– ಅನ್ಲಾಕ್ನಲ್ಲಿ ಎರಡು ಮಹತ್ವದ ಜವಾಬ್ದಾರಿಗಳಿವೆ
– ಕರ್ನಾಟಕ ಅಳಿಗುಳಿ ಬಗ್ಗೆ ಮೋದಿ ಮಾತು
– ರಾಜ್ಯದ ಕಾಮೇಗೌಡರ ಬಗ್ಗೆ ಮೆಚ್ಚುಗೆ
ನವದೆಹಲಿ: ಅನ್ಲಾಕ್ನಲ್ಲಿ ಎರಡು ಮಹತ್ವದ ಜವಾಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಎಂದು ಪ್ರಧಾನಿ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ 2020 ಸರಿ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಒಮ್ಮಲೇ ಎಲ್ಲ ಸಮಸ್ಯೆಗಳು ಎದುರಾಗುತ್ತಿದೆ. ಭೂಕಂಪಗಳು, ಸೈಕ್ಲೋನ್, ಕೊರೊನಾ ಸಾಲು ಸಾಲು ಸಮಸ್ಯೆ ಬರುತ್ತಿದೆ. ಹೀಗಾಗಿ ಈ ವರ್ಷ ಸರಿಯಾಗಿಲ್ಲ ಎನಿಸುತ್ತಿದೆ. ಆದರೆ ಹೀಗೆ ಭಾವಿಸಬಾರದು, ಸಮಸ್ಯೆಗಳು ಬರುತ್ತವೆ, ನಾವು ಅದನ್ನು ಎದುರಿಸಬೇಕು. ಹಿಂದೆಯೂ ಸಾಕಷ್ಟು ಸಮಸ್ಯೆಗಳನ್ನು ಭಾರತ ಎದುರಿಸಿದೆ. ದೇಶ ಇದನೆಲ್ಲ ಎದುರಿಸಿ ಮುಂದುವರಿಯುತ್ತಲೇ ಇದೆ. ಇದೇ ಭಾವನೆಯಲ್ಲಿ ಮುಂದುವರಿಬೇಕು. ಎಲ್ಲ ರೀತಿಯ ಅಪಾಯಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವುದು ಭಾರತ ಇತಿಹಾಸ. ನನಗೆ ದೇಶದ 13 ಕೋಟಿ ಜನರ ಮೇಲೆ ಅಚಲ ವಿಶ್ವಾಸವಿದೆ ಎಂದು ದೇಶದ ಜನರಿಗೆ ಧೈರ್ಯ ತುಂಬಿದರು.
Advertisement
There is a new and strong opportunity for our generation and our start-ups. We should present India's traditional games in a new and interesting form: Prime Minister Narendra Modi during his monthly radio programme #MannKiBaat (file photo) pic.twitter.com/ZCVHCMg6Bj
— ANI (@ANI) June 28, 2020
Advertisement
ಭಾರತಕ್ಕೆ ಗೆಳೆತನವನ್ನು ನಿಭಾಯಿಸಲು ಬರುತ್ತೆ. ಕಣ್ಣಲ್ಲಿ ಕಣ್ಣಿಟ್ಟು ಉತ್ತರ ಕೊಡುವ ಶಕ್ತಿಯೂ ಇದೆ. ಭಾರತದ ನೆಲದ ಮೇಲೆ ಕಣ್ಣಿಟ್ಟರೆ ಉತ್ತರ ಕೊಡದೆ ಬಿಡಲ್ಲ. ಶತ್ರುಗಳಿಗೆ ಸೂಕ್ತ ಪಾಠವನ್ನು ನಮ್ಮ ಸೈನಿಕರು ನೀಡುತ್ತಾರೆ. ಯೋಧರ ತ್ಯಾಗ ಮತ್ತು ಬಲಿದಾನವನ್ನು ಈ ದೇಶ ಮರೆಯುವುದಿಲ್ಲ. ಪುತ್ರರನ್ನು ಕಳೆದುಕೊಂಡ ಪೋಷಕರು ತಮ್ಮ ಇತರೇ ಮಕ್ಕಳು ಮೊಮ್ಮಕ್ಕಳನ್ನು ಸೇನೆಗೆ ಕಳುಹಿಸುವ ಸಂಕಲ್ಪ ಮಾಡಿದ್ದಾರೆ ಎಂದು ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಗ್ಗೆ ಮಾತನಾಡಿದರು.
