ವಾಷಿಂಗ್ಟನ್: ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಬಲ್ಲ ಮಾನವ ವಂಶವಾಹಿಗಳನ್ನು ಭಾರತೀಯ ಮೂಲದ ಸಂಶೋಧನಾ ನೇತೃತ್ವದ ಅಮೆರಿಕದ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ.
Advertisement
ಭಾರತೀಯ ಮೂಲದ ಸುಮಿತ್ ಕೆ ಚಾಂದ್ ಅಮೆರಿಕದ ಸ್ಯಾನ್ಫೋರ್ಡ್ ಬರ್ನ್ ಹ್ಯಾಮ್ ಪ್ರೆಬಿಸ್ ಮೆಡಿಕಲ್ ಡಿಸ್ಕವರಿ ಇನ್ಸ್ಟಿಟ್ಯೂಟ್ನಲ್ಲಿ ಇಮ್ಯುನಿಟಿ ಮತ್ತು ಪ್ಯಾಥೋಜೆನೆಸಿಸ್ ಪ್ರೋಗ್ರಾಂನ ನಿದೇರ್ಶಕ ಹಾಗೂ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಂಡ ಕೊರೊನಾ ಸೋಂಕಿನ ಕುರಿತು ಈಗಾಗಲೇ ಅಧ್ಯಯನ ಮಾಡುತ್ತಿದ್ದು, ಇವರ ಅಧ್ಯಯನದ ಫಲವಾಗಿ ಕೊರೊನಾ ಸೋಂಕಿನ ಜೊತೆಗೆ ಹೋರಾಡುವ ಕೋವಿಡ್-19 ಎಸ್ಎಆರ್ಎಸ್-ಸಿಒವಿ-2 (SARS-CoV-2) ಎಂಬ ಮಾನವ ವಂಶವಾಹಿಗಳನ್ನು ಪತ್ತೆ ಹಚ್ಚಿದ್ದಾರೆ.
Advertisement
ವಿಜ್ಞಾನಿಗಳ ತಂಡದ ಅಧ್ಯಯನದ ಪ್ರಕಾರ ಸೋಂಕು ಬಂದ ಕೂಡಲೇ ವೈರಸ್ ಮಾನವನ ಶ್ವಾಸಕೋಶಗಳನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ವೈರಸ್ನ ಅಖಿಲೇಸ್ ಹೀಲ್ನ್ನು ಹುಡುಕುತ್ತಿದ್ದೇವೆ. ಇದು ಸಿಕ್ಕರೆ ನಾವು ಸೋಂಕಿನ ವಿರುದ್ಧ ಹೋರಾಡುವ ಆ್ಯಂಟಿ ವೈರಸ್ಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಮಾಧ್ಯಮಕ್ಕೆ ಸುಮಿತ್ ಕೆ ಚಾಂದ್ ತಿಳಿಸಿದ್ದಾರೆ.
Advertisement
Advertisement
ಈ ವೈರಲ್ ಸೋಂಕನ್ನು ನಿಯಂತ್ರಣ ಮಾಡಲು ಯಾವ ವಂಶವಾಹಿಗಳು ಸಹಾಯ ಮಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಈ ಸೋಂಕಿಗೆ ಸೂಕ್ತವಾದ ಚಿಕಿತ್ಸೆ ನೀಡುವ ಕ್ರಮದ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.
ಈಗಿನ ನಮ್ಮ ಅಧ್ಯಯನದ ಪ್ರಕಾರ 65 ಐಎಸ್ಜಿಗಳು ಎಸ್ಎಆರ್ಎಸ್-ಸಿಒವಿ-2 (SARS-CoV-2) ಸೋಂಕನ್ನು ನಿಯಂತ್ರಿಸುತ್ತದೆ ಎಂದು ತಿಳಿದು ಬಂದಿದ್ದು, ಸೋಂಕಿಗೆ ಲಸಿಕೆಯ ಪರಿಣಾಮ ಮತ್ತು ಯಾವರೀತಿ ನಿಯಂತ್ರಣ ಮಾಡಲು ಈ ವಂಶವಾಹಿಗಳು ಸಹಾಯ ಮಾಡುತ್ತವೆ ಎಂಬುದರ ಕುರಿತು ಮತ್ತೆ ಅಧ್ಯಯನ ಮುಂದುವರೆಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟ ನಿಲುವನ್ನು ನಿಮ್ಮ ಮುಂದೆ ಇಡುತ್ತೇವೆ ಎಂದು ಚಾಂದ್ ಭರವಸೆ ನೀಡಿದ್ದಾರೆ.