ಯಾದಗಿರಿ: ಮಾಹಾಮಾರಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಗೂ ಇದೀಗ ಕೋವಿಡ್ 19 ಒಕ್ಕರಿಸಿದೆ.
ಮಹಾರಾಷ್ಟ್ರ ವಲಸಿಗರಿಂದ ಈಗ ಅಂಗನವಾಡಿ ಸಹಾಯಕಿ ಸೇರಿ ಇಬ್ಬರು ಆಶಾ ಕಾರ್ಯಕರ್ತೆಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನಿನ್ನೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಮೂವರು ವಾರಿಯರ್ಸ್ ನಲ್ಲಿ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿತ್ತು. ಸದ್ಯ ಮೂವರು ಸೋಂಕಿತರನ್ನು ಕೊವೀಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
Advertisement
ಯಾದಗಿರಿ ನಗರದ ದುಖನವಾಡಿಯ ರೋಗಿ-7896 (34) ಅಂಗನವಾಡಿ ಸಹಾಯಕಿ, ಸುರಪುರನ ದಿವಳಗುಡ್ಡದ ರೋಗಿ-7894(38) ಆಶಾ ಕಾರ್ಯಕರ್ತೆ ಹಾಗೂ ಸುರಪುರ ತಾಲೂಕಿನ ಹೊಸಸಿದ್ದಾಪುರನ ರೋಗಿ-7895(36) ಆಶಾ ಕಾರ್ಯಕರ್ತೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದುಖನವಾಡಿಯಲ್ಲಿ ಇಬ್ಬರಿಗೆ ಕೊರೊನಾ ಪತ್ತೆಯಾಗಿತ್ತು.
Advertisement
Advertisement
ಸೋಂಕಿತರ ಜೊತೆ ಅಂಗನವಾಡಿ ಸಹಾಯಕಿ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಆಶಾ ಕಾರ್ಯಕರ್ತೆಯರಿಗೆ ಹೇಗೆ ಕೊರೊನಾ ವಕ್ಕರಿಸಿದೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕಲೆ ಹಾಕುತ್ತಿದ್ದಾರೆ. ಮೂವರು ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಹೊಂದಿದವರ ಬಗ್ಗೆ ಮಾಹಿತಿ ಹುಡುಕಾಡುತ್ತಿದ್ದಾರೆ. ಒಟ್ಟಿನಲ್ಲಿ ಮೂವರು ಕೊರೊನಾ ಸೈನಿಕರಿಗೆ ಕೊರೊನಾ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೊರೊನಾ ಸೈನಿಕರಿಗೆ ಆತಂಕ ಹೆಚ್ಚಾಗಿದೆ.