Advertisement
ಭಾರತೀಯ ಸೇನೆಯಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಜನರ ಭಾಗವಹಿಸುವಿಕೆ ಇಲ್ಲದೇ ಅಭಿಯಾನವೊಂದು ಯಶಸ್ವಿಯಾಗದು. ಜನರು ದೇಶಿಯ ಉತ್ಪನ್ನಗಳನ್ನು ಖರೀದಿಸಬೇಕು. ಇದು ಒಂದು ರೀತಿಯ ದೇಶದ ಸೇವೆಯಾಗಲಿದೆ. ಅನ್ಲಾಕ್ನಲ್ಲಿ ಎರಡು ಮಹತ್ವದ ಜವಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸಿದಿದ್ದರೆ ನೀವೂ ಇತರಿಗೆ ಕಂಟಕವಾಗಲಿದ್ದೀರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಓಡಾಡುವುದು ಉತ್ತಮ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
Advertisement
Martyr Kundan Kumar's father from Bihar said that he will send his grandsons also to armed forces to protect the country. This is the spirit of every martyr's family. The sacrifice of these families is worth worshipping: PM Narendra Modi during #MannKiBaat (file photos) pic.twitter.com/fqZd1YpwZJ
— ANI (@ANI) June 28, 2020
ಕೊರೊನಾ ಸಂಕಷ್ಟ ಬಾರದಿದ್ದರೇ ಜೀವನದ ಬೆಲೆ ಅರಿವಾಗುತ್ತಿರಲಿಲ್ಲ. ಅಲ್ಲದೇ ಜೀವನ ಯಾಕೆ, ಏನು, ಹೇಗೆ ಅನ್ನೊ ಕಲ್ಪನೆಯೇ ನಮಗೆ ನೆನಪಿಗೆ ಬರುತ್ತಿರಲಿಲ್ಲ. ಈಗ ಜನರು ಕೊರೊನಾದಿಂದ ಜೀವನ ಪ್ರತಿ ಕ್ಷಣ ಖುಷಿಯಾಗಿದ್ದಾರೆ. ಕರ್ನಾಟಕ ಅಳಿಗುಳಿ ಮನೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸಾಂಪ್ರದಾಯಿಕ ಆಟ ಆಡುತ್ತಿದ್ದದ್ದಾರೆ. ಲಾಕ್ಡೌನ್ನಿಂದಾಗಿ ಸಣ್ಣ ಪುಟ್ಟ ಖುಷಿ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಈ ರೀತಿಯ ದೇಶಿಯ ಆಟಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡುತ್ತೇವೆ. ಮಕ್ಕಳು ಮನೆಯಲ್ಲಿರುವ ಅಜ್ಜ ಅಜ್ಜಿಯ ಜೊತೆ ಬೆರೆಯಿರಿ. ಅವರ ಹಳೆ ನೆನೆಪುಗಳನ್ನು ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಅವರ ಸಂದರ್ಶನವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ. ಇದು ನಮ್ಮ ಪುರಾತನ ಸಂಸ್ಕೃತಿ ಬಗ್ಗೆ ತಿಳಿಯಲು ಸಹಾಯವಾಗಲಿದೆ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
ಕರ್ನಾಟಕ ಮೂಲದ ಕಾಮೇಗೌಡ ಒಬ್ಬ ಸಾಮಾನ್ಯ ರೈತ. 80 ವರ್ಷದ ಕಾಮೇಗೌಡ 16 ಕೆರೆಗಳನ್ನು ತೊಡಿದಿದ್ದಾರೆ. ಇದು ಹಲವು ಜನರ ಬದುಕಿಗೆ ದಾರಿ ಮಾಡಿಕೊಟ್ಟಿದೆ. ಸ್ವತಃ ಕೆಲಸದ ಜೊತೆಗೆ ಸಾಮಾಜಿಕ ಸೇವೆ ಮಾಡುವ ಇಚ್ಛೆ ಕಾಮೇಗೌಡ ಹೊಂದಿದ್ದಾರೆ ಎಂದರು. ಹೀಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ವರ್ತಮಾನದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು. ಅಲ್ಲದೇ ಈ ಎಲ್ಲಾ ಸಂಕಷ್ಟಗಳನ್ನು ಮೀರಿ ಭಾರತ ಜಯ ಸಾಧಿಸಲಿದೆ ಎಂದು ಜನರಲ್ಲಿ ಭರವಸೆ ವ್ಯಕ್ತಪಡಿಸಿದರು.
Sharing this month’s #MannKiBaat. https://t.co/kRYCabENd5
— Narendra Modi (@narendramodi) June 28, 2020