– 180ಕ್ಕೇರಿದ ಸಾವಿನ ಸಂಖ್ಯೆ
ಬೆಂಗಳೂರು: ಕೊರೊನಾ ಸೋಂಕಿನ ಕಾರಣದಿಂದ ರಾಜ್ಯದಲ್ಲಿ ಇಂದು 10 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸಾವನ್ನಪ್ಪಿದರ ಸಂಖ್ಯೆ 180ಕ್ಕೇರಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯ ಅನ್ವಯ, ಬೆಂಗಳೂರಿನಲ್ಲಿ 3, ಬಳ್ಳಾರಿ, ಬೀದರ್, ಬಾಗಲಕೋಟೆ, ಕಲಬುರಗಿ, ಶಿವಮೊಗ್ಗ, ಧಾರವಾಡ, ಕೋಲಾರದಲ್ಲಿ ತಲಾ ಒಂದು ಸಾವಿನ ಪ್ರಕರಣಗಳು ವರದಿಯಾಗಿದೆ. ಉಳಿದಂತೆ ಅನ್ಯ ಕಾರಣದಿಂದ ನಾಲ್ವರು ಸಾವನ್ನಪ್ಪಿದ್ದಾರೆ.
Advertisement
ರಾಜ್ಯದಲ್ಲಿ ಒಟ್ಟಾರೆ 178 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ಒಂದಲ್ಲೇ 123 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಸಾವನ್ನಪ್ಪಿದವರ ವಿವರ:
1) ರೋಗಿ 8,495: ಕೋಲಾರದ 43 ವರ್ಷದ ಮಹಿಳೆ. ದೆಹಲಿಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದರು. ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಜೂನ್ 19 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
Advertisement
2) ರೋಗಿ 8,753: ಧಾರವಾಡದ 42 ವರ್ಷದ ಪುರುಷ. ರೋಗಿ ಸಂಖ್ಯೆ 6,839ರ ಸಂಪರ್ಕ ಹೊಂದಿದ್ದರು. ಗಂಟಲು ನೋವಿನ ಸಮಸ್ಯೆಯಿಂದ ಜೂನ್ 20 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಜೂನ್ 24 ರಂದು ಸಾವನ್ನಪ್ಪಿದ್ದರು.
3) ರೋಗಿ 9,546: ಶಿವಮೊಗ್ಗದ 75 ವರ್ಷದ ವೃದ್ಧೆ. ಉಸಿರಾಟದ ಸಮಸ್ಯೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದವರನ್ನು ಜೂನ್ 20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆ ಕಾಡುತ್ತಿತ್ತು. ಜೂನ್ 22 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
4) ರೋಗಿ 10,173: ಬಾಗಲಕೋಟೆಯ 57 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದವರನ್ನು ಜೂನ್ 24ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
5) ರೋಗಿ 10,684: ಬೀದರ್ 71 ವರ್ಷದ ವೃದ್ಧ. ಕಂಟೈನ್ಮೆಂಟ್ ಝೋನ್ ಸಂಪರ್ಕ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 23 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
6) ರೋಗಿ 10,693: ಕಲಬುರಗಿಯ 55 ವರ್ಷದ ಪುರುಷ. ಬೀದರ್ ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ. ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಹಾಗೂ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 23 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 24 ರಂದು ಚಿಕಿತ್ಸೆ ಫಲಿಸದೆ ಸಾವನ್ನಪಿದ್ದರು.
7) ರೋಗಿ 10,729: ಬಳ್ಳಾರಿಯ 65 ವರ್ಷದ ವೃದ್ಧೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 25 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಸಾವನ್ನಪ್ಪಿದ್ದರು.
8) ರೋಗಿ 10,862: ಬೆಂಗಳೂರು ನಗರದ 45 ಪುರುಷ. ವಿಷಮ ಶೀತ ಜ್ವರ ಹಾಗೂ ಎದೆ ನೋವಿನಿಂದ ಬಳಲುತ್ತಿದ್ದರು. ಜೂನ್ 25 ರಂದು ಮನೆಯಲ್ಲೇ ಸಾವನ್ನಪ್ಪಿದ್ದರು.
9) ರೋಗಿ 10,979: ಬೆಂಗಳೂರಿನ 63 ವರ್ಷದ ವೃದ್ಧೆ. ಕೊರೊನಾ ಸೋಂಕಿನ ಲಕ್ಷಣಗಳಿಲ್ಲ. ಜೂನ್ 08 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್ 11 ರಂದು ಸಾವನ್ನಪ್ಪಿದ್ದರು. ಇವರ ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ.
10) ರೋಗಿ 10,983: ಬೆಂಗಳೂರಿನ 66 ವರ್ಷದ ವೃದ್ಧೆ. ಉಸಿರಾಟದ ಸಮಸ್ಯೆ, ಶೀತ ಹಾಗೂ ಯಕೃತ್ತಿನ ರೋಗದಿಂದ ಬಳಲುತ್ತಿದ್ದರು. ಜೂನ್ 3 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜೂನ್ 12 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.