಾ
ಹಾಸನ: ಕೊರೊನಾ ಸೋಂಕಿತನ ಜೊತೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದವರ ಆತಂಕ ದೂರವಾಗಿದೆ.
ಮಲ್ಲಿಪಟ್ಟಣದ ಸರ್ಕಾರಿ ಶಾಲೆಯ ಕೊಠಡಿ ನಂಬರ್ ಒಂದರಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನು. ಈ ಕೊಠಡಿಯಲ್ಲಿ ಒಟ್ಟು 19 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸೋಂಕಿತನನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಹಾಗೆ ಕೊಠಡಿಯಲ್ಲಿ ಆತನ ಜೊತೆಯಲ್ಲಿದ್ದ 19 ವಿದ್ಯಾರ್ಥಿ, ಓರ್ವ ಶಿಕ್ಷಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಬಂದ ವರದಿ ಎಲ್ಲರ ಆತಂಕವನ್ನು ದೂರ ಮಾಡಿದೆ.
Advertisement
Advertisement
ಹಾಸನದಲ್ಲಿ ಮಾತನಾಡಿದ ಡಿಎಚ್ಓ ಸತೀಶ್, ಸವಿತಾ ಸಮಾಜದ 3, ಹೊರ ರಾಜ್ಯದ 3, ಪೌರಕಾರ್ಮಿಕರು 5 ಮಂದಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಬಂದ ನಾಲ್ವರು, ಐವರು ಪೌರ ಕಾರ್ಮಿಕರು ಸೇರಿ 31 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ರು. ಹಾಸನದಲ್ಲಿ ಇದುವರೆಗೂ ಒಟ್ಟು 360 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 238 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 120 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದರು.
Advertisement
Advertisement
ಇಂದು 65 ವರ್ಷದ ವೃದ್ಧೆ ಹಾಸನದಲ್ಲಿ ಕೊರೊನಾದಿಂದ ಮೃತಪಟ್ಟಿದ್ದು, ಇದುವರೆಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಸಮುದಾಯಿಕ ಪರೀಕ್ಷೆ ಮತ್ತೆ ಮುಂದುವರೆಸಿದ್ದೇವೆ. ಪ್ರತಿದಿನ ಇಡೀ ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಮಂದಿಯ ಸ್ಯಾಂಪಲ್ ತೆಗೆಯಲಾಗುತ್ತಿದೆ ಎಂದು ಡಿಎಚ್ಓ ಸತೀಶ್ ಮಾಹಿತಿ ನೀಡಿದರು